ಸ್ವಿಸ್ ಓಪನ್ ಬ್ಯಾಡ್ಮಿಂಟನ್:ಭಾರತೀಯರಿಗೆ ಮತ್ತೂಂದು ಅಗ್ನಿಪರೀಕ್ಷೆ
Team Udayavani, Mar 12, 2019, 1:05 AM IST
ಬಾಸೆಲ್: “ಆಲ್ ಇಂಗ್ಲೆಂಡ್ ಓಪನ್’ ಬ್ಯಾಡ್ಮಿಂಟನ್ ಕೂಟದಿಂದ ಬರಿಗೈಯಲ್ಲಿ ಹಿಂದಿರುಗಿದ ಭಾರತದ ತಾರೆಗಳಿಗೆ ಮತ್ತೂಮ್ಮೆ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವ ಅವಕಾಶ ದೊರಕಿದೆ. ಮಂಗಳವಾರದಿಂದ ಆರಂಭವಾಗಿರುವ “ಸ್ವಿಸ್ ಓಪನ್’ ಬ್ಯಾಡ್ಮಿಂಟನ್ ಕೂಟದಲ್ಲಿ ಇವರು ಅಗ್ನಿಪರೀಕ್ಷೆಗೆ ಒಳಗಾಗಲಿದ್ದಾರೆ.
2 ಬಾರಿಯ “ಸ್ವಿಸ್ ಓಪನ್’ ಚಾಂಪಿಯನ್ ಸೈನಾ ನೆಹ್ವಾಲ್ ಮತ್ತು ಹಾಲಿ ಚಾಂಪಿಯನ್ ಸಮೀರ್ ವರ್ಮ ಕಣಕ್ಕಿಳಿಯಲಿದ್ದು, ಆಲ್ ಇಂಗ್ಲೆಂಡ್ ಕೂಟದ ವೈಫಲ್ಯವನ್ನು ಮೆಟ್ಟಿ ನಿಲ್ಲಬೇಕಿದೆ. ಆದರೆ ಮತ್ತೋರ್ವ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಈ ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಪ್ರಶಸ್ತಿ ಉಳಿಸಿಕೊಳ್ಳುವರೇ ಸಮೀರ್?
2018ರಲ್ಲಿ ಡೆನ್ಮಾರ್ಕ್‌ನ ಜಾನ್ ಜಾರ್ಜ್‌ಸನ್ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದ ಸಮೀರ್ ವರ್ಮ ಇದನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದ್ದಾರೆ. ಕಳೆದ ವರ್ಷ ಸಮೀರ್ ಹಾಲಿ ನಂ. ವನ್ ಆಟಗಾರ ಜಪಾನಿನ ಕೆಂಟೊ ಮೊಮೊಟ ಅವರನ್ನು ಸೆಮಿಫೈನಲ್‌ನಲ್ಲಿ ಸೋಲಿಸಿದ್ದರು. 8ನೇ ಶ್ರೇಯಾಂಕಿತ ಸಮೀರ್ ವರ್ಮ ಮೊದಲ ಪಂದ್ಯದಲ್ಲಿ ಅರ್ಹತಾ ಆಟಗಾರನನ್ನು ಎದುರಲಿಸದ್ದಾರೆ. ಕಳೆದ ತಿಂಗಳು ಹಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್ ವೇಳೆ ಗಾಯಾಳಾದ ಸಹೋದರ ಸೌರಭ್ ವರ್ಮ ಈ ಕೂಟದಿಂದ ಹಿಂದೆ ಸರಿದಿದ್ದಾರೆ.
ಉಳಿದಂತೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೈನಾ ಪತಿ ಪಾರುಪಳ್ಳಿ ಕಶ್ಯಪ್ ಮೊದಲ ಸುತ್ತಿನಲ್ಲಿ ಅರ್ಹತಾ ಆಟಗಾರನನ್ನು ಎದುರಿಸುವರು. ಬಿ. ಸಾಯಿ ಪ್ರಣೀತ್‌ಗೆ ಇಂಗ್ಲೆಂಡಿನ ರಾಜೀವ್ ಔಸೆಫ್ ಮುಖಾಮುಖೀಯಾಗಲಿದ್ದಾರೆ. ಶುಭಂಕರ್ ಡೇ ಕೂಡ ಸ್ಪರ್ಧಿಸುತ್ತಿದ್ದು, ಮೊದಲ ಪಂದ್ಯದಲ್ಲಿ ಅರ್ಹತಾ ಆಟಗಾರನನ್ನು ಎದುರಿಸಲಿದ್ದಾರೆ.
ಪ್ರಶಸ್ತಿ ಗೆಲ್ಲುವರೇ ಸೈನಾ?
ಇಂಡೋನೇಶ್ಯ ಮಾಸ್ಟರ್ ಫೈನಲ್‌ನಲ್ಲಿ ಕ್ಯಾರೋಲಿನಾ ಮರಿನ್ ನಿವೃತ್ತಿ ಹೇಳಿದ ಕಾರಣ ಪಂದ್ಯ ಗೆಲ್ಲದೇ ಚಾಂಪಿಯನ್ ಎನಿಸಿಕೊಂಡ ಸೈನಾ ಈ ಋತುವಿನ ಮತ್ತೂಂದು ಪ್ರಶಸ್ತಿಯ ಹುಡುಕಾಟದಲ್ಲಿದ್ದಾರೆ. ಕೂಟದ ಮೊದಲ ಪಂದ್ಯದಲ್ಲಿ 3ನೇ ಶ್ರೇಯಾಂಕಿತೆ ಸೈನಾ ಅರ್ಹತಾ ಆಟಗಾರ್ತಿಯನ್ನು ಎದುರಿಸುವರು. ಸೈನಾ ಹೊರತುಪಡಿಸಿ ವನಿತಾ ಸಿಂಗಲ್ಸ್‌ನಲ್ಲಿ ವೈಷ್ಣವಿ ಜಕ್ಕಾ ರೆಡ್ಡಿ ಭಾಗವಹಿಸಲಿದ್ದಾರೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಅರ್ಜುನ್ ಎಂ.ಆರ್.-ರಾಮ್‌ಚಂದ್ರನ್ ಶ್ಲೋಕ್, ಮನು ಅತ್ರಿ-ಬಿ. ಸುಮೀತ್ ರೆಡ್ಡಿ ಜೋಡಿ ಸ್ಪರ್ಧಿಸಿದರೆ, ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಭಾಗವಹಿಸಲಿದ್ದಾರೆ. ಮಿಕ್ಸೆಡ್ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಜೋಪ್ರಾ-ಎನ್. ಸಿಕ್ಕಿ ರೆಡ್ಡಿ , ಅರ್ಜುನ್ ಎಂ.ಆರ್.-ಮನೀಷಾ ಕೆ.; ಧ್ರುವ್ ಕಪಿಲ-ಕುಹೂ ಗರ್ಗ್ ಪಾಲ್ಗೊಳ್ಳಲಿದ್ದಾರೆ. ಇದೇ ವಿಭಾಗದ ಅರ್ಹತಾ ಸುತ್ತಿನಲ್ಲಿ ರಿಯಾ ಮುಖರ್ಜಿ-ವೃಶಾಲಿ ಗುಮ್ಮಡಿ ಆಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.