ಸಯ್ಯದ್ ಮುಷ್ತಾಕ್ ಅಲಿ ಕ್ರಿಕೆಟ್: ಕರ್ನಾಟಕ “ಡಬಲ್ ಹ್ಯಾಟ್ರಿಕ್’
Team Udayavani, Mar 1, 2019, 12:30 AM IST
ಕಟಕ್: ಸಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಸತತ 6 ಪಂದ್ಯಗಳನ್ನು ಗೆದ್ದು “ಡಬಲ್ ಹ್ಯಾಟ್ರಿಕ್’ ಸಾಧಿಸಿದೆ. ಗುರುವಾರ ಒಡಿಶಾವನ್ನು 51 ರನ್ನುಗಳಿಂದ ಮಣಿಸುವ ಮೂಲಕ ಮನೀಷ್ ಪಾಂಡೆ ಪಡೆ ಈ ಪರಾಕ್ರಮ ಸಾಧಿಸಿತು.
“ಡಿ’ ವಿಭಾಗದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 9 ವಿಕೆಟಿಗೆ 155 ರನ್ ಗಳಿಸಿದರೆ, ಒಡಿಶಾ 18.1 ಓವರ್‌ಗಳಲ್ಲಿ 104ಕ್ಕೆ ಆಲೌಟ್ ಆಯಿತು. ಇದರೊಂದಿಗೆ 24 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿತು.
ಕರ್ನಾಟಕ ಪರ ಆರಂಭಕಾರ ರೋಹನ್ ಕದಮ್ ಮತ್ತೂಮ್ಮೆ ಪ್ರಚಂಡ ಪ್ರದರ್ಶನ ನೀಡಿ 89 ರನ್ ಬಾರಿಸಿದರು. ಆದರೆ ಕದಮ್ ಹೊರತುಪಡಿಸಿದರೆ ಉಳಿದವರ್ಯಾರೂ ಕ್ರೀಸ್ ಆಕ್ರಮಿಸಿಕೊಳ್ಳಲು ಸಫಲರಾಗಲಿಲ್ಲ. 17 ರನ್ ಮಾಡಿದ ಶ್ರೇಯಸ್ ಗೋಪಾಲ್ ಅವರದೇ ಅನಂತರದ ಹೆಚ್ಚಿನ ಗಳಿಕೆ. ಎರಡಂಕೆಯ ಸ್ಕೋರ್ ದಾಖಲಿಸಿದ ಇತರ ಇಬ್ಬರೆಂದರೆ ಮಾಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್. ಇಬ್ಬರ ಗಳಿಕೆತಯೂ ತಲಾ 10 ರನ್.
ಒಡಿಶಾ ಕುಸಿತ
ಆರಂಭದಿಂದಲೇ ಕರ್ನಾಟಕದ ಬೌಲಿಂಗ್ ಆಕ್ರಮಣಕ್ಕೆ ತತ್ತರಿಸಿದ ಒಡಿಶಾ 10ನೇ ಓವರ್ ವೇಳೆ 44ಕ್ಕೆ 6 ವಿಕೆಟ್ ಉದುರಿಸಿಕೊಂಡು ಸೋಲನ್ನು ಖಚಿತಗೊಳಿಸಿತು. ಆದರೆ 8ನೇ ಕ್ರಮಾಂಕದ ಆಟಗಾರ ಸೂರ್ಯಕಾಂತ್ ಪ್ರಧಾನ್ 32 ರನ್ ಮಾಡಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಕೆ.ಸಿ. ಕಾರ್ಯಪ್ಪ 4 ವಿಕೆಟ್, ವಿ. ಕೌಶಿಕ್ 3 ವಿಕೆಟ್ ಹಾಗೂ ಜಗದೀಶ್ ಸುಚಿತ್ 2 ವಿಕೆಟ್ ಹಾರಿಸಿ ಒಡಿಶಾಕ್ಕೆ ಕಡಿವಾಣ ಹಾಕಿದರು. ಕರ್ನಾಟಕ ತನ್ನ ಕೊನೆಯ ಪಂದ್ಯವನ್ನು ಮಾ. 2ರಂದು ಹರ್ಯಾಣವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-9 ವಿಕೆಟಿಗೆ 155 (ಕದಮ್ 89, ಶ್ರೇಯಸ್ ಗೋಪಾಲ್ 17, ಬಿಪ್ಲಬ್ ಸಮಂತ್ರಾಯ್ 10ಕ್ಕೆ 2, ಪಪ್ಪು ರಾಯ್ 21ಕ್ಕೆ 2). ಒಡಿಶಾ-18.1 ಓವರ್‌ಗಳಲ್ಲಿ 104 (ಸೂರ್ಯಕಾಂತ್ 32, ಬೇಬಬೃತ್ 13, ಕಾರ್ಯಪ್ಪ 15ಕ್ಕೆ 4, ಕೌಶಿಕ್ 8ಕ್ಕೆ 3, ಸುಚಿತ್ 27ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.