ಕಿವೀಸ್‌ಗೆ ಜಯ; ಸಮಬಲದಲ್ಲಿ ಸರಣಿ
ಟಿ20: ಕಳಪೆ ಫೀಲ್ಡಿಂಗ್ ಮಾಡಿದ ಇಂಗ್ಲೆಂಡಿಗೆ 21 ರನ್ ಸೋಲು
Team Udayavani, Nov 4, 2019, 1:28 AM IST
ವೆಲ್ಲಿಂಗ್ಟನ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯವನ್ನು 21 ರನ್ನುಗಳಿಂದ ಗೆದ್ದ ಕಿವೀಸ್ ಸರಣಿಯನ್ನು ಸಮಬಲಕ್ಕೆ ತಂದು ನಿಲ್ಲಿಸಿದೆ.
ರವಿವಾರ ಇಲ್ಲಿನ “ವೆಸ್ಟ್‌ಪಾಕ್ ಸ್ಟೇಡಿಯಂ’ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 8 ವಿಕೆಟ್ ಕಳೆದುಕೊಂಡು 176 ರನ್ನುಗಳ ಸವಾಲಿನ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 19.5 ಓವರ್‌ಗಳಲ್ಲಿ 155ಕ್ಕೆ ಆಲೌಟ್ ಆಯಿತು. ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರ ಅದ್ಭುತ ಫೀಲ್ಡಿಂಗ್ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರ ಘಾತಕ ಬೌಲಿಂಗ್ ಕಿವೀಸ್ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತು. ಗ್ರ್ಯಾಂಡ್‌ಹೋಮ್ 4 ಕ್ಯಾಚ್ ಪಡೆದರೆ, ಸ್ಯಾಂಟ್ನರ್ 25 ರನ್ನಿಗೆ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠರೆನಿಸಿದರು.
ನ್ಯೂಜಿಲ್ಯಾಂಡಿನ ಬೃಹತ್ ಮೊತ್ತಕ್ಕೆ ಇಂಗ್ಲೆಂಡಿನ ಕಳಪೆ ಕ್ಷೇತ್ರರಕ್ಷಣೆಯೂ ಕಾರಣವಾಯಿತು. ಮೊದಲ ಪಂದ್ಯದಲ್ಲಿ ಚೊಚ್ಚಲ ಅರ್ಧ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಆರಂಭಕಾರ ಜೇಮ್ಸ… ವಿನ್ಸ್ ಈ ಪಂದ್ಯದಲ್ಲಿ 3 ಕ್ಯಾಚ್‌ಗಳನ್ನು ಕೈಚೆಲ್ಲಿ ದುಬಾರಿಯಾಗಿ ಪರಿಣಮಿಸಿದರು.
ಗ್ರ್ಯಾಂಡ್‌ಹೋಮ್ ಮಿಂಚು
ಫಾರ್ಮ್ನಲ್ಲಿಲ್ಲದೆ ಪರದಾಡುತ್ತಿದ್ದ ಕಿವೀಸ್ ಆರಂಭಕಾರ ಮಾರ್ಟಿನ್ ಗಪ್ಟಿಲ್ 28 ಎಸೆತಗಳಿಂದ 41 ರನ್ (3 ಬೌಂಡರಿ, 2 ಸಿಕ್ಸರ್)ಬಾರಿಸಿ ಗಮನ ಸೆಳೆದರು. ಕೊನೆಯ ಹಂತದಲ್ಲಿ ಆಲ್‌ರೌಂಡರ್ ಜಿಮ್ಮಿ ನೀಶಮ್ 22 ಎಸೆತಗಳಲ್ಲಿ 42 ರನ್ ಬಾರಿಸಿ ತಂಡದ ಮೊತ್ತವನ್ನು ಬೆಳೆಸಿದರು.
ಗ್ರ್ಯಾಂಡ್‌ಹೋಮ್ ಬ್ಯಾಟಿಂಗ್‌ನಲ್ಲೂ ಮಿಂಚು ಹರಿಸಿದರು. ಅವರ 28 ರನ್ ಕೇವಲ 12 ಎಸೆತಗಳಲ್ಲಿ ಬಂತು (1 ಬೌಂಡರಿ, 3 ಸಿಕ್ಸರ್). ಬಳಿಕ ಮಾರ್ಗನ್, ಸ್ಯಾಮ್ ಬಿಲ್ಲಿಂಗ್ಸ್, ಸ್ಯಾಮ್ ಕರನ್ ಮತ್ತು ಲೂಯಿಸ್ ಗ್ರೆಗರಿ ಅವರ ಕ್ಯಾಚ್‌ಗಳನ್ನು ಪಡೆದು ಫೀಲ್ಡಿಂಗ್‌ನಲ್ಲೂ ಮಿಂಚು ಹರಿಸಿದರು.5 ಪಂದ್ಯಗಳ ಸರಣಿಯ 3ನೇ ಮುಖಾಮುಖೀ ಮಂಗಳವಾರ ನೆಲ್ಸನ್‌ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್-8 ವಿಕೆಟಿಗೆ 176 (ನೀಶಮ್ 42, ಗಪ್ಟಿಲ್ 41, ಜೋರ್ಡನ್ 23ಕ್ಕೆ 3, ಸ್ಯಾಮ್ ಕರನ್ 22ಕ್ಕೆ 2). ಇಂಗ್ಲೆಂಡ್-19.5 ಓವರ್‌ಗಳಲ್ಲಿ 155 (ಮಾಲನ್ 39, ಜೋರ್ಡನ್ 36, ಮಾರ್ಗನ್ 32, ಸ್ಯಾಂಟ್ನರ್ 25ಕ್ಕೆ 3, ಸೌಥಿ 25ಕ್ಕೆ 2, ಫರ್ಗ್ಯುಸನ್ 34ಕ್ಕೆ 2, ಸೋಧಿ 37ಕ್ಕೆ 2). ಪಂದ್ಯಶ್ರೇಷ್ಠ: ಮಿಚೆಲ್ ಸ್ಯಾಂಟ್ನರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.