ರಾಹುಲ್-ಕೊಹ್ಲಿ ಶತಕದ ಜತೆಯಾಟ; 6 ವಿಕೆಟ್‌ಗಳಿಂದ ಗೆದ್ದ ಭಾರತ
Team Udayavani, Dec 6, 2019, 10:33 PM IST
ಹೈದರಾಬಾದ್: ವೆಸ್ಟ್ ಇಂಡೀಸಿನ ಬೃಹತ್ ಮೊತ್ತಕ್ಕೆ ಬೆದರದೇ ಮುನ್ನುಗ್ಗಿ ಹೋದ ಭಾರತ, ಹೈದರಾಬಾದ್ ಟಿ20 ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು ಮೆರೆದಾಡಿದೆ.
ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಅವರ ಶತಕದ ಜತೆಯಾಟ ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ 5 ವಿಕೆಟಿಗೆ 207 ರನ್ ಪೇರಿಸಿದರೆ, ಭಾರತ 18.4 ಓವರ್‌ಗಳಲ್ಲಿ ಕೇವಲ 4 ವಿಕೆಟಿಗೆ 209 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಚೇಸಿಂಗ್ ವೇಳೆ ಭಾರತ ರೋಹಿತ್ ಶರ್ಮ (8) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಅನಂತರ ಯಾವುದೇ ಹಂತದಲ್ಲಿ ಒತ್ತಡಕ್ಕೆ ಸಿಲುಕಲಿಲ್ಲ. ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಬಹಳ ಬೇಗನೇ ದಡ ಮುಟ್ಟುವಲ್ಲಿ ಯಶಸ್ಸು ಕಂಡಿತು.
ಆರಂಭಕಾರ ರಾಹುಲ್-ನಾಯಕ ಕೊಹ್ಲಿ ಸೇರಿಕೊಂಡು ಕೆರಿಬಿಯನ್ ಬೌಲರ್‌ಗಳ ಮೇಲೆರಗಿ ಹೋದರು. 2ನೇ ವಿಕೆಟಿಗೆ 10.1 ಓವರ್‌ಗಳಿಂದ ಭರ್ತಿ 100 ರನ್ ಪೇರಿಸಿ ಗೆಲುವಿಗೆ ಮುನ್ನುಡಿ ಬರೆದರು. ಶಿಖರ್ ಧವನ್ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ರಾಹುಲ್ 40 ಎಸೆತಗಳಿಂದ 62 ರನ್ ಬಾರಿಸಿದರು (5 ಸಿಕ್ಸರ್, 4 ಬೌಂಡರಿ). ವಿರಾಟ್ ಕೊಹ್ಲಿ ಕೊಡುಗೆ ಅಜೇಯ 94 ರನ್. ಸರಿಯಾಗಿ 50 ಎಸೆತ ಎದುರಿಸಿದ ಕೊಹ್ಲಿ 6 ಸಿಕ್ಸರ್, 6 ಬೌಂಡರಿ ಸಿಡಿಸುವ ಮೂಲಕ ಭರಪೂರ ರಂಜನೆ ಒದಗಿಸಿದರು.
ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ರಿಷಭ್ ಪಂತ್ ಗಳಿಕೆ 9 ಎಸೆತಗಳಿಂದ 18 ರನ್. ಅವರು ಕೊಹ್ಲಿಯೊಂದಿಗೆ 48 ರನ್ ಜತೆಯಾಟದಲ್ಲಿ ಪಾಲ್ಗೊಂಡರು. ಆದರೆ ಶ್ರೇಯಸ್ ಅಯ್ಯರ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 4 ರನ್ ಮಾಡಿ ಪೊಲಾರ್ಡ್‌ಗೆ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು.
ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ಸ್ಫೋಟಕ ಆಟವಾಡಿ ಇನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. 207ರ ತನಕ ಬೆಳೆಯಿತು. ಭಾರತದ ಪಂದ್ಯದಲ್ಲಿ ಭಾರತದೆದುರು ವಿಂಡೀಸ್ ಇನ್ನೂರರ ಗಡಿ ದಾಟಿದ ಮೊದಲ ನಿದರ್ಶನ ಇದಾಗಿದೆ.
ಇದು ಭಾರತದ ವಿರುದ್ಧ ತವರಿನ ಪಂದ್ಯದಲ್ಲಿ ದಾಖಲಾದ 2ನೇ ಅತ್ಯಧಿಕ ಮೊತ್ತ. 2009ರ ನಾಗ್ಪುರ ಪಂದ್ಯದಲ್ಲಿ ಶ್ರೀಲಂಕಾ 215 ರನ್ ಪೇರಿಸಿದ್ದು ದಾಖಲೆ. ಒಟ್ಟಾರೆ ಭಾತರದೆದುರು ಭಾರತದಲ್ಲಿ ದಾಖಲಾದ 5ನೇ 200 ಪ್ಲಸ್ ಮೊತ್ತ ಇದಾಗಿದೆ.
ವೆಸ್ಟ್ ಇಂಡೀಸಿನ ಈ ಸವಾಲಿನ ಮೊತ್ತಕ್ಕೆ ಆರಂಭಕಾರ ಲೆಂಡ್ಲ್ ಸಿಮನ್ಸ್ ಹೊರತುಪಡಿಸಿ ಉಳಿದವರೆಲ್ಲ ಕಾರಣರಾದರು. ಮಧ್ಯಮ ಕ್ರಮಾಂಕದಲ್ಲಿ ಜತೆಗೂಡಿದ ಶಿಮ್ರನ್ ಹೆಟ್‌ಮೈರ್ ಮತ್ತು ನಾಯಕ ಕೈರನ್ ಪೊಲಾರ್ಡ್ ಜೋಡಿಯ ಬಿರುಸಿನ ಆಟಕ್ಕೆ ಟೀಮ್ ಇಂಡಿಯಾದ ಬೌಲಿಂಗ್ ಸಂಪೂರ್ಣವಾಗಿ ದಿಕ್ಕು ತಪ್ಪಿತು. ಇವರಿಬ್ಬರು ಭರ್ತಿ 7 ಓವರ್‌ಗಳಿಂದ ಹತ್ತರ ಸರಾಸರಿಯಲ್ಲಿ ರನ್ ಪೇರಿಸುತ್ತ 71 ರನ್ ಪೇರಿಸಿದರು.
“ಹಿಟ್’ ಪ್ರದರ್ಶನ ನೀಡಿದ ಹೆಟ್‌ಮೈರ್ 41 ಎಸೆತಗಳಿಂದ 56 ರನ್ ಸೂರೆಗೈದರು. ಸಿಡಿಸಿದ್ದು 4 ಸಿಕ್ಸರ್ ಮತ್ತು 2 ಬೌಂಡರಿ. ಪೊಲಾರ್ಡ್ ಕೇವಲ 19 ಎಸೆತ ಎದುರಿಸಿ 37 ರನ್ ಚಚ್ಚಿದರು. ಇದರಲ್ಲಿ 4 ಸಿಕ್ಸರ್, ಒಂದು ಬೌಂಡರಿ ಸೇರಿತ್ತು. ಇವರಿಬ್ಬರನ್ನೂ ಯಜುವೇಂದ್ರ ಚಹಲ್ ಒಂದೇ ಓವರಿನಲ್ಲಿ ಪೆವಿಲಿಯನ್ನಿಗೆ ಅಟ್ಟಿದರು.
ಅನಂತರ ಜಾಸನ್ ಹೋಲ್ಡರ್-ದಿನೇಶ್ ರಾಮದಿನ್ ಸೇರಿಕೊಂಡು 2.3 ಓವರ್‌ಗಳಿಂದ 34 ರನ್ ಬಾರಿಸಿ ಮೊತ್ತವನ್ನು ಇನ್ನೂರರಾಚೆ ವಿಸ್ತರಿಸುವಲ್ಲಿ ಯಶಸ್ವಿಯಾದರು.
ಆರಂಭಕಾರ ಲೆಂಡ್ಲ್ ಸಿಮನ್ಸ್ (2) ಬೇಗನೇ ಔಟಾದ ಬಳಿಕ ಎವಿನ್ ಲೆವಿಸ್-ಬ್ರ್ಯಾಂಡನ್ ಕಿಂಗ್ ಸೇರಿಕೊಂಡು ತಂಡಕ್ಕೆ ರಕ್ಷಣೆ ಒದಗಿಸಿದರು. 2ನೇ ವಿಕೆಟ್ ಜತೆಯಾಟದಲ್ಲಿ 51 ರನ್ ಒಟ್ಟುಗೂಡಿತು. ಲೆವಿಸ್ 17 ಎಸೆತಗಳಿಂದ 40 ರನ್ (3 ಬೌಂಡರಿ, 4 ಸಿಕ್ಸರ್), ಕಿಂಗ್ 23 ಎಸೆತಗಳಿಂದ 31 ರನ್ (3 ಬೌಂಡರಿ, 1 ಸಿಕ್ಸರ್) ಬಾರಿಸಿ ಮೆರೆದರು.
ಬಾಂಗ್ಲಾದೇಶ ವಿರುದ್ಧದ ಅಂತಿಮ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ್ದ ದೀಪಕ್ ಚಹರ್ ಇಲ್ಲಿ ಒಂದು ವಿಕೆಟಿಗೆ 56 ರನ್ ನೀಡಿದರು. ಇದು ಭಾರತದ ಟಿ20 ಪಂದ್ಯದ 3ನೇ ದುಬಾರಿ ಸ್ಪೆಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.