ಕ್ವಾರ್ಟರ್ ಫೈನಲ್‌ಗೆ ಸಿಂಧು
Team Udayavani, Mar 5, 2021, 7:10 AM IST
ಹೊಸದಿಲ್ಲಿ: ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಿ.ವಿ. ಸಿಂಧು, ಕೆ. ಶ್ರೀಕಾಂತ್, ಅಜಯ್ ಜಯರಾಮ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಸೈನಾ ನೆಹ್ವಾಲ್, ಪಿ. ಕಶ್ಯಪ್ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದರು.
ವಿಶ್ವ ಚಾಂಪಿಯನ್ ಸಿಂಧು ಅಮೆರಿಕದ ಐರಿಸ್ ವಾಂಗ್ ವಿರುದ್ಧ 21-13, 21-14 ಅಂತರದ ಸುಲಭ ಜಯ ಗಳಿಸಿದರು. ಆದರೆ ಸೈನಾ ನೆಹ್ವಾಲ್ 58 ನಿಮಿಷಗಳ ಹೋರಾಟದ ಬಳಿಕ ಥಾಯ್ಲೆಂಡಿನ ಫಿತಾಯಪೊರ್ನ್ ಚೈವಾನ್ ವಿರುದ್ಧ 15-21, 10-21 ಅಂತರದಿಂದ ಎಡವಿದರು.
ಕೆ. ಶ್ರೀಕಾಂತ್ ಫ್ರಾನ್ಸ್‌ನ ಥಾಮಸ್ ರೌಕ್ಸೆಲ್ ಅವರನ್ನು 21-10, 14-21, 21-14 ಅಂತರದಿಂದ, ಅಜಯ್ ಜಯರಾಮ್ ಡೆನ್ಮಾರ್ಕ್‌ನ ರಾಸ್ಮಸ್ ಜೆಮ್ಕೆ ಅವರನ್ನು 21-18, 17-21, 21-13 ಅಂತರದಿಂದ ಪರಾಭವಗೊಳಿಸಿದರು.
ಮಿಶ್ರ ಡಬಲ್ಸ್ ದ್ವಿತೀಯ ಸುತ್ತಿನಲ್ಲಿ ಅಶ್ವಿನಿ-ಸಾತ್ವಿಕ್ ಇಂಡೋನೇಶ್ಯನ್ ಜೋಡಿ ವಿರುದ್ಧ 21-18, 21-16 ಅಂತರದಿಂದ ಗೆದ್ದು ಬಂದರು.
ಸೌರಭ್‌ಗೆ ಸೋಲು :
ಸೌರಭ್ ವರ್ಮ ಥಾಯ್ಲೆಂಡಿನ ಕುನ್ಲಾವುತ್ ವಿದಿಸರ್ನ್ ವಿರುದ್ಧ 17-21, 14-21 ಅಂತರದಿಂದ ಪರಾಭವಗೊಂಡರು. ಪಿ. ಕಶ್ಯಪ್ ಅವರನ್ನು ಸ್ಪೇನಿನ ಪಾಬ್ಲೊ ಆ್ಯಬಿಯನ್ 21-16, 21-12ರಿಂದ ಕೆಡವಿದರು. ಪುರುಷರ ಡಬಲ್ಸ್‌ನಲ್ಲಿ ಎಂ.ಆರ್. ಅರ್ಜುನ್-ಧ್ರುವ ಕಪಿಲ ರಶ್ಯದ ವ್ಲಾದಿಮಿರ್ ಇವಾನೋವ್-ಇವಾನ್ ಸೊಜೊನೋವ್ ವಿರುದ್ಧ 16-21, 18-21 ಅಂತರದ ಸೋಲನುಭವಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.