ಸತತ 11ನೇ ಜಯ, ಕರ್ನಾಟಕ ಫೈನಲ್‌ಗೆ
Team Udayavani, Mar 13, 2019, 12:30 AM IST
ಇಂದೋರ್: ಸತತ 11ನೇ ಗೆಲುವಿನೊಂದಿಗೆ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಸೂಪರ್ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾ ಟಕ ತಂಡವು ವಿದರ್ಭ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದೆ. ಫೈನಲ್‌ನಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ತಂಡದ ಸವಾಲನ್ನು ಎದುರಿಸಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ವಿನಯ್ ಕುಮಾರ್ (27ಕ್ಕೆ 2) ಅವರ ಶಿಸ್ತಿನ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 7 ವಿಕೆಟಿಗೆ 138 ರನ್‌ಗಳಿಗೆ ಬ್ಯಾಟಿಂಗ್ ಮುಗಿಸಿತು. ಈ ಗುರಿ ಬೆನ್ನಟ್ಟಿದ್ದ ಕರ್ನಾಟಕ ನಾಯಕ ಮನೀಶ್ ಪಾಂಡೆ (49 ಔಟಾಗದೆ) ಹಾಗೂ ರೋಹನ್ ಕದಮ್ (39 ರನ್) ಅವರ ನೆರವಿನಿಂದ 19.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿ ಗೆಲುವಿನ ನಗು ಬೀರಿತು. ಅಜೇಯ ಕರ್ನಾಟಕ ಗುರುವಾರ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಮಹಾರಾಷ್ಟ್ರ ಸವಾಲನ್ನು ಎದುರಿಸಲಿದೆ.
ಮನೀಶ್, ಕದಮ್ ಶ್ರೇಷ್ಠ ಬ್ಯಾಟಿಂಗ್
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಬಿ.ಆರ್. ಶರತ್ (5 ರನ್) ಅವರ ವಿಕೆಟ್ ಕೇವಲ 20 ರನ್ ತಲುಪಿದಾಗ ಪತನಗೊಂಡಿತು. ಮೊತ್ತ 39 ರನ್ ಆಗುತ್ತಿದ್ದಂತೆ ಮಾಯಾಂಕ್ ಅಗರ್ವಾಲ್ (13 ರನ್) ವಿಕೆಟ್ ಕೂಡ ಉರುಳಿತು. ಆದರೆ ಆರಂಭಿಕ ರೋಹನ್ ಕದಮ್ ಅತ್ಯುತ್ತಮ ಆಟವಾಡಿ ಅರ್ಧಶತಕದತ್ತ ಹೆಜ್ಜೆ ಇಟ್ಟಿದ್ದರು. ಈ ಹಂತದಲ್ಲಿ ದಾಳಿಗಿಳಿದ ಠಾಕೂರ್ ತಮ್ಮ ಬೌಲಿಂಗ್ ಜಾದೂವಿನಿಂದ ಕದಮ್‌ರನ್ನು ಪೆವಿಲಿಯನ್‌ಗೆ ಅಟ್ಟಿದರು. ಆಗ ತಂಡದ ಮೊತ್ತ 3 ವಿಕೆಟ್‌ಗೆ 68 ರನ್ ಆಗಿತ್ತು. ಬಳಿಕ ಬಂದ ಕರುಣ್ ನಾಯರ್ (24 ರನ್) ತಂಡದ ಮೊತ್ತ 103 ರನ್ ಆಗಿದ್ದಾಗ ಔಟಾಗಿ ಹೊರ ನಡೆದರು. ಅನಂತರ ಮನೀಶ್ ಪಾಂಡೆ ಭರ್ಜರಿಯಾಗಿ ಆಡಿ 35 ಎಸೆತಗಳಲ್ಲಿ ಅಜೇಯ 49 ರನ್ ( 3 ಬೌಂಡರಿ ಹಾಗೂ 2 ಸಿಕ್ಸರ್) ಬಾರಿಸಿ ಗೆಲುವಿನ ದಡ ಸೇರಿಸಿದರು.
ವಿದರ್ಭ ಕಳಪೆ ಬ್ಯಾಟಿಂಗ್
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ವಿದರ್ಭ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್ ಅಥರ್ವ ಟೈಡೆ (28 ರನ್) ಆರಂಭಿಕ ಹಂತದಲ್ಲಿ ಸ್ವಲ್ಪ ರನ್ ಗಳಿಸಿದರು. ಉಳಿದಂತೆ ವಿದರ್ಭದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಂಪೂರ್ಣ ನೆಲಕಚ್ಚಿತು. ಕೆಳ ಕ್ರಮಾಂಕದಲ್ಲಿ ಅಪೂರ್ವ ವಾಂಖೆಡೆ (ಅಜೇಯ 56 ರನ್) ಹಾಗೂ ಅಕ್ಷಯ್ ಕರ್ನೆವರ್ (33 ರನ್) ದಿಟ್ಟ ಆಟ ನಡೆಸಿದ್ದರಿಂದ ತಂಡ 130 ರನ್ ಗಡಿ ದಾಟಲು ಸಾಧ್ಯವಾಯಿತು. ಕರ್ನಾಟಕ ಪರ ವಿನಯ್ ಕುಮಾರ್ 2 ವಿಕೆಟ್ ಕಿತ್ತರೆ ಅಭಿಮನ್ಯು ಮಿಥುನ್ ಯಾವುದೇ ವಿಕೆಟ್ ಪಡೆಯದಿದ್ದರೂ 3 ಓವರ್ ಎಸೆದು ಕೇವಲ 11 ರನ್ ಬಿಟ್ಟು ಕೊಟ್ಟು ಅಮೋಘ ನಿಯಂತ್ರಣ ಸಾಧಿಸಿದರು.
ಸಂಕ್ಷಿಪ್ತ ಸ್ಕೋರ್: ವಿದರ್ಭ 20 ಓವರ್‌ಗಳಲ್ಲಿ 7 ವಿಕೆಟಿಗೆ 138 (ಅಪೂರ್ವ ವಾಂಖೆಡೆ ಅಜೇಯ 56, ಅಕ್ಷಯ್ ಕರ್ನೆವರ್ 33, ವಿನಯ್ ಕುಮಾರ್ 27ಕ್ಕೆ 2), ಕರ್ನಾಟಕ 19.2 ಓವರ್‌ಗಳಲ್ಲಿ 4 ವಿಕೆಟಿಗೆ 140 (ಮನೀಶ್ ಪಾಂಡೆ ಅಜೇಯ 49, ರೋಹನ್ ಕದಮ್ 39).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಡ್ರೆಸ್ಸಿಂಗ್ ರೂಂ ರಹಸ್ಯ: ಕೋಚ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗರ ಅಸಮಾಧಾನ
Rohit Sharma; ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ವಿದಾಯ?
Team India; 2025 ಭಾರತ ಆಡುವುದು ಹತ್ತೇ ಟೆಸ್ಟ್
Women’s ODI rankings; 5ನೇ ಸ್ಥಾನಕ್ಕೆ ಏರಿದ ದೀಪ್ತಿ ಶರ್ಮ
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
Ullala: ಆಯತಪ್ಪಿ ಪಾಳು ಬಾವಿಗೆ ಬಿದ್ದು ಸ್ಥಳೀಯ ಮೀನುಗಾರ ಮೃತ್ಯು
America: ಹೊಸ ವರ್ಷದ ಸಂಭ್ರಮಾಚರಣೆ-ಜನರ ಗುಂಪಿನ ಮೇಲೆ ನುಗ್ಗಿದ ಟ್ರಕ್-ಹಲವು ಸಾ*ವು
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.