ಮೆಲ್ಬರ್ನ್ ಮಳೆಗೆ ಟಿ20 ವಾಶೌಟ್
Team Udayavani, Nov 24, 2018, 6:00 AM IST
ಮೆಲ್ಬರ್ನ್: ಭಾರತ-ಆಸ್ಟ್ರೇಲಿಯ ನಡುವಿನ 2ನೇ ಟಿ20 ಪಂದ್ಯ ಮೆಲ್ಬರ್ನ್ ಮಳೆಯಲ್ಲಿ ಕೊಚ್ಚಿಹೋಗಿದೆ. ಇದರಿಂದಾಗಿ ಸರಣಿಯನ್ನು ಸಮಬಲಕ್ಕೆ ತರಿಸುವ ಕೊಹ್ಲಿ ಪಡೆಯ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ. ಎಂಸಿಜಿಯಲ್ಲಿ ನೆರೆದಿದ್ದ 60 ಸಾವಿರದಷ್ಟು ವೀಕ್ಷಕರು ನಿರಾಸೆ ಅನುಭವಿಸಿದರು.
ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಪಂದ್ಯದ ವೇಳೆಯೂ ಮಳೆ ಆಟವಾಡಿತ್ತು. ಅಲ್ಲಿ ಡಿ-ಎಲ್ ನಿಯಮದಂತೆ ಆಸ್ಟ್ರೇಲಿಯಕ್ಕಿಂತ ಜಾಸ್ತಿ ರನ್ ಪೇರಿಸಿಯೂ ಭಾರತ ಸೋಲನುಭವಿಸಿತ್ತು. ಆದರೆ ಮೆಲ್ಬರ್ನ್ ಪಂದ್ಯ ಆಸ್ಟ್ರೇಲಿಯದ 19 ಓವರ್‌ಗಳ ಆಟಕ್ಕೆ ಸೀಮಿತಗೊಂಡಿತು. ಆಗ ಆಸೀಸ್ 7 ವಿಕೆಟಿಗೆ 132 ರನ್ ಮಾಡಿತ್ತು.
ಸುಮಾರು 90 ನಿಮಿಷಗಳ ಕಾಲ ಸುರಿದ ಭಾರೀ ಮಳೆಯಿಂದ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ರಾತ್ರಿ 10.02ಕ್ಕೆ ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಲಾಯಿತು. ಈ ನಡುವೆ ಭಾರತಕ್ಕೆ 3 ಸಲ ಗೆಲುವಿನ ಗುರಿಯನ್ನು ಮರು ನಿಗದಿಗೊಳಿಸಲಾಗಿತ್ತು. ಮೊದಲ ಸಲ ಲಭಿಸಿದ್ದು 19 ಓವರ್‌ಗಳಲ್ಲಿ 137 ರನ್. ಅಂದರೆ ಕಾಂಗರೂ ಮೊತ್ತಕ್ಕಿಂತ 5 ರನ್ ಹೆಚ್ಚು. ಅನಂತರ 11 ಓವರ್‌ಗಳಲ್ಲಿ 90 ರನ್, 5 ಓವರ್‌ಗಳಲ್ಲಿ 46 ರನ್ ಟಾರ್ಗೆಟ್ ನಿಗದಿ ಮಾಡಲಾಯಿತು. ಆದರೆ ಮಳೆಯಿಂದ ಚೇಸಿಂಗ್ ಸಾಧ್ಯವಾಗಲೇ ಇಲ್ಲ.
ಸರಣಿಯ ಅಂತಿಮ ಪಂದ್ಯ ರವಿವಾರ ಸಿಡ್ನಿಯಲ್ಲಿ ನಡೆಯಲಿದೆ. ಸರಣಿಯನ್ನು ಸಮಬಲಕ್ಕೆ ತರುವ ದಾರಿ ಮಾತ್ರ ಭಾರತದ ಮುಂದಿದೆ. ಅರ್ಥಾತ್, ಟೀಮ್ ಇಂಡಿಯಾದ ಸತತ ದ್ವಿಪಕ್ಷೀಯ ಟಿ20 ಸರಣಿ ಗೆಲುವು 6 ಸರಣಿಗಳಿಗೆ ಕೊನೆಗೊಂಡಂತಾಗಿದೆ.
ಪರಿಣಾಮಕಾರಿ ಬೌಲಿಂಗ್
ಬ್ರಿಸ್ಬೇನ್ ಪಂದ್ಯಕ್ಕೆ ಹೋಲಿಸಿದರೆ ಮೆಲ್ಬರ್ನ್ನಲ್ಲಿ ಭಾರತದ ಬೌಲಿಂಗ್ ನಿರ್ವಹಣೆ ಚೇತೋಹಾರಿಯಾಗಿತ್ತು. ಕಳೆದ ಮುಖಾಮುಖೀಯ ತಂಡವನ್ನೇ ಕಣಕ್ಕಿಳಿಸಿದ ಭಾರತ, ದ್ವಿತೀಯ ಎಸೆತದಿಂದಲೇ ಕಾಂಗರೂ ವಿಕೆಟ್ ಬೇಟೆಯಾಡುತ್ತ ಹೋಯಿತು. ಭುವನೇಶ್ವರ್ ಮತ್ತು ಖಲೀಲ್ ಅಹ್ಮದ್ ಅವರ ಆರಂಭಿಕ ಸ್ಪೆಲ್ ಘಾತಕವಾಗಿತ್ತು. ಬಳಿಕ ಬುಮ್ರಾ ಕೂಡ ಇದೇ ಲಯದಲ್ಲಿ ಸಾಗಿದರು. ಈ ಮೂವರು ಸೇರಿಕೊಂಡು 41 ರನ್ ಆಗುವಷ್ಟರಲ್ಲಿ ಆತಿಥೇಯರ 4 ವಿಕೆಟ್ ಹಾರಿಸಿದರು.
ಕುಲದೀಪ್, ಕೃಣಾಲ್ ಪಾಂಡ್ಯ ಅವರಿಂದಲೂ ಉತ್ತಮ ಪ್ರದರ್ಶನ ಕಂಡುಬಂತು. 14ನೇ ಓವರ್ ಆರಂಭಕ್ಕೆ 74 ರನ್ನಿಗೆ 6 ವಿಕೆಟ್ ಬಿತ್ತು. ಬಳಿಕ ಬೆನ್ ಮೆಕ್‌ಡರ್ಮಟ್, ನಥನ್ ಕೋಲ್ಟರ್ ನೈಲ್ ಸೇರಿಕೊಂಡು ತಂಡದ ಕುಸಿತಕ್ಕೆ ತಡೆಯೊಡ್ಡಿದರು. ಔಟಾಗದೆ 32 ರನ್ ಮಾಡಿದ ಮೆಕ್‌ಡರ್ಮಟ್ ಅವರದು ಆಸೀಸ್ ಸರದಿಯ ಗರಿಷ್ಠ ಗಳಿಕೆ (2 ಬೌಂಡರಿ, 1 ಸಿಕ್ಸರ್). ಕೋಲ್ಟರ್ ನೈಲ್ 9 ಎಸೆತ ಎದುರಿಸಿ 18 ರನ್ ಮಾಡಿದರು. ಕೋಲ್ಟರ್ ನೈಲ್, ಬಿಲ್ಲಿ ಸ್ಟಾನ್‌ಲೇಕ್ ಬದಲು ಅವಕಾಶ ಪಡೆದಿದ್ದರು.
ಭಾರತದ ಎಲ್ಲ 5 ಮಂದಿ ಬೌಲರ್‌ಗಳೂ ವಿಕೆಟ್ ಸಂಪಾದಿಸುವಲ್ಲಿ ಯಶಸ್ವಿಯಾದರು.
ಸ್ಕೋರ್ ಪಟ್ಟಿ
ಆಸ್ಟ್ರೇಲಿಯ
ಡಿ’ಆರ್ಸಿ ಶಾರ್ಟ್ ಬಿ ಅಹ್ಮದ್ 14
ಆರನ್ ಫಿಂಚ್ ಸಿ ಪಂತ್ ಬಿ ಭುವನೇಶ್ವರ್ 0
ಕ್ರಿಸ್ ಲಿನ್ ಸಿ ಪಾಂಡ್ಯ ಬಿ ಅಹ್ಮದ್ 13
ಗ್ಲೆನ್ ಮ್ಯಾಕ್ಸ್‌ವೆಲ್ ಬಿ ಪಾಂಡ್ಯ 19
ಮಾರ್ಕಸ್ ಸ್ಟೋಯಿನಿಸ್ ಸಿ ಕಾರ್ತಿಕ್ ಬಿ ಬುಮ್ರಾ 4
ಬೆನ್ ಮೆಕ್‌ಡರ್ಮಟ್ ಔಟಾಗದೆ 32
ಅಲೆಕ್ಸ್ ಕ್ಯಾರಿ ಸಿ ಪಾಂಡ್ಯ ಬಿ ಕುಲದೀಪ್ 4
ಕೋಲ್ಟರ್ ನೈಲ್ ಸಿ ಪಾಂಡೆ (ಬದಲಿ) ಬಿ ಭುವನೇಶ್ವರ್ 18
ಆ್ಯಂಡ್ರೂé ಟೈ ಔಟಾಗದೆ 12
ಇತರ 16
ಒಟ್ಟು (19 ಓವರ್‌ಗಳಲ್ಲಿ 7 ವಿಕೆಟಿಗೆ) 132
ವಿಕೆಟ್ ಪತನ: 1-1, 2-27, 3-35, 4-41, 5-62, 6-74, 7-101.
ಬೌಲಿಂಗ್:
ಭುವನೇಶ್ವರ್ ಕುಮಾರ್ 3-0-20-2
ಖಲೀಲ್ ಅಹ್ಮದ್ 4-0-39-2
ಜಸ್‌ಪ್ರೀತ್ ಬುಮ್ರಾ 4-0-20-1
ಕುಲದೀಪ್ ಯಾದವ್ 4-0-23-1
ಕೃಣಾಲ್ ಪಾಂಡ್ಯ 4-0-20-1
3ನೇ ಪಂದ್ಯ: ರವಿವಾರ (ಸಿಡ್ನಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.