ದೇಶೀಯ ಕ್ರಿಕೆಟ್ ಹೋರಾಟಕ್ಕೆ ಯುವ ಕ್ರಿಕೆಟಿಗರು ಸಜ್ಜು
ಜ. 10ರಿಂದ 31: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್: ಕರ್ನಾಟಕ್ಕೆ ಜಮ್ಮು-ಕಾಶ್ಮೀರ ಎದುರಾಳಿ
Team Udayavani, Jan 10, 2021, 5:10 AM IST
ಮುಂಬಯಿ: ಕೋವಿಡ್ ದಿಂದ ಕ್ರೀಡಾ ಚಟುವಣಿಕೆಗಳಿಗೆ ಅಡಚಣೆಯಾದ ಬಳಿಕ ಭಾರತ ದಲ್ಲಿ ಮೊದಲ ಬಾರಿ ಪ್ರಮುಖ ಕ್ರಿಕೆಟ್ ಕೂಟ ವೊಂದು ನಡೆಯುತ್ತಿದೆ. ರವಿವಾರದಿಂದ ಆರಂಭ ವಾಗುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಕೂಟದಲ್ಲಿ ಯುವ ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದು ಮುಂಬರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಆಯ್ಕೆಗಾಗಿ ಶ್ರೇಷ್ಠ ನಿರ್ವಹಣೆ ನೀಡುವ ಉತ್ಸಾಹದಲ್ಲಿದ್ದಾರೆ.
ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಎದುರಿಸಲಿದೆ. ಬೆಂಗಳೂರು ಹೊರವಲಯವಾದ ಆಲೂರಿನಲ್ಲಿ ಪಂದ್ಯ ನಡೆಯಲಿದೆ. ತಂಡಕ್ಕೆ ಕರುಣ್ ನಾಯರ್ ನಾಯಕರಾಗಿದ್ದಾರೆ.
ಅನುಭವಿ ಆಟಗಾರರಾದ ಶಿಖರ್ ಧವನ್, ಸುರೇಶ್ ರೈನಾ ಮತ್ತು ಇಶಾಂತ್ ಶರ್ಮ ಅವರು ಈ ಕೂಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸಿ ನಿಷೇಧ ಅನುಭವಿಸಿದ್ದ ಎಸ್. ಶ್ರೀಶಾಂತ್ ಕೂಡ ಈ ಕೂಟದಲ್ಲಿ ಆಡಲಿದ್ದಾರೆ. 37ರ ಹರೆಯದ ಶ್ರೀಶಾಂತ್ ಕೇರಳ ಪರ ಆಡಲಿದ್ದಾರೆ.
ಆರು ಬಣ :
ಐದು ಎಲೈಟ್ ಮತ್ತು ಒಂದು ಪ್ಲೇಟ್ ಸೇರಿದಂತೆ ಈ ಕೂಟದಲ್ಲಿ ಭಾಗವಹಿಸಲಿರುವ ತಂಡಗಳನ್ನು ಆರು ಬಣಗಳಲ್ಲಿ ವಿಂಗಡಿಸಲಾಗಿದೆ. ಲೀಗ್ ಹಂತದ ಪಂದ್ಯಗಳು ಮುಂಬಯಿ, ವಡೋದರ, ಇಂಧೋರ್, ಕೋಲ್ಕತಾ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು ನಾಕೌಟ್ ಹಂತ ಅಹ್ಮದಾಬಾದ್‌ನಲ್ಲಿ ಜರಗಲಿದೆ. ಹಾಲಿ ಚಾಪಿಯನ್ ಕರ್ನಾಟಕ ತಂಡವು ಪ್ರಶಸ್ತಿ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಆದರೆ ಅದು ಇತರ ತಂಡಗಳಿಂದ ತೀವ್ರ ಪೈಪೋಟಿ ಎದುರಿಸುವ ಸಾಧ್ಯತೆಯಿದೆ. ಎಲೈಟ್ “ಎ’ ತಂಡದಲ್ಲಿ ಕರ್ನಾಟಕ ವಲ್ಲದೇ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರಪ್ರದೇಶ, ರೈಲ್ವೇಸ್ ಮತ್ತು ತ್ರಿಪುರ ತಂಡಗಳಿವೆ.
ಯುವ ಕ್ರಿಕೆಟಿಗರತ್ತ ಚಿತ್ತ :
ಫೆಬ್ರವರಿಯಲ್ಲಿ ಐಪಿಎಲ್ ಹರಾಜು ನಡೆಯ ಲಿರುವ ಕಾರಣ ದೇಶೀಯ ಯುವ ಕ್ರಿಕೆಟಿಗರ ನಿರ್ವಹಣೆಯತ್ತ ಎಲ್ಲರ ಚಿತ್ತ ಇರಲಿದೆ. ಈ ವರ್ಷದ ಅಂತ್ಯದಲ್ಲಿ ಟಿ20 ವಿಶ್ವಕಪ್ ಕೂಟ ಭಾರತದಲ್ಲಿಯೇ ನಡೆಯುವ ಕಾರಣ ಈ ಕೂಟ ಕ್ರಿಕೆಟಿಗರ ಪಾಲಿಗೆ ಮಹತ್ವದ್ದಾಗಿದೆ. ಇಲ್ಲಿ ಕ್ರಿಕೆಟಿಗರು ನೀಡುವ ಸಾಧನೆಯ ಆಧಾರದಲ್ಲಿ ಹೊಸ ಆಯ್ಕೆ ಸಮಿತಿಯು ವಿಶ್ವಕಪ್‌ಗೆ ತಂಡವನ್ನು ರಚಿಸುವ ಸಾಧ್ಯತೆಯಿದೆ.
ಅರ್ಜುನ್ ತೆಂಡುಲ್ಕರ್ ಆಡುವ ಸಾಧ್ಯತೆ :
ಇದೇ ಮೊದಲ ಬಾರಿ ಮುಂಬಯಿ ಸೀನಿಯರ್ ತಂಡಕ್ಕೆ ಯುವ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂಬಯಿ ತಂಡವನ್ನು ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.
ಆಟಗಾರರ ದೂರು :
ಈ ಕೂಟ ಆರಂಭವಾಗುವ ಮೊದಲೇ ಕೆಲವು ಆಟಗಾರರು ದಕ್ಷಿಣ ಮುಂಬಯಿಯ ಪ್ರಮುಖ ಹೊಟೇಲ್‌ನಲ್ಲಿ ನಮಗೆ ಕಳಪೆ ಗುಣಮಟ್ಟದ ಆಹಾರ ನೀಡಿದ್ದಾರೆ ಎಂದು ದೂರು ನೀಡಿರುವ ಘಟನೆ ನಡೆದಿದೆ. ಇಷ್ಟು ಮಾತ್ರವಲ್ಲದೇ ಪ್ಲೇಟ್ ಬಣದಲ್ಲಿ ಆಡಲಿರುವ ಮೂರು ತಂಡಗಳು ಉಳಿದುಕೊಂಡಿರುವ ಚೆನ್ನೈಯ ಪ್ರಮುಖ ಹೊಟೇಲ್‌ನ ಸಿಬಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವುದು ಗೊಂದಲಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.