T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿನ್
Team Udayavani, May 5, 2024, 8:41 AM IST
ನವದೆಹಲಿ: ಬ್ಯಾಟರ್‌ಗಳ ಭರಾಟೆ ಹೆಚ್ಚುತ್ತಿರುವ ಈ ಆಧುನಿಕ ಕ್ರಿಕೆಟ್ ದಿನಗಳಲ್ಲಿ ಮೈದಾನಗಳ ಗಾತ್ರ ಅಪ್ರಸ್ತುತವೆನಿಸುತ್ತಿದೆ ಎಂದು ಅನುಭವಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹೇಳಿದ್ದಾರೆ.
ಕ್ರಿಕೆಟ್‌ನಲ್ಲಿ ಪವರ್ ಹಿಟ್ಟಿಂಗ್ ಬೆಳೆಯುತ್ತಿರುವುದು ಮೈದಾನದ ಗಾತ್ರವನ್ನು ಅಪ್ರಸ್ತುತವೆನಿಸುತ್ತಿದೆ ಎಂದಿರುವ ಅವರು, ಟಿ20 ಪಂದ್ಯಗಳು ಒನ್ ಸೈಡೆಡ್ ಗೇಮ್ ಗಳಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ 277 ಮತ್ತು 287 ಟೋಟಲ್ ಬಾರಿಸಿ, 2013ರಲ್ಲಿ ಅತ್ಯಧಿಕ ಟೋಟಲ್ ಆಗಿ ಆರ್‌ಸಿಬಿ ನಿರ್ಮಿಸಿದ್ದ 263 ರನ್‌ಗಳ ದಾಖಲೆಯನ್ನು 2 ಬಾರಿ ಮುರಿದಿತ್ತು. ಅಲ್ಲದೆ, ಕೋಲ್ಕತಾ ಕೂಡ 272 ರನ್ ಬಾರಿಸಿತ್ತು. ಇಂಪ್ಯಾಕ್ಟ್ ಪ್ಲೇಯರ್‌ನಿಯಮದಿಂದಾಗಿ ಈ ದಿನಗಳಲ್ಲಿ 250 ಟೋಟಲ್ ಕೂಡ ಸವಾಲಿನದ್ದೆನಿಸುತ್ತಿಲ್ಲ. ಇದೇ ವಿಚಾರವಾಗಿ ಅಶ್ವಿನ್ ಮಾತನಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಶ್ವಿನ್, ಹಿಂದಿನ ದಿನಗಳಲ್ಲಿ ನಿರ್ಮಿಸಲಾಗಿದ್ದ ಕ್ರೀಡಾಂಗಣಗಳು ಈಗ ಅಪ್ರಸ್ತುತವಾಗುತ್ತಿವೆ. ಆಗ ಬಳಸಲಾಗುತ್ತಿದ್ದ ಬ್ಯಾಟ್‌ಗಳನ್ನು ಗಲ್ಲಿ ಕ್ರಿಕೆಟ್‌ಗೂ ಬಳಸಲಾಗುತ್ತಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.