T20: ನ್ಯೂಜಿಲ್ಯಾಂಡ್ ವಿರುದ್ಧ ಇಂಗ್ಲೆಂಡ್‌ಗೆ ಮತ್ತೊಂದು ಜಯ
Team Udayavani, Sep 2, 2023, 11:49 PM IST
ಮ್ಯಾಂಚೆಸ್ಟರ್: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ 4 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಸತತ 2 ಪಂದ್ಯಗಳನ್ನು ಗೆದ್ದು ಮುನ್ನಡೆ ಸಾಧಿಸಿದೆ. ಇಲ್ಲಿನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ನಡೆದ ದ್ವಿತೀಯ ಮುಖಾಮುಖೀಯಲ್ಲಿ ಜಾಸ್ ಬಟ್ಲರ್ ಬಳಗ 95 ರನ್ನುಗಳ ಬೃಹತ್ ಗೆಲುವು ದಾಖಲಿಸಿತು.
ಇಂಗ್ಲೆಂಡ್ 4 ವಿಕೆಟಿಗೆ 198 ರನ್ ಪೇರಿಸಿ ಸವಾಲೊಡ್ಡಿದರೆ, ನ್ಯೂಜಿಲ್ಯಾಂಡ್ 13.5 ಓವರ್‌ಗಳಲ್ಲಿ 103ಕ್ಕೆ ಆಲೌಟ್ ಆಯಿತು. ಮೊದಲ ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್‌ಗಳಿಂದ ಗೆದ್ದಿತ್ತು.
ಇಂಗ್ಲೆಂಡ್‌ನ ಬೃಹತ್ ಮೊತ್ತದಲ್ಲಿ ಆರಂಭಕಾರ ಜಾನಿ ಬೇರ್‌ಸ್ಟೊ ಮತ್ತು ಹ್ಯಾರಿ ಬ್ರೂಕ್ ಪಾಲು ದೊಡ್ಡದಿತ್ತು. ಬೇರ್‌ಸ್ಟೊ 60 ಎಸೆತಗಳಿಂದ 86 ರನ್ ಸಿಡಿಸಿದರು (8 ಬೌಂಡರಿ, 4 ಸಿಕ್ಸರ್). ಅವರ ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಬ್ರೂಕ್ 36 ಎಸೆತ ಎದುರಿಸಿ 67 ರನ್ ಬಾರಿಸಿದರು (5 ಬೌಂಡರಿ, 5 ಸಿಕ್ಸರ್).
ನ್ಯೂಜಿಲ್ಯಾಂಡ್ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದವರು ಮೊದಲ ಪಂದ್ಯ ಆಡಲಿಳಿದ ಮಧ್ಯಮ ವೇಗಿ ಗಸ್ ಅಟಿRನ್ಸನ್. ಅವರು ಕೇವಲ 2.5 ಓವರ್‌ಗಳ ಸ್ಪೆಲ್‌ನಲ್ಲಿ 20 ರನ್ನಿತ್ತು 4 ವಿಕೆಟ್ ಉಡಾಯಿಸಿದರು. 39 ರನ್ ಮಾಡಿದ ಟಿಮ್ ಸೀಫರ್ಟ್ ಅವರದು ಕಿವೀಸ್ ಸರದಿಯ ಅತ್ಯಧಿಕ ಗಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.