ಟಿ20 ಸರಣಿ ಸಮಬಲಕ್ಕೆ ಭಾರತ ಪ್ರಯತ್ನ: ಮತ್ತೆ ಸಿಡಿಯಲು ಹೆಟ್‌ಮೈರ್-ಹೋಪ್ ಕಾತರ
Team Udayavani, Dec 18, 2019, 12:11 AM IST
ವಿಶಾಖಪಟ್ಟಣ: ಆತಿಥೇಯ ಭಾರತ ವಿರುದ್ಧದ ಟಿ20 ಸರಣಿಯನ್ನು ಕಳೆದುಕೊಂಡ ಆಘಾತದಲ್ಲಿರುವ ವೆಸ್ಟ್‌ಇಂಡೀಸ್ ಏಕದಿನ ಸರಣಿಯಲ್ಲಿ ಭರ್ಜರಿಯಾಗಿ ಆಡುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ವಿಂಡೀಸ್ ಏಕದಿನ ಸರಣಿಯನ್ನು ವಶಪಡಿಸುವ ಉತ್ಸಾಹದಲ್ಲಿದೆ. ಸರಣಿಯ ದ್ವಿತೀಯ ಪಂದ್ಯ ಬುಧವಾರ ವಿಶಾಖಪಟ್ಟಣದಲ್ಲಿ ನಡೆಯಲಿದ್ದು ಪಂದ್ಯ ಗೆದ್ದು ಸರಣಿ ಗೆಲುವಿನ ಸಂಭ್ರಮ ಆಚರಿಸಲು ವಿಂಡೀಸ್ ಹಾತೊರೆಯುತ್ತಿದೆ.
ಭಾರತಕ್ಕೆ ಹಲವು ಸವಾಲು
0-1 ಹಿನ್ನಡೆಯಿಂದಾಗಿ ಸರಣಿ ಯನ್ನೇ ಕಳೆದುಕೊಳ್ಳಬಹುದಾದ ಆತಂಕ, ಬೌಲರ್‌ಗಳ ಕಳಪೆ ನಿರ್ವಹಣೆ, ಗಾಯದ ಸಮಸ್ಯೆ, ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಆತಿಥೇಯರಿಗೆ ದೊಡ್ಡ ಪ್ರಶ್ನೆಯಾಗಿದೆ. ಇದೀಗ ಸರಣಿ ಗೆಲ್ಲಬೇಕಾದರೆ ದ್ವಿತೀಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಸೋತರೆ ಭಾರತದ ಸತತ ಸರಣಿ ಗೆಲುವಿನ ಓಟ ಅಂತ್ಯಗೊಳ್ಳಲಿದೆ.
ಮೊದಲ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ನಡೆಸಿದ ನಾಯಕ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಈ ಪಂದ್ಯದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ಬ್ಯಾಟಿಂಗ್ ನಡೆಸಬೇಕಾಗಿದೆ. ಈ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲವೇ ಮಾಡಿ ಪಂದ್ಯವಾಗಿದೆ. ಯುವ ಆಟಗಾರರನ್ನೆ ಹೆಚ್ಚಾಗಿ ನೆಚ್ಚಿಕೊಂಡ ಭಾರತಕ್ಕೆ ಇದೊಂದು ಸವಾಲಿನ ಸರಣಿಯೂ ಕೂಡ ಹೌದು. ಮೊದಲ ಪಂದ್ಯದಲ್ಲಿ ಮಿಂಚಿದ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಬೌಲಿಂಗ್ ವೈಫಲ್ಯ
ಅನುಭವಿ ಬೌಲರ್‌ಗಳ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಯುವ ಬೌಲರ್‌ಗಳಾದ ದೀಪಕ್ ಚಹರ್, ಶಿವಂ ದುಬೆ ನಿರೀಕ್ಷಿತ ಮಟ್ಟದಲ್ಲಿ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಕಳೆದ ಪಂದ್ಯದಲ್ಲಿ ಕುಲದೀಪ್ ಯಾದವ್, ರವೀಂದ್ರ ಜಡೇಜ, ಕೇದರ್ ಜಾಧವ್ ದುಬಾರಿ ಮತ್ತು ವಿಕೆಟ್ ಪಡೆಯುವಲ್ಲಿ ವಿಫಲರಾಗಿರುವುದು ಪಂದ್ಯ ಸೋಲಲು ಪ್ರಮುಖ ಕಾರಣವಾಗಿತ್ತು. ವಿಶಾಖಪಟ್ಟಣದಲ್ಲೂ ನಮ್ಮ ಬೌಲರ್‌ಗಳು ಎದುರಾಳಿ ಆಟಗಾರರನ್ನು ಕಟ್ಟಿಹಾಕಲು ವಿಫಲರಾದರೆ ಭಾರತಕ್ಕೆ ಸೋಲು ಖಚಿತ ಎನ್ನಬಹುದು.
ವಿಂಡೀಸ್ ಸಮರ್ಥ ತಂಡ
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ವಿಂಡೀಸ್ ಹೆಚ್ಚು ಬಲಿಷ್ಠವಾಗಿದೆ. ಟಿ20 ಸರಣಿಯಲ್ಲಿ ಎಡವಿದ ವಿಂಡೀಸ್ ಏಕದಿನ ಸರಣಿ ವೇಳೆಗೆ ತಂಡದ ವೈಫಲ್ಯವನ್ನರಿತು ಸಮರ್ಥ ತಂಡವನ್ನು ರಚಿಸಿಕೊಂಡಿದೆ ಎನ್ನುವುದಕ್ಕೆ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದ ಗೆಲುವೇ ಸಾಕ್ಷಿ. ಎದುರಾಳಿ ಬೌಲರ್‌ಗಳನ್ನು ದಂಡಿಸಿದ್ದ ಹೆಟ್‌ಮೈರ್-ಹೋಪ್ 2ನೇ ವಿಕೆಟಿಗೆ 218 ರನ್ ಸೂರೆಗೈದು ತಂಡದ ಭರ್ಜರಿ ಗೆಲುವಿಗೆ ಕಾರಣಕರ್ತರಾಗಿದ್ದರು. ಅವರಿಬ್ಬರು ಈ ಪಂದ್ಯದಲ್ಲೂ ಬ್ಯಾಟಿಂಗ್ ಅಬ್ಬರ ಮುಂದುವರಿಸಿದರೆ ಭಾರತಕ್ಕೆ ಕಷ್ಟ.
ವೆಸ್ಟ್‌ಇಂಡೀಸ್ ಆರಂಭಿಕ ಹಿನ್ನಡೆ ಅನುಭವಿಸಿದರೂ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠವಾಗಿದೆ. ಹೆಟ್‌ಮೈರ್, ಚೇಸ್, ಪೂರಣ್, ಹೋಲ್ಡರ್, ಪೊಲಾರ್ಡ್… ಹೀಗೆ ಆಟಗಾರರ ಪಟ್ಟಿಯೇ ಮುಂದೆ ಸಾಗುತ್ತದೆ. ವಿಂಡೀಸ್ ಬೌಲಿಂಗ್ ವಿಭಾಗ ಕೂಡ ಘಾತಕವಾಗಿದೆ. ಕಾಟ್ರೆಲ್, ಅಲ್ಜಾರಿ ಜೋಸೆಫ್ ಮತ್ತು ಕೀಮೊ ಪೌಲ್ ಉತ್ತಮ ಲಯದಲ್ಲಿದ್ದು ಎದು ರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಉಳಿದಂತೆ ಹೋಲ್ಡರ್, ರೋಸ್ಟನ್ ಚೇಸ್, ಪೊಲಾರ್ಡ್ ಕೂಡ ಉತ್ತಮ ಬೌಲಿಂಗ್ ನಡೆಸಬಲ್ಲರು.
ವಿಶಾಖಪಟ್ಟಣ ಕೊಹ್ಲಿಗೆ ಅದೃಷ್ಟ ತಾಣ
ವಿರಾಟ್ ಕೊಹ್ಲಿ ಇಲ್ಲಿ 5 ಪಂದ್ಯ ಆಡಿದ್ದಾರೆ. ಒಟ್ಟು 556 ರನ್ ಬಾರಿಸಿದ್ದಾರೆ. ಮೂರು ಶತಕ, 2 ಅರ್ಧಶತಕ (99 ರನ್, 65 ರನ್) ಹೊಂದಿದ್ದಾರೆ. ಒಟ್ಟಾರೆ 139 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಹೀಗಾಗಿ ಮತ್ತೂಮ್ಮೆ ಈ ಕ್ರೀಡಾಂಗಣದಲ್ಲಿ ಕೊಹ್ಲಿ ಸ್ಫೋಟಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಸ್ಪಿನ್ ದಾಳಿ ಸಾಧ್ಯತೆ
ಮೊದಲ ಪಂದ್ಯದಲ್ಲಿ ಆಲ್‌ರೌಂಡರ್‌ಗಳಾದ ಶಿವಂ ದುಬೆ ಹಾಗೂ ರವೀಂದ್ರ ಜಡೇಜ ಆಡಿದ್ದರು. ಪರಿಣಾಮಕಾರಿಯಾಗಿ ಪರಿಣಮಿಸಿರಲಿಲ್ಲ. ಹೀಗಾಗಿ 2ನೇ ಪಂದ್ಯದಲ್ಲಿ ಕುಲದೀಪ್ ಜತೆಗೆ ಸ್ಪಿನ್ನರ್ ಯಜುವೇಂದ್ರ ಚಹಲ್ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಮಾಯಾಂಕ್, ಮನೀಷ್‌ಗೆ ಸ್ಥಾನ ಕಷ್ಟ
ರೋಹಿತ್ ಶರ್ಮ ಹಾಗೂ ಕೆ.ಎಲ್.ರಾಹುಲ್ ಆರಂಭಿಕರಾಗಿರುವುದರಿಂದ ಭಾರತ ಪರ ಇನ್ನಿಂಗ್ಸ್ ಆರಂಭಿಸುವ ಅವಕಾಶ ಕನ್ನಡಿಗ ಮಾಯಾಂಕ್ ಅಗರ್ವಾಲ್‌ಗೆ ಸಿಗುವ ಸಾಧ್ಯತೆ ಕಡಿಮೆ. ಮಾಯಾಂಕ್ ಮೀಸಲು ಆರಂಭಿಕರಾಗಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ ಉತ್ತಮ ಬ್ಯಾಟಿಂಗ್ ನಿರ್ವಹಿಸಿದ್ದಾರೆ. ಹೀಗಾಗಿ ಮತ್ತೋರ್ವ ಕನ್ನಡಿಗ ಬ್ಯಾಟ್ಸ್ ಮನ್ ಮನೀಷ್ ಪಾಂಡೆಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.