Bumrah ಎಸೆತಕ್ಕೆ ಸ್ವೀಪ್ ಶಾಟ್: ಅಶುತೋಷ್ ಶರ್ಮ ಫುಲ್ ಖುಷ್
Team Udayavani, Apr 20, 2024, 12:15 AM IST
ಮುಲ್ಲಾನ್‌ಪುರ್: “ಜಸ್‌ಪ್ರೀತ್ ಬುಮ್ರಾ ಎಸೆತವನ್ನು ಸ್ವೀಪ್ ಮಾಡಿ ಬೌಂಡರಿ ಬಾರಿಸುವುದು ನನ್ನ ಬಹು ದೊಡ್ಡ ಕನಸಾಗಿತ್ತು’ ಎಂದಿದ್ದಾರೆ ಅಶುತೋಷ್ ಶರ್ಮ. ಗುರುವಾರ ರಾತ್ರಿಯ ಬ್ಯಾಟಿಂಗ್ ಅಬ್ಬರದ ವೇಳೆ ಅವರು ತಮ್ಮ ಈ ಕನಸನ್ನೂ ಸಾಕಾರಗೊಳಿಸಿದರು. ಆದರೆ ಇದು ಫೋರ್ ಅಲ್ಲ, ಸಿಕ್ಸರ್ ಆಗಿತ್ತು!
“ಬುಮ್ರಾ ವಿಶ್ವದ ಸರ್ವಶ್ರೇಷ್ಠ ಬೌಲರ್. ಯಾರ್ಕರ್ ಸ್ಪೆಷಲಿಸ್ಟ್. ಅವರ ಎಸೆತಕ್ಕೆ ಸ್ವೀಪ್ ಶಾಟ್ ಹೊಡೆಯುವುದು ನನ್ನ ಕನಸಾಗಿತ್ತು. ಇದರಲ್ಲಿ ನಾನಿಂದು ಯಶಸ್ವಿಯಾದೆ’ ಎಂಬುದಾಗಿ ಅಶುತೋಷ್ ಅತ್ಯಂತ ಖುಷಿಯಿಂದ ಹೇಳಿದರು.
ಅದೊಂದು ಫ್ರೀ ಹಿಟ್ ಶಾಟ್ ಆಗಿತ್ತು. ಪಂದ್ಯದ 13ನೇ ಓವರ್ ಎಸೆಯಲು ಬಂದ ಬುಮ್ರಾ ಅವರ 5ನೇ ಎಸೆತ ನೋಬಾಲ್ ಆಗಿದ್ದ ಕಾರಣ ಅಶುತೋಷ್ ದೊಡ್ಡ ಹೊಡೆತಕ್ಕೆ ಹೊಂಚುಹಾಕಿ ನಿಂತಿದ್ದರು. ಬುಮ್ರಾ ಯಾರ್ಕರ್ ಎಸೆದರೂ ಇದನ್ನು ಸಂಪೂರ್ಣವಾಗಿ ಬ್ಯಾಟ್ ಮೇಲೆ ತಂದುಕೊಂಡ ಅಶುತೋಷ್ ಭರ್ಜರಿಯಾಗಿ ಸಿಕ್ಸರ್‌ಗೆ ಬಡಿದಟ್ಟಿದರು!
ಪಾಂಡ್ಯ ಪ್ರಶಂಸೆ
“ನಮಗೆ ಬೆದರಿಕೆಯೊಡ್ಡಿ ಒತ್ತಡವನ್ನು ಹೆಚ್ಚಿಸಿದ ಅಶುತೋಷ್ ಶರ್ಮ ಓರ್ವ ಅಸಾಮಾನ್ಯ ಆಟ ಗಾರ’ ಎಂಬುದಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪ್ರಶಂಸಿಸಿದ್ದಾರೆ.
“ಅಶುತೋಷ್ ನಂಬಲಾಗದ ರೀತಿಯಲ್ಲಿ ಬ್ಯಾಟಿಂಗ್ ನಡೆಸಿದರು. ಬ್ಯಾಟ್‌ನ ಮಧ್ಯಭಾಗ ದಿಂದ ಚೆಂಡನ್ನು ಹಿಟ್ ಮಾಡುವುದು ಇವರ ಆಟದ ಹೆಚ್ಚುಗಾರಿಕೆ. ಇವರಿಗೆ ಖಂಡಿತ ಉಜ್ವಲ ಭವಿಷ್ಯವಿದೆ’ ಎಂಬುದಾಗಿ ಪಾಂಡ್ಯ ಹೇಳಿದರು.
ಗುರುವಾರ ರಾತ್ರಿ ತವರಿನ ಅಂಗಳದಲ್ಲಿ ಮುಂಬೈ ವಿರುದ್ಧ 193 ರನ್ ಗಳಿಸಬೇಕಿದ್ದ ಪಂಜಾಬ್ 14 ರನ್ನಿಗೆ 4 ವಿಕೆಟ್ ಕಳೆದುಕೊಂಡಾಗಲೇ ಸೋಲನ್ನು ಖಾತ್ರಿಗೊಳಿಸಿತ್ತು. ಬಳಿಕ 77ಕ್ಕೆ 6 ವಿಕೆಟ್, 111ಕ್ಕೆ 7 ವಿಕೆಟ್ ಬಿತ್ತು. ಮುಂಬೈ ಗೆಲುವಿನ ಕ್ಷಣಗಣನೆ ಯಲ್ಲಿತ್ತು. ಆದರೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಅಶುತೋಷ್ ಶರ್ಮ ಬೇರೆಯೇ ಸ್ಕೆಚ್ ಹಾಕಿಕೊಂಡಂತಿತ್ತು.
ಪಂಜಾಬ್ ಸರದಿ ಯಲ್ಲೇ ಸರ್ವಾಧಿಕ 61 ರನ್ ಮಾಡಿದರು. ಎದುರಿಸಿದ್ದು 28 ಎಸೆತ, ಸಿಡಿಸಿದ್ದು 7 ಸಿಕ್ಸರ್ ಮತ್ತು 2 ಫೋರ್. ಅವರು ಕೊನೆಯ ತನಕ ಕ್ರೀಸ್‌ನಲ್ಲಿದ್ದದ್ದೇ ಆದರೆ ಪಂಜಾಬ್ ರೋಚಕ ಗೆಲುವು ಕಾಣುವುದರಲ್ಲಿ ಅನುಮಾನವೇ ಇರಲಿಲ್ಲ!
ಹಾರ್ದಿಕ್‌ಗೆ 12 ಲಕ್ಷ ರೂ. ದಂಡ
ಪಂಜಾಬ್ ಕಿಂಗ್ಸ್ ವಿರುದ್ಧ 9 ರನ್ ರೋಚಕ ಗೆಲುವು ಸಾಧಿಸಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಭಾರೀ ದಂಡದ ಬರೆ ಬಿದ್ದಿದೆ. ಓವರ್ ರೇಟ್ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಸಕ್ತ ಸೀಸನ್‌ನಲ್ಲಿ ಮುಂಬೈಗೆ ಬಿದ್ದ ಮೊದಲ ದಂಡದ ಬರೆ ಇದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.