ಸೈಯದ್ ಮುಷ್ತಾಕ್ ಅಲಿ: ಮಧ್ಯ ವಲಯಕ್ಕೆ 6 ವಿಕೆಟ್ ಜಯ
Team Udayavani, Feb 13, 2017, 3:45 AM IST
ಮುಂಬಯಿ: ಹರ್‌ಪ್ರೀತ್ ಸಿಂಗ್ ಬಾರಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ಮಧ್ಯ ವಲಯ ತಂಡ ಸೈಯದ್ ಮುಷ್ತಾಕ್ ಅಲಿ ಅಂತರ್ ರಾಜ್ಯ ಟಿ20 ಟೂರ್ನಿಯಲ್ಲಿ ಪಶ್ಚಿಮ ವಲಯ ತಂಡವನ್ನು 6 ವಿಕೆಟ್‌ನಿಂದ ಸೋಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಶ್ಚಿಮ ವಲಯ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಬಾರಿಸಿತ್ತು. ಪಶ್ಚಿಮ ವಲಯ ಪರ ದೀಪಕ್ ಹೂಡಾ (ಅಜೇಯ 49 ರನ್), ಅದಿತ್ಯ ತಾರೆ (40 ರನ್) ಅತೀ ಹೆಚ್ಚು ರನ್ ಬಾರಿಸಿದರು. ಮಧ್ಯ ವಲಯದ ಪರ ಅಂಕಿತ್ ಚೌಧರಿ 3 ವಿಕೆಟ್ ಪಡೆದರೆ, ಅಮಿತ್ ಮಿಶ್ರಾ 2 ವಿಕೆಟ್ ಪಡೆದರು.
ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನು ಹತ್ತಿದ ಮಧ್ಯ ವಲಯ 79 ರನ್ನಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಜತೆಯಾದ ಹರ್‌ಪ್ರೀತ್ ಸಿಂಗ್ (62 ರನ್) ಮತ್ತು ಮಹೇಶ್ ರಾವತ್ (30 ರನ್) ಉತ್ತಮ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಗೆಲುವು ತಂದರು.
ಸಂಕ್ಷಿಪ್ತ ಸ್ಕೋರ್:
ಪಶ್ಚಿಮ ವಲಯ 8 ವಿಕೆಟಿಗೆ 160 (ದೀಪಕ್ ಹೂಡ 49, ಆದಿತ್ಯ ತಾರೆ 40, ಅಂಕಿತ್ ಚೌಧರಿ 47ಕ್ಕೆ 3), ಮಧ್ಯ ವಲಯ 4 ವಿಕೆಟಿಗೆ 165 (ಹರ್‌ಪ್ರೀತ್ ಸಿಂಗ್ 62, ಮಹೇಶ್ ರಾವತ್ 30, ಈಶ್ವರ್ ಚೌಧರಿ 20ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.