T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Team Udayavani, Nov 14, 2024, 8:24 AM IST
ಸೆಂಚುರಿಯನ್: ಮುಂಬಯಿಯ ಆಟಗಾರ ತಿಲಕ್ ವರ್ಮ ಅವರ ಸ್ಫೋಟಕ ಶತಕದ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆರು ವಿಕೆಟಿಗೆ 219 ರನ್ನುಗಳ ಬೃಹತ್ ಮೊತ್ತ ಪೇರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಸಂಜು ಸ್ಯಾಮ್ಸನ್ ಅವರನ್ನು ಬೇಗನೇ ಕಳೆದುಕೊಂಡರೂ ಅಭಿಷೇಕ್ ಶರ್ಮ ಮತ್ತು ತಿಲಕ್ ವರ್ಮ ತಂಡವನ್ನು ಆಧರಿಸಿದರು. ಅವರಿಬ್ಬರು ದ್ವಿತೀಯ ವಿಕೆಟಿಗೆ ತಾಳ್ಮೆಯ ಆಟವಾಡಿ ಕೇವಲ 8.4 ಓವರ್‌ಗಳಲ್ಲಿ 107 ರನ್ ಪೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್ 50 ರನ್ನಿಗೆ ಔಟಾದ ಬಳಿಕ ತಂಡ ಕುಸಿಯತೊಡಗಿತು. ಅಭಿಷೇಕ್ 25 ಎಸೆತ ಎದುರಿಸಿ 3 ಬೌಂಡರಿ ಮತ್ತು 5 ಸಿಕ್ಸರ್ ಹೊಡೆದಿದ್ದರು. ಈ ಮೊದಲು ಸ್ಯಾಮ್ಸನ್ ಶೂನ್ಯಕ್ಕೆ ಔಟಾಗಿ ನಿರಾಶೆ ಅನುಭವಿಸಿದ್ದರು. ಆವರು ಮೊದಲ ಟಿ20ಯಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದರು.
ವಿಕೆಟ್‌ನ ಒಂದು ಕಡೆ ತಿಲಕ್ ವರ್ಮ ಬಿರುಸಿನ ಆಟವಾಡಿದರೆ ಇನ್ನೊಂದು ಕಡೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಉತ್ತಮವಾಗಿ ಆಡಲು ವಿಫಲರಾದರು. ಇವರಿಬ್ಬರ ಪತನದ ಬಳಿಕ ತಿಲಕ್ ಸ್ಫೋಟಕವಾಗಿ ಆಡಿದರು. ರಿಂಕು ಜತೆ 5ನೇ ವಿಕೆಟಿಗೆ 58 ರನ್ ಪೇರಿಸಿದರು. ಇದರಲ್ಲಿ ರಿಂಕು ಪಾಲು 8 ರನ್ ಮಾತ್ರ. ರಿಂಕು ಔಟಾದ ಬಳಿಕವೂ ಬಿರುಸಿನ ಆಟವಾಡಿದ ತಿಲಕ್ ವರ್ಮ ಶತಕ ಪೂರ್ತಿಗೊಳಿಸಿ ಸಂಭ್ರಮಿಸಿದರು. ಇದು ಟಿ20ಯಲ್ಲಿ ಅವರ ಚೊಚ್ಚಲ ಶತಕವಾಗಿದೆ. ಭಾರತದ ಇನ್ನಿಂಗ್ಸ್ ಮುಗಿದಾಗ ತಿಲಕ್ 107 ರನ್ ಗಳಿಸಿ ಆಡುತ್ತಿದ್ದರು. 56 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 7 ಸಿಕ್ಸರ್ ಬಾರಿಸಿದ್ದರು.
ಸಂಕ್ಷಿಪ್ತ ಸ್ಕೋರು: ಭಾರತ ಆರು ವಿಕೆಟಿಗೆ 219 (ಅಭಿಷೇಕ್ ಶರ್ಮ 50, ತಿಲಕ್ ವರ್ಮ 107 ಔಟಾಗದೆ, ಆ್ಯಂಡಿಲ್ ಸಿಮೆಲೆನ್34ಕ್ಕೆ 2, ಕೇಶವ ಮಹಾರಾಜ್ 36ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.