ಸಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ : ಜಮ್ಮು ಕಾಶ್ಮೀರವನ್ನು ಮಣಿಸಿದ ಕರ್ನಾಟಕ
Team Udayavani, Jan 11, 2021, 12:53 AM IST
ಬೆಂಗಳೂರು: ರವಿವಾರ ಮೊದಲ್ಗೊಂಡ “ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ’ ಟಿ20 ಪಂದ್ಯಾವಳಿಯಲ್ಲಿ ಕರ್ನಾಟಕ ಶುಭಾರಂಭ ಮಾಡಿದೆ. ಲೀಗ್ ಹಂತದ ಮೊದಲ ಪಂದ್ಯದಲ್ಲಿ 43 ರನ್ನುಗಳಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಪರಾಭವಗೊಳಿಸಿದೆ.
ಬೆಂಗಳೂರು ಹೊರವಲಯದ ಆಲೂರು (1) ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ಕರ್ನಾಟಕ 5 ವಿಕೆಟಿಗೆ 150 ರನ್ ಪೇರಿಸಿದರೆ, ಜಮ್ಮು ಮತ್ತು ಕಾಶ್ಮೀರ 18.4 ಓವರ್‌ಗಳಲ್ಲಿ 107 ರನ್ನಿಗೆ ಆಲೌಟ್ ಆಯಿತು.
ರಾಜ್ಯದ ವಿಕೆಟ್ ಕೀಪರ್ ಕೆ.ಎಲ್. ಶ್ರೀಜಿತ್ ತಮ್ಮ ಪದಾ ರ್ಪಣ ಪಂದ್ಯವನ್ನೇ ಸ್ಮರಣೀಯ ಗೊಳಿಸಿದರು. 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಅವರು ಪಂದ್ಯದಲ್ಲೇ ಸರ್ವಾಧಿಕ 48 ರನ್ ಹೊಡೆದರು. 31 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್, ಒಂದು ಫೋರ್ ಸೇರಿತ್ತು.
ಐಪಿಎಲ್ ಹೀರೋ ದೇವದತ್ತ ಪಡಿಕ್ಕಲ್ 17 ಎಸೆತಗಳಿಂದ 18 ರನ್ (3 ಬೌಂಡರಿ), ಇವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ನಾಯಕ ಕರುಣ್ ನಾಯರ್ 21 ಎಸೆತ ನಿಭಾಯಿಸಿ 27 ರನ್ ಹೊಡೆದರು (3 ಬೌಂಡರಿ, ಒಂದು ಸಿಕ್ಸರ್). ಪವನ್ ದೇಶಪಾಂಡೆ (21) ಮತ್ತು ಅನಿರುದ್ಧ ಜೋಶಿ (29) ಮತ್ತಿಬ್ಬರು ಪ್ರಮುಖ ಸ್ಕೋರರ್.
ಐವರಿಂದಲೂ ವಿಕೆಟ್ ಬೇಟೆ :
ಕರ್ನಾಟಕ ಸಾಂ ಕ ಬೌಲಿಂಗ್ ಶಕ್ತಿ ಪ್ರದರ್ಶಿಸಿತು. ಐದೂ ಮಂದಿ ವಿಕೆಟ್ ಬೇಟೆಯಾಡುವಲ್ಲಿ ಯಶಸ್ವಿ ಯಾದರು. ಪ್ರಸಿದ್ಧ್ ಕೃಷ್ಣ 3 ವಿಕೆಟ್ ಉರುಳಿಸಿದರೆ, ಅಭಿಮನ್ಯು ಮಿಥುನ್, ಜಗದೀಶ್ ಸುಚಿತ್ ಮತ್ತು ಕೆ. ಗೌತಮ್ ತಲಾ 2 ವಿಕೆಟ್ ಉರುಳಿಸಿದರು. ಉಳಿದೊಂದು ವಿಕೆಟ್ ರೋನಿತ್ ಮೋರೆ ಪಾಲಾಯಿತು. ಜಮ್ಮು ಕಾಶ್ಮೀರ ಸರದಿಯಲ್ಲಿ ಅಬ್ದುಲ್ ಸಮದ್ ಸರ್ವಾಧಿಕ 30 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-5 ವಿಕೆಟಿಗೆ 150 (ಶ್ರೀಜಿತ್ ಔಟಾಗದೆ 48, ಜೋಶಿ 29, ನಾಯರ್ 27, ದೇಶಪಾಂಡೆ 21, ಪಡಿಕ್ಕಲ್ 18, ರಸೂಲ್ 18ಕ್ಕೆ 2, ನಬಿ 30ಕ್ಕೆ 2). ಜಮ್ಮು ಮತ್ತು ಕಾಶ್ಮೀರ-18.4 ಓವರ್‌ಗಳಲ್ಲಿ 107 (ಸಮದ್ 30, ಪುಂದಿರ್ 20, ಬಾಂಡೆ 18, ಪ್ರಸಿದ್ಧ್ ಕೃಷ್ಣ 34ಕ್ಕೆ 3, ಕೆ. ಗೌತಮ್ 13ಕ್ಕೆ 2, ಸುಚಿತ್ 17ಕ್ಕೆ 2, ಮಿಥುನ್ 24ಕ್ಕೆ 2 ವಿಕೆಟ್).
ರೈನಾ ಪ್ರಯತ್ನ ವಿಫಲ :
ಬೆಂಗಳೂರು: ಇಲ್ಲೇ ನಡೆದ ಇನ್ನೊಂದು ಪಂದ್ಯದಲ್ಲಿ ಸುರೇಶ್ ರೈನಾ ಅವರ ಅರ್ಧ ಶತಕದ ಹೊರತಾಗಿಯೂ ಉತ್ತರಪ್ರದೇಶ 11 ರನ್ನುಗಳಿಂದ ಪಂಜಾಬ್‌ಗ ಶರಣಾಯಿತು.
ಪಂಜಾಬ್ 7 ವಿಕೆಟಿಗೆ 134 ರನ್ ಗಳಿಸಿದರೆ, ಯುಪಿ 5 ವಿಕೆಟ್ ಉಳಿಸಿಕೊಂಡೂ ಕೇವಲ 123 ರನ್ ಮಾಡಿತು. 18 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟಿಗೆ ಇಳಿದ ರೈನಾ ಆಗ 40 ಎಸೆತಗಳಿಂದ 56 ರನ್ ಮಾಡಿ ಅಜೇಯರಾಗಿದ್ದರು.
ಕೋಲ್ಕತಾ: “ಬಿ’ ವಿಭಾಗದ ಪಂದ್ಯದಲ್ಲಿ ತಮಿಳುನಾಡು 68 ರನ್ನುಗಳಿಂದ ಜಾರ್ಖಂಡ್‌ಗೆ ಸೋಲುಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.