ಸಯ್ಯದ್ ಮುಷ್ತಾಕ್ ಅಲಿ ಟಿ20 : ಕರ್ನಾಟಕಕ್ಕೆ ರೋಚಕ ಜಯ ತಂದಿತ್ತ ಜೋಶಿ
Team Udayavani, Jan 17, 2021, 12:56 AM IST
ಬೆಂಗಳೂರು: ಇನ್ನೇನು ರೈಲ್ವೇಸ್ ವಿರುದ್ಧ ಹಳಿ ತಪ್ಪಿತು ಎನ್ನುವ ಹಂತದಲ್ಲಿ ಅಮೋಘ ಪ್ರತಿಹೋರಾಟ ಸಂಘಟಿಸಿದ ಅನಿರುದ್ಧ ಜೋಶಿ ಶನಿವಾರದ “ಸಯ್ಯದ್ ಮುಷ್ತಾಕ್ ಅಲಿ’ ಟಿ20 ಪಂದ್ಯದಲ್ಲಿ ಕರ್ನಾಟಕಕ್ಕೆ 2 ವಿಕೆಟ್‌ಗಳ ರೋಚಕ ಗೆಲುವು ತಂದಿತ್ತಿದ್ದಾರೆ.
ಆಲೂರಿನ ಕೆಎಸ್‌ಸಿಎ ಕ್ರಿಕೆಟ್ ಗ್ರೌಂಡ್(2)ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರೈಲ್ವೇಸ್ 5 ವಿಕೆಟಿಗೆ 152 ರನ್ ಪೇರಿಸಿದರೆ, ಕರ್ನಾಟಕ 19.4 ಓವರ್‌ಗಳಲ್ಲಿ 8 ವಿಕೆಟಿಗೆ 158 ರನ್ ಬಾರಿಸಿ ಜಯ ಸಾಧಿಸಿತು. ಇದು “ಎಲೈಟ್ ಎ’ ವಿಭಾಗದ 4 ಪಂದ್ಯಗಳಲ್ಲಿ ಕರ್ನಾಟಕಕ್ಕೆ ಒಲಿದ 3ನೇ ಜಯವಾಗಿದೆ. 12 ಅಂಕ ಹೊಂದಿರುವ ಕರುಣ್ ನಾಯರ್ ಬಳಗ ದ್ವಿತೀಯ ಸ್ಥಾನಿಯಾಗಿದೆ. ನಾಲ್ಕೂ ಪಂದ್ಯ ಗೆದ್ದಿರುವ ಪಂಜಾಬ್ ಅಗ್ರಸ್ಥಾನದಲ್ಲಿದೆ (16 ಅಂಕ).
ಜೋಶಿ ಅಮೋಘ ಆಟ :
14ನೇ ಓವರಿನಲ್ಲಿ 93ಕ್ಕೆ 6 ವಿಕೆಟ್ ಕಳೆದುಕೊಂಡ ಕರ್ನಾಟಕ ಸೋಲಿನ ಭೀತಿಯಲ್ಲಿತ್ತು. ಈ ಹಂತದಲ್ಲಿ ಕ್ರೀಸಿಗೆ ಅಂಟಿಕೊಂಡು ನಿಂತ ಅನಿರುದ್ಧ ಜೋಶಿ ರೈಲ್ವೇಸ್ ಆಕ್ರಮಣಕ್ಕೆ ದಿಟ್ಟ ಉತ್ತರ ನೀಡತೊಡಗಿದರು. ಏಕಾಂಗಿ ಯಾಗಿ ಹೋರಾಡಿದ ಜೋಶಿ ಅಜೇಯ 64 ರನ್ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು. 40 ಎಸೆತಗಳ ಈ ಆಕ್ರಮಣಕಾರಿ ಆಟದ ವೇಳೆ 4 ಸಿಕ್ಸರ್, 3 ಬೌಂಡರಿ ಸಿಡಿಯ ಲ್ಪಟ್ಟಿತು. ಜೋಶಿ ಅಬ್ಬರಿಸುತ್ತಿದ್ದ ವೇಳೆ ಬೆಂಬಲ ನೀಡಿದ್ದು ಕೆ. ಗೌತಮ್ ಮಾತ್ರ (12). ಈ ಜೋಡಿಯಿಂದ 7ನೇ ವಿಕೆಟಿಗೆ 38 ರನ್ ಒಟ್ಟುಗೂಡಿತು. ಅಗ್ರ ಕ್ರಮಾಂಕದಲ್ಲಿ ಪಡಿಕ್ಕಲ್ 37 (32 ಎಸೆತ, 3 ಬೌಂಡರಿ, 2 ಸಿಕ್ಸರ್) ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್ :
ರೈಲ್ವೇಸ್-5 ವಿಕೆಟಿಗೆ 152 (ಶಿವಂ ಚೌಧರಿ 48, ಪ್ರಥಮ್ ಸಿಂಗ್ 41, ಹರ್ಷ ತ್ಯಾಗಿ ಔಟಾಗದೆ 33, ಪ್ರಸಿದ್ಧ್ ಕೃಷ್ಣ 25ಕ್ಕೆ 2, ಶ್ರೇಯಸ್ ಗೋಪಾಲ್ 27ಕ್ಕೆ 2). ಕರ್ನಾಟಕ-19. 4 ಓವರ್‌ಗಳಲ್ಲಿ 8 ವಿಕೆಟಿಗೆ 158 (ಜೋಶಿ ಔಟಾಗದೆ 64, ಪಡಿಕ್ಕಲ್ 37, ನಾಯರ್ 15, ಕದಂ 14, ಪ್ರದೀಪ್ ಪೂಜಾರ್ 19ಕ್ಕೆ 3, ದೃಷ್ಟಾಂತ್ ಸೋನಿ 28ಕ್ಕೆ 3, ಶಿವೇಂದ್ರ ಸಿಂಗ್ 33ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.