2018 ಸಿರಿಂಜ್ ಪತ್ತೆ; ಭಾರತೀಯ ಆ್ಯತ್ಲೀಟ್‌ಗಳ ವಿಚಾರಣೆ?
Team Udayavani, Apr 1, 2018, 6:20 AM IST
ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯ): ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ಗೆ ಸಜ್ಜಾಗಿರುವ ಭಾರತೀಯ ಆ್ಯತ್ಲೀಟ್‌ಗಳ ಪಾಳೆಯದಲ್ಲೀಗ ಆತಂಕದ ವಾತಾವರಣವೊಂದು ನಿರ್ಮಾಣಗೊಂಡಿದೆ. ಭಾರತದ ಕ್ರೀಡಾಳುಗಳು ತಂಗಿರುವ ಕ್ರೀಡಾಗ್ರಾಮದ ಬಳಿ ಕೆಲವು ಸಿರಿಂಜ್‌ಗಳು ಪತ್ತೆಯಾಗಿವೆ. ಡೋಪಿಂಗ್ ಹಿನ್ನೆಲೆಯಲ್ಲಿ ಭಾರತದ ಕ್ರೀಡಾಪಟುಗಳು ವಿಚಾರಣೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ.
“ಕ್ರೀಡಾಗ್ರಾಮದ ಸ್ವತ್ಛತಾ ಸಿಬಂದಿಗೆ ಈ ಸಿರಿಂಜ್‌ಗಳು ದೊರಕಿದ್ದು, ಕೂಟದ ಸಂಘಟಕರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಈ ಸಿರಿಂಜ್‌ಗಳನ್ನು ಪರಿಶೀಲಿಸಲಾಗುವುದು’ ಎಂದು ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್‌ನ (ಸಿಜಿಎಫ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ಗ್ರೆವೆಂಬರ್ಗ್ ಹೇಳಿದ್ದಾರೆ. “ಡೋಪಿಂಗ್ ಮುಕ್ತ’ ಕ್ರೀಡಾಕೂಟವಾಗಬೇಕಿದೆ ಎಂದೂ ಗ್ರೆವೆಂಬರ್ಗ್ ಸ್ಪಷ್ಟಪಡಿಸಿದರು.
ಭಾರತದಿಂದ ನಿರಾಕರಣೆ
ಆದರೆ ಭಾರತ ತಂಡ ಇದನ್ನು ನಿರಾಕರಿಸಿದೆ. “ನಾವು ಯಾವುದೇ ತಪ್ಪು ಎಸೆಗಿಲ್ಲ. ನಮ್ಮ ಕೋಣೆಗಳಲ್ಲಿ ಯಾವುದೇ ಸಿರಿಂಜ್ ಸಿಕ್ಕಿಲ್ಲ’ ಎಂದು ಸ್ಪಷ್ಟಪಡಿಸಿದೆ.ಈ ಕುರಿತು ಪ್ರತಿಕ್ರಿಯಿಸಿದ ಭಾರತೀಯ ತಂಡದ ಮ್ಯಾನೇಜರ್ ಅಜಯ್ ನಾರಂಗ್, “ಈ ಸಿರಿಂಜ್‌ಗಳಿಂದ ನಮಗೇನೂ ಆಗಬೇಕಾದ್ದಿಲ್ಲ. ಸಮೀಪದ ಹೊರದಾರಿಯಲ್ಲಿ ನೀರಿನ ಬಾಟಲಿಯೊಂದರಲ್ಲಿ ಇವು ಪತ್ತೆಯಾಗಿವೆ. ನಮ್ಮ ತಂಡದವರೇ ಒಬ್ಬರು ಇದನ್ನು ತಿಳಿಸಿದರು. ಇದನ್ನು ಕಂಡ ನನಗೆ ಸಿರಿಂಜ್‌ಗಳೆಂಬುದು ಸ್ಪಷ್ಟವಾಯಿತು. ಕೂಡಲೇ ನಾನು ಮೆಡಿಕಲ್ ಕಮಿಶನ್ ಕಚೇರಿಗೆ ಹೋಗಿ ವಿಷಯ ತಿಳಿಸಿದೆ. ನಾವ್ಯಾರೂ ಆ ಬಾಟಲಿಯನ್ನು ತೆರೆಯಲೂ ಇಲ್ಲ…’ ಎಂದಿದ್ದಾರೆ.
“ಸಿರಿಂಜ್ ಲಭಿಸಿದೆ ಎಂಬ ಸ್ವತ್ಛತಾ ಸಿಬಂದಿಯ ವರದಿಗೆ ಸಿಜಿಎಫ್ನ ವೈದ್ಯಕೀಯ ನಿಯೋಗ ಸೂಕ್ತ ರೀತಿಯಲ್ಲಿ ಸ್ಪಂದಿಸಿದೆ. ಆ್ಯಂಟಿ ಡೋಪಿಂಗ್ ಮಟ್ಟದಲ್ಲಿ ಇದರ ವಿಚಾರಣೆ ನಡೆಸಲಿದೆ’ ಎಂದು ಗ್ರೆವೆಂಬರ್ಗ್ ತಿಳಿಸಿದರು. ಆದರೆ ಕ್ರೀಡಾಪಟುಗಳನ್ನು ಹೆಚ್ಚುವರಿ ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ. “ಇದಕ್ಕೆ ಸಂಬಂಧಿಸಿ ಗೌಪ್ಯತೆಯನ್ನು ಕಾಯ್ದಿಡಬೇಕಾದ ಅಗತ್ಯವಿದೆ. ಒಟ್ಟಾರೆ ತಮ್ಮದು ನೀಡಲ್ ಲೆಸ್ ಪಾಲಿಸಿ’ ಎಂದರು.
ಅಚ್ಚರಿಯಾಗಿಲ್ಲ: ಐಒಎ
ಈ ಬೆಳವಣಿಗೆಯಿಂದ ತಮಗೆ ಅಚ್ಚರಿಯಾಗಲಿ, ಆಘಾತವಾಗಲಿ ಆಗಿಲ್ಲ ಎಂದು ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಮೂಲವೊಂದು ಹೇಳಿದೆ.
“2014ರ ಗ್ಲಾಸೊYà ಗೇಮ್ಸ್ ಹಾಗೂ ಕಳೆದ ರಿಯೋ ಒಲಿಂಪಿಕ್ಸ್ ವೇಳೆಯೂ ನಮಗೆ ಇಂಥದೇ ಅನುಭವವಾಗಿತ್ತು. ಗ್ಲಾಸೊYàದಲ್ಲಂತೂ ಕ್ರೀಡಾಳುಗಳು ಸೂಜಿಗಳನ್ನು ಬೇಕಾಬಿಟ್ಟಿ ವಿಲೇವಾರಿ ಮಾಡಿದ್ದಾರೆ ಎಂದು ಸಿಜಿಎಫ್ನಿಂದ ನಮಗೆ ಅಧಿಕೃತ ಎಚ್ಚರಿಕೆಯನ್ನೂ ನೀಡಲಾಗಿತ್ತು. ರಿಯೋ ಒಲಿಂಪಿಕ್ಸ್ ವೇಳೆ ಪುನಃ ಕ್ರೀಡಾಳುಗಳ ಕೋಣೆಯಲ್ಲಿ ಸೂಜಿಗಳು ಪತ್ತೆಯಾಗಿದ್ದವು’ ಎಂದು ಐಒಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ನಮ್ಮ ಆ್ಯತ್ಲೀಟ್‌ಗಳ ತಂಡ ಬಹಳ ಮುಂಚಿತವಾಗಿ ಗೋಲ್ಡ್ ಕೋಸ್ಟ್‌ಗೆ ತೆರಳಿತ್ತು. ಆಗ ಪ್ರತಿಯೊಬ್ಬ ಕ್ರೀಡಾಪಟುವಿಗೆ ಆ್ಯಂಟಿ ಡೋಪಿಂಗ್ ನೀತಿ ನಿಯಮಾವಳಿಯನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು. ನೈಜ ಅಗತ್ಯಕ್ಕೆ ಸಿರಿಂಜ್ ಅನಿವಾರ್ಯವಾದಲ್ಲಿ ಆಗ ಮುಂಚಿತ ಒಪ್ಪಿಗೆಯನ್ನು ಪಡೆಯಬೇಕು, ಇಲ್ಲವಾದರೆ ಅಪಾಯಕ್ಕೆ ಸಿಲುಕಲಿದ್ದೀರಿ’ ಎಂದೂ ಸೂಚಿಸಲಾಗಿತ್ತು ಎಂದು ಐಒಎ ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.