T 20 ಸರಣಿ; ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸಿದ ಭಾರತದ ವನಿತೆಯರು
ಕೊನೆಯಲ್ಲೊಂದು ಸರ್ವಾಂಗೀಣ ಪ್ರದರ್ಶನ
Team Udayavani, Dec 10, 2023, 11:19 PM IST
ಮುಂಬಯಿ: ರವಿವಾರದ ಅಂತಿಮ ಟಿ20 ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತದ ವನಿತೆಯರು ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೌರ್ ಪಡೆ ಕ್ಲೀನ್‌ಸಿÌàಪ್ ಕಂಟಕದಿಂದ ಪಾರಾಗಿ ಸರಣಿ ಸೋಲಿನ ಅಂತರವನ್ನು 2-1ಕ್ಕೆ ಇಳಿಸಿಕೊಂಡಿತು.
ಭಾರತದ ಗೆಲುವಿನ ಅಂತರ 5 ವಿಕೆಟ್. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಸರಿಯಾಗಿ 20 ಓವರ್‌ಗಳಲ್ಲಿ 126ಕ್ಕೆ ಕುಸಿದರೆ, ಭಾರತ 19 ಓವರ್‌ಗಳಲ್ಲಿ 5 ವಿಕೆಟಿಗೆ 127 ರನ್ ಮಾಡಿ ಸಂಭ್ರಮಿಸಿತು.
ಚೇಸಿಂಗ್ ವೇಳೆ ಸ್ಮತಿ ಮಂಧನಾ, ಜೆಮಿಮಾ ರೋಡ್ರಿಗಸ್ ಭಾರತವನ್ನು ಆಧರಿಸಿ ನಿಂತರು. ಮಂಧನಾ ಎಸೆತಕ್ಕೊಂದರಂತೆ 48 ರನ್ ಮಾಡಿದರು (5 ಬೌಂಡರಿ, 2 ಸಿಕ್ಸರ್). ಜೆಮಿಮಾ ಕೊಡುಗೆ 29 ರನ್.
ರೇಣುಕಾ ಸಿಂಗ್ ಠಾಕೂರ್ (23ಕ್ಕೆ 2), ಸೈಕಾ ಇಶಾಖ್ (22ಕ್ಕೆ 3), ಶ್ರೇಯಾಂಕಾ ಪಾಟೀಲ್ (19ಕ್ಕೆ 3) ಮತ್ತು ಅಮನ್‌ಜೋತ್ ಕೌರ್ (25ಕ್ಕೆ 2) ಬೌಲಿಂಗ್ ದಾಳಿಯನ್ನು ತಡೆದು ನಿಲ್ಲಲು ಇಂಗ್ಲೆಂಡ್‌ನಿಂದ ಸಾಧ್ಯವಾಗಲಿಲ್ಲ. 15ನೇ ಓವರ್‌ನಲ್ಲಿ 76ಕ್ಕೆ 8 ವಿಕೆಟ್ ಕಳೆದುಕೊಂಡ ಆಂಗ್ಲರ ತಂಡ ನೂರರ ಗಡಿ ದಾಟುವುದೇ ಅನುಮಾನ ಎಂಬ ಸ್ಥಿತಿಯಲ್ಲಿತ್ತು. ಆದರೆ ನಾಯಕಿ ಹೀತರ್ ನೈಟ್ ಕಡೇ ಗಳಿಗೆಯಲ್ಲಿ ತೋರಿದ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಸ್ಕೋರ್ ಏರಿತು.
ನೈಟ್ ಆಕ್ರಮಣಕಾರಿ ಬೀಸುಗೆಯಲ್ಲಿ 52 ರನ್ ಹೊಡೆದರು. 42 ಎಸೆತಗಳ ಈ ಆಟದ ವೇಳೆ 3 ಸಿಕ್ಸರ್, 3 ಬೌಂಡರಿ ಸಿಡಿಯಲ್ಪಟ್ಟಿತು. ಆ್ಯಮಿ ಜೋನ್ಸ್ 25 ಮತ್ತು ಚಾರ್ಲೋಟ್ ಡೀನ್ ಅಜೇಯ 16 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್-126 (ನೈಟ್ 52, ಆ್ಯಮಿ 25, ಡೀನ್ 16, ಶ್ರೇಯಾಂಕಾ 19ಕ್ಕೆ 3, ಸೈಕಾ 22ಕ್ಕೆ 3, ರೇಣುಕಾ 23ಕ್ಕೆ 2). ಭಾರತ-19 ಓವರ್‌ಗಳಲ್ಲಿ 5 ವಿಕೆಟಿಗೆ 127 (ಮಂಧನಾ 48, ಜೆಮಿಮಾ 29, ದೀಪ್ತಿ 12, ಕೆಂಪ್ 24ಕ್ಕೆ 2, ಎಕ್Éಸ್ಟೋನ್ 40ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.