“ಸೂರ್ಯ ಟೀಮ್ ಇಂಡಿಯಾದಲ್ಲಿ ಇರಬೇಕಿತ್ತು’
Team Udayavani, Oct 29, 2020, 11:35 PM IST
ಅಬುಧಾಬಿ: ಆಸ್ಟ್ರೇಲಿಯ ಪ್ರವಾಸಗೈಯುವ ಭಾರತದ ಯಾವುದೇ ತಂಡದಲ್ಲಿ ಸ್ಥಾನ ಪಡೆಯದ ಸೂರ್ಯ ಕುಮಾರ್ ಯಾದವ್ ಬುಧವಾರದ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ತನ್ನ ತಾಕತ್ತು ಪ್ರದರ್ಶಿಸಿ ಆಯ್ಕೆಗಾರರಿಗೆ ಸವಾಲೆಸೆದಿದ್ದಾರೆ. ಜತೆಗೆ ಯಾದವ್ ಭಾರತ ತಂಡದಲ್ಲಿ ಇರಬೇಕಿತ್ತು ಎಂಬುದಾಗಿ ಮುಂಬೈ ತಂಡದ ಉಸ್ತುವಾರಿ ನಾಯಕ ಕೈರನ್ ಪೊಲಾರ್ಡ್ ಅಭಿಪ್ರಾಯಪಟ್ಟಿದ್ದಾರೆ.
“ಎರಡು ವಿಕೆಟ್ ಬೇಗನೇ ಬಿದ್ದಾಗ ಅಮೋಘ ಸ್ಟ್ರೈಕ್‌ರೇಟ್ ಮೂಲಕ ತಂಡವನ್ನು ಆಧರಿಸಿ ನಿಲ್ಲುವುದು ಸುಲಭವಲ್ಲ. ಆದರೆ ಸೂರ್ಯಕುಮಾರ್ ಇದನ್ನು ಸಾಧಿಸಿ ತೋರಿದ್ದಾರೆ. ಅವರು ಈಗಾಗಲೇ ಭಾರತ ತಂಡದಲ್ಲಿರಬೇಕಿತ್ತು’ ಎಂಬುದಾಗಿ ಪೊಲಾರ್ಡ್ ಹೇಳಿದರು.
ಫಿನಿಶಿಂಗ್‌ಗಾಗಿ ಕಾಯುತ್ತಿದ್ದೆ
ಇದೇ ವೇಳೆ ಪ್ರಕ್ರಿಯಿಸಿದ ಸೂರ್ಯಕುಮಾರ್ ಯಾದವ್, “ನಾನು ಪರಿಪೂರ್ಣ ಫಿನಿಶಿಂಗ್‌ಗಾಗಿ ಕಾಯುತ್ತಿದ್ದೆ. ಇದು ಹೇಗೆ ಸಾಧ್ಯವಾಗಲಿದೆ ಎಂಬ ಬಗ್ಗೆ ಯೋಚಿಸುತ್ತಿದ್ದೆ. ನನ್ನ ಆಟದ ಬಗ್ಗೆಯೇ ನಾನು ಪರಿಪೂರ್ಣವಾಗಿ ತಿಳಿದುಕೊಳ್ಳಬೇಕಿತ್ತು. ಮೆಡಿಟೇಶನ್, ನನ್ನೊಂದಿಗೇ ಸಮಯ ಕಳೆದುದರಿಂದ ಕ್ರೀಸ್‌ನಲ್ಲಿ ಬಹಳ ಹೊತ್ತು ನಿಲ್ಲುವಂತಾಯಿತು’ ಎಂದರು.
ಚಹಲ್ ಎಸೆತಗಳನ್ನು ಕವರ್ ವಿಭಾಗದ ಮೇಲಿನಿಂದ ಬಾರಿಸಿದ್ದು, ಸ್ಟೇನ್ ಎಸೆತಗಳಿಗೆ ಬ್ಯಾಕ್-ಫುಟ್ ಡ್ರೈವ್ ಟಚ್ ನೀಡಿದ್ದೆಲ್ಲ ಸೂರ್ಯಕುಮಾರ್ ಅವರ ಆಕರ್ಷಕ ಬ್ಯಾಟಿಂಗಿಗೆ ಸಾಕ್ಷಿಯಾಗಿತ್ತು. ಕೇವಲ 43 ಎಸೆತ ಎದುರಿಸಿದ ಯಾದವ್, ಅಜೇಯ 79 ರನ್ ಬಾರಿಸಿ ಮುಂಬೈ ಗೆಲುವಿನ ರೂವಾರಿಯಾದರು. ಈ ಪಂದ್ಯಶ್ರೇಷ್ಠ ಆಟದಲ್ಲಿ 10 ಬೌಂಡರಿ, 3 ಸಿಕ್ಸರ್ ಒಳಗೊಂಡಿತ್ತು.
ಇಂಥ ಸ್ಟೈಲಿಶ್ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗದಿರುವ ಬಗ್ಗೆ ಎಲ್ಲ ದಿಕ್ಕುಗಳಿಂದಲೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಯಾದವ್ ವಯಸ್ಸೇ ಇದಕ್ಕೆ ಅಡ್ಡಿಯಾಗಿರುವ ಸಾಧ್ಯತೆ ಇಲ್ಲದಿಲ್ಲ. ಈಗಾಗಲೇ ಅವರಿಗೆ 30 ವರ್ಷ ಪೂರ್ತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.