ಸ್ಪಿನ್‌ ಭೀತಿಗೆ ಸಿಲುಕಿದ ಆಸ್ಟ್ರೇಲಿಯ

Team Udayavani, Jan 5, 2019, 11:00 PM IST

ap152019000006b.jpg

ಸಿಡ್ನಿ: ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ನಿರೀಕ್ಷೆಯಂತೆ ಮೇಲುಗೈ ಉಳಿಸಿಕೊಂಡಿರುವ ಭಾರತ, ಸರಣಿ ಜಯಭೇರಿ ಮೊಳಗಿಸುವುದು ಖಚಿತಗೊಂಡಿದೆ. ಇದನ್ನು 3-1 ಅಂತರದಿಂದ ವಶಪಡಿಸಿಕೊಳ್ಳುವುದು ಕೊಹ್ಲಿ ಪಡೆಯ ಯೋಜನೆಯಾಗಿದ್ದು, ಹವಾಮಾನ ಸಹಕರಿಸಿದರೆ ಇದು ಅಸಾಧ್ಯವೇನಲ್ಲ.

ಟೆಸ್ಟ್‌ ಪಂದ್ಯದ 3ನೇ ದಿನವಾದ ಶನಿವಾರದ ಕೊನೆಯಲ್ಲಿ ಮಂದ ಬೆಳಕು ಹಾಗೂ ಮಳೆಯಿಂದ ಆಟ ಬೇಗನೇ ಕೊನೆಗೊಂಡಾಗ ಆಸ್ಟ್ರೇಲಿಯ 6 ವಿಕೆಟಿಗೆ 236 ರನ್‌ ಗಳಿಸಿ ಪರದಾಡುತ್ತಿತ್ತು. ಸುಮಾರು 16 ಓವರ್‌ಗಳಷ್ಟು ಆಟ ನಷ್ಟವಾಗಿದೆ.

ಇನ್ನೂ 386 ರನ್‌ ಹಿನ್ನಡೆ
ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟಿಗೆ 622 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತ್ತು. ಇನ್ನೂ 2 ದಿನಗಳ ಆಟ ಬಾಕಿ ಇದ್ದು, 386 ರನ್ನುಗಳಷ್ಟು ಹಿಂದಿರುವ ಆಸ್ಟ್ರೇಲಿಯ ಫಾಲೋಆನ್‌ಗೆ ಸಿಲುಕುವ ಸಾಧ್ಯತೆ ಇಲ್ಲದಿಲ್ಲ. ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಈಗಾಗಲೇ ಅಪಾಯಕಾರಿಯಾಗಿ ಗೋಚರಿಸಿರುವುದು ಕಾಂಗರೂಗಳಿಗೆ ಕಂಟಕವಾಗಿ ಪರಿಣಮಿಸಿದೆ. ಇವರೊಂದಿಗೆ ರವೀಂದ್ರ ಜಡೇಜ ಕೂಡ ಕೈಚಳಕ ತೋರಲಾರಂಭಿಸಿದ್ದಾರೆ. ಕುಲದೀಪ್‌ 3, ಜಡೇಜ 2 ವಿಕೆಟ್‌ ಕಿತ್ತು ಆತಿಥೇಯರಿಗೆ ಸ್ಪಿನ್‌ ಬಿಸಿ ಮುಟ್ಟಿಸಿದ್ದು, ಮುಂದಿನೆರಡು ದಿನಗಳ ಕಾಲ ಸಿಡ್ನಿ ಟ್ರ್ಯಾಕ್‌ ಹೆಚ್ಚಿನ ತಿರುವು ಪಡೆಯುವ ಎಲ್ಲ ಸಾಧ್ಯತೆ ಇದೆ. ಹೀಗಾಗಿ ಭಾರತದ ಗೆಲುವನ್ನು ಧಾರಾಳವಾಗಿ ನಿರೀಕ್ಷಿಸಬಹುದು.

ಆಸ್ಟ್ರೇಲಿಯದ 6 ವಿಕೆಟ್‌ 198 ರನ್ನುಗಳಿಗೆ ಉದುರಿತ್ತು. ಆದರೆ 7ನೇ ವಿಕೆಟಿಗೆ ಜತೆಗೂಡಿದ ಪೀಟರ್‌ ಹ್ಯಾಂಡ್ಸ್‌ಕಾಂಬ್‌ (ಬ್ಯಾಟಿಂಗ್‌ 28) ಮತ್ತು ಪ್ಯಾಟ್‌ ಕಮಿನ್ಸ್‌ (ಬ್ಯಾಟಿಂಗ್‌ 25) ಸೇರಿಕೊಂಡು ಸಣ್ಣದೊಂದು ಹೋರಾಟ ಸಂಘಟಿಸಿದ್ದಾರೆ. 14 ಓವರ್‌ ನಿಭಾಯಿಸಿರುವ ಇವರು 38 ರನ್‌ ಒಟ್ಟುಗೂಡಿಸಿದ್ದಾರೆ. ಆಸೀಸ್‌ ಪಾಲಿಗೆ 4ನೇ ದಿನದಾಟದಲ್ಲಿ ಇವರಿಬ್ಬರ ಜತೆಯಾಟ ನಿರ್ಣಾಯಕ. ಆದರೂ ಆತಿಥೇಯರು ಭಾರೀ ಹಿನ್ನಡೆಗೆ ಸಿಲುಕುವುದರಲ್ಲಿ ಅನುಮಾನವಿಲ್ಲ.

ಹ್ಯಾರಿಸ್‌ ಭರವಸೆಯ ಆರಂಭ
ಆಸ್ಟ್ರೇಲಿಯ ವಿಕೆಟ್‌ ನಷ್ಟವಿಲ್ಲದೆ 24 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಮಾರ್ಕಸ್‌ ಹ್ಯಾರಿಸ್‌-ಉಸ್ಮಾನ್‌ ಖ್ವಾಜಾ ಭರ್ತಿ 22 ಓವರ್‌ ನಿಭಾಯಿಸಿ 72 ರನ್‌ ಜತೆಯಾಟ ನಿಭಾಯಿಸಿದರು. ವನ್‌ಡೌನ್‌ನಲ್ಲಿ ಬಂದ ಮಾರ್ನಸ್‌ ಲಬುಶೇನ್‌ ಕೂಡ ಭರವಸೆಯ ಆಟವಾಡಿದರು. ಸ್ಕೋರ್‌ ಒಂದೇ ವಿಕೆಟಿಗೆ 128ರ ತನಕ ಏರಿತು. ಆಗ ಇದು ಆಸೀಸ್‌ನ ದೊಡ್ಡ ಮೊತ್ತಕ್ಕೆ ಬುನಾದಿ ಆದೀತು ಎಂಬ ನಿರೀಕ್ಷೆ ಮೂಡಿತ್ತು. ಆದರೆ 43ನೇ ಓವರಿನಿಂದ ಭಾರತೀಯ ಬೌಲರ್‌ಗಳ ಕೈ ಮೇಲಾಯಿತು; ತೀವ್ರ ಒತ್ತಡಕ್ಕೆ ಸಿಲುಕಿದ ಕಾಂಗರೂ ಕುಸಿಯತೊಡಗಿತು. 70 ರನ್‌ ಅಂತರದಲ್ಲಿ ಆತಿಥೇಯರ 5 ವಿಕೆಟ್‌ ಉಡಾಯಿಸುವ ಮೂಲಕ ಭಾರತ ತಿರುಗಿ ಬಿತ್ತು.

ಓಪನರ್‌ ಮಾರ್ಕಸ್‌ ಹ್ಯಾರಿಸ್‌ ಜವಾಬ್ದಾರಿಯುತ ಆಟವಾಡಿ 79 ರನ್‌ ಮಾಡಿದರು. ಇದು ಆಸೀಸ್‌ ಸರದಿಯ ಟಾಪ್‌ ಸ್ಕೋರ್‌ ಆಗಿದೆ. 43ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಹ್ಯಾರಿಸ್‌ 120 ಎಸೆತಗಳಿಗೆ ಜವಾಬಿತ್ತು 8 ಬೌಂಡರಿ ಹೊಡೆದರು. ಆರಂಭಿಕನಾಗಿ ಭಡ್ತಿ ಪಡೆದ ಉಸ್ಮಾನ್‌ ಖ್ವಾಜಾ ಗಳಿಕೆ 71 ಎಸೆತಗಳಿಂದ 27 ರನ್‌. 22ನೇ ಓವರಿನಲ್ಲಿ ಕುಲದೀಪ್‌ ಈ ಜೋಡಿಯನ್ನು ಬೇರ್ಪಡಿಸಿ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು.

ಆದರೆ ಶಾನ್‌ ಮಾರ್ಷ್‌ ವೈಫ‌ಲ್ಯ ಮುಂದುವರಿಯಿತು. ಕೇವಲ 8 ರಮ್‌ ಮಾಡಿದ ಅವರು ಜಡೇಜ ಮೋಡಿಗೆ ಸಿಲುಕಿದರು. ಹ್ಯಾರಿಸ್‌ ಮತ್ತು ಮಾರ್ಷ್‌ ಅವರನ್ನು ಜಡೇಜ 16 ರನ್‌ ಅಂತರದಲ್ಲಿ ಪೆವಿಲಿಯನ್ನಿಗೆ ಅಟ್ಟಿದರು.

ಟ್ರ್ಯಾವಿಸ್‌ ಹೆಡ್‌ (20) ಮತ್ತು ನಾಯಕ ಟಿಮ್‌ ಪೇನ್‌ (5) ಅವರಿಗೆ ಕುಲದೀಪ್‌ ಕಂಟಕವಾಗಿ ಪರಿಣಮಿಸಿದರು. ಲಬುಶೇನ್‌ ವಿಕೆಟ್‌ ಶಮಿ ಪಾಲಾಯಿತು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌: 7 ವಿಕೆಟಿಗೆ ಡಿಕ್ಲೇರ್‌ 622
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌
ಮಾರ್ಕಸ್‌ ಹ್ಯಾರಿಸ್‌    ಬಿ ಜಡೇಜ    79
ಉಸ್ಮಾನ್‌ ಖ್ವಾಜಾ    ಸಿ ಪೂಜಾರ ಬಿ ಕುಲದೀಪ್‌    27
ಮಾರ್ನಸ್‌ ಲಬುಶೇನ್‌    ಸಿ ರಹಾನೆ ಬಿ ಶಮಿ    38
ಶಾನ್‌ ಮಾರ್ಷ್‌    ಸಿ ರಹಾನೆ ಬಿ ಜಡೇಜ    8
ಟ್ರ್ಯಾವಿಸ್‌ ಹೆಡ್‌    ಸಿ ಮತ್ತು ಬಿ ಕುಲದೀಪ್‌    20
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಬ್ಯಾಟಿಂಗ್‌    28
ಟಿಮ್‌ ಪೇನ್‌    ಬಿ ಕುಲದೀಪ್‌    5
ಪ್ಯಾಟ್‌ ಕಮಿನ್ಸ್‌    ಬ್ಯಾಟಿಂಗ್‌    25
ಇತರ        6
ಒಟ್ಟು  (6 ವಿಕೆಟಿಗೆ)        236
ವಿಕೆಟ್‌ ಪತನ: 1-72, 2-128, 3-144, 4-152, 5-192, 6-198.
ಬೌಲಿಂಗ್‌:
ಮೊಹಮ್ಮದ್‌ ಶಮಿ        16-1-54-1
ಜಸ್‌ಪ್ರೀತ್‌ ಬುಮ್ರಾ        16-4-43-0
ರವೀಂದ್ರ ಜಡೇಜ        27.2-9-62-2
ಕುಲದೀಪ್‌ ಯಾದವ್‌        24-6-71-3

ಟಾಪ್ ನ್ಯೂಸ್

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.