![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 17, 2024, 6:00 AM IST
ಕಿಂಗ್ಸ್‌ಟೌನ್: ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್-8 ಹಂತದ ಚಿತ್ರಣ ಒಂದು ಹಂತಕ್ಕೆ ಬಂದಿದೆ. ಆದರೆ “ಡಿ’ ವಿಭಾಗದಿಂದ 2ನೇ ತಂಡ ಯಾರು ಎಂಬುದು ಇನ್ನೂ ಇತ್ಯರ್ಥ ವಾಗಿಲ್ಲ. ಸೋಮವಾರದ ಪಂದ್ಯ ಗಳು ಈ ಕುತೂಹಲವನ್ನು ತಣಿಸಲಿವೆ.
“ಡಿ’ ವಿಭಾಗದಿಂದ ದಕ್ಷಿಣ ಆಫ್ರಿಕಾ ಈಗಾಗಲೇ ತೇರ್ಗಡೆಯಾಗಿದೆ. ನಾಲ್ಕನ್ನೂ ಗೆದ್ದ ಅಜೇಯ ಸಾಧನೆ ಹರಿಣ ಗಳದ್ದು. ಮೂರರಲ್ಲಿ 2 ಪಂದ್ಯ ಗೆದ್ದ ಬಾಂಗ್ಲಾದೇಶ ದ್ವಿತೀಯ ಸ್ಥಾನದಲ್ಲಿದೆ. ಸೋಮವಾರ ಅದು ನೇಪಾಲ ವಿರುದ್ಧ ಅಂತಿಮ ಲೀಗ್ ಪಂದ್ಯವಾಡಲಿದ್ದು, ಗೆದ್ದರೆ ದ್ವಿತೀಯ ಸ್ಥಾನದೊಂದಿಗೆ ಸೂಪರ್-8 ಹಂತಕ್ಕೆ ಏರಲಿದೆ.
ಒಂದು ಗಂಟೆ ಅಂತರದಲ್ಲಿ ಶ್ರೀಲಂಕಾ- ನೆದರ್ಲೆಂಡ್ಸ್ ಕೂಡ ಎದು ರಾಗಲಿವೆ. ಇಲ್ಲಿ ಲಂಕಾ ಹೊರಬಿದ್ದಾ ಗಿದೆ. ನೆದರ್ಲೆಂಡ್ಸ್ ಒಂದನ್ನಷ್ಟೇ ಜಯಿ ಸಿದ್ದು, 2 ಅಂಕ ಹೊಂದಿದೆ. ರನ್‌ರೇಟ್ ಮೈನಸ್‌ನಲ್ಲಿದೆ (-0.408). ಒಂದು ವೇಳೆ ನೇಪಾಲ ವಿರುದ್ಧ ಬಾಂಗ್ಲಾ ದೊಡ್ಡ ಸೋಲನುಭವಿಸಿದರೆ, ನೆದರ್ಲೆಂಡ್ಸ್ ಭಾರೀ ಅಂತರದಿಂದ ಲಂಕಾ ವಿರುದ್ಧ ಜಯ ಸಾಧಿಸಿದರೆ… ಎಂಬೆಲ್ಲ ಲೆಕ್ಕಾ ಚಾರವಿದೆ. ಈ ಪಂದ್ಯಾವಳಿ ಅನೇಕ ಅಚ್ಚರಿ ಹಾಗೂ ಏರುಪೇರಿಗೆ ಸಾಕ್ಷಿ ಯಾಗಿರುವ ಕಾರಣ ಏನೂ ಸಂಭವಿ ಸಬಹುದು ಎನ್ನಲಡ್ಡಿಯಿಲ್ಲ. ಆದರೆ ಈಗಿನ ಲೆಕ್ಕಾಚಾರದಂತೆ ಬಾಂಗ್ಲಾ ಮುನ್ನ ಡೆಯನ್ನು ತಡೆಯುವುದು ಅಸಾಧ್ಯ.
ಶ್ರೀಲಂಕಾ ವಿರುದ್ಧ ಲಭಿಸಿದ 2 ವಿಕೆಟ್ ಗೆಲುವಿನಿಂದಾಗಿ ಬಾಂಗ್ಲಾಕ್ಕೆ ಅದೃಷ್ಟ ಕೈಹಿಡಿಯಿತು. ಅನಂತರ ದಕ್ಷಿಣ ಆಫ್ರಿಕಾ ವಿರುದ್ಧ ಎಡವಿದರೆ, ನೆದರ್ಲೆಂಡ್ಸ್‌ಗೆ 25 ರನ್ ಸೋಲುಣಿಸಿತು.
ಇತ್ತ ನೇಪಾಲ ಮೂರರಲ್ಲಿ 2 ಸೋಲನುಭವಿಸಿದೆ. ಒಂದು ಪಂದ್ಯ ರದ್ದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಐತಿಹಾಸಿಕ ಗೆಲುವು ಕೂದಲೆಳೆಯ ಅಂತರದಿಂದ ಕೈತಪ್ಪಿದೆ. ಅಂತರ ಕೇವಲ ಒಂದು ರನ್. ಬಾಂಗ್ಲಾವನ್ನು ಮಣಿಸಿದರೆ ಹಿಮಾಲಯದ ತಪ್ಪಲಿನ ದೇಶಕ್ಕೆ ದೊಡ್ಡದೊಂದು ಗೌರವ ಒಲಿಯುವುದರಲ್ಲಿ ಅನುಮಾನವಿಲ್ಲ. ಅದು ಸಣ್ಣ ಗೆಲುವಾದರೂ ಸಾಕು!
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.