T20; 3 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ಜಯ; ಸರಣಿ ಸಮಬಲ
ಬೌಲರ್‌ಗಳ ಮೇಲಾಟವಾಗಿ ಪರಿಣಮಿಸಿದ ದ್ವಿತೀಯ ಪಂದ್ಯ
Team Udayavani, Nov 10, 2024, 11:46 PM IST
ಗೆಬೆರಾ: ಬೌಲರ್‌ಗಳ ಮೇಲಾಟ ವಾಗಿ ಪರಿಣಮಿಸಿದ ದ್ವಿತೀಯ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳಿಂದ ಭಾರತವನ್ನು ಮಣಿಸಿ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 124 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 19 ಓವರ್‌ಗಳಲ್ಲಿ 7 ವಿಕೆಟಿಗೆ 128 ರನ್ ಬಾರಿಸಿತು. ಭಾರತದ ಆರಂಭ ಆಘಾತಕಾರಿಯಾಗಿತ್ತು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಮಾರ್ಕೊ ಜಾನ್ಸೆನ್ 3ನೇ ಎಸೆತದಲ್ಲೇ ಬೌಲ್ಡ್ ಮಾಡಿದರು. ಸಂಜು ಖಾತೆಯನ್ನೇ ತೆರೆದಿರಲಿಲ್ಲ. ಅಭಿಷೇಕ್ ಶರ್ಮ (4) ಅವರ ವೈಫಲ್ಯ ಮತ್ತೆ ಮುಂದುವರಿಯಿತು. ದ್ವಿತೀಯ ಓವರ್‌ನಲ್ಲಿ ಕೋಟ್ಜಿ ಈ ವಿಕೆಟ್ ಉರುಳಿಸಿದರು. ನಾಯಕ ಸೂರ್ಯಕುಮಾರ್ ಕೂಡ ನಾಲ್ಕರ ಗಡಿ ದಾಟಲಿಲ್ಲ. 4 ಓವರ್ ಅಂತ್ಯಕ್ಕೆ 15ಕ್ಕೆ 3 ವಿಕೆಟ್ ಕಳೆದುಕೊಂಡ ಸಂಕಟ ಭಾರತದ್ದಾಯಿತು.
ತಿಲಕ್ ವರ್ಮ (20), ಭಡ್ತಿ ಪಡೆದು ಬಂದ ಅಕ್ಷರ್ ಪಟೇಲ್ (27) ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರಿದರು. 30 ರನ್ ಗಡಿ ದಾಟಿದ್ದು ಹಾರ್ದಿಕ್ ಪಾಂಡ್ಯ ಮಾತ್ರ (45 ಎಸೆತ, ಔಟಾಗದೆ 39).
ಚೇಸಿಂಗ್ ವೇಳೆ ದಕ್ಷಿಣ ಆಫ್ರಿಕಾ ವರುಣ್ ಚಕ್ರವರ್ತಿ ದಾಳಿಗೆ ತತ್ತರಿಸಿತು. ಚಕ್ರವರ್ತಿ ಸಾಧನೆ 17ಕ್ಕೆ 5 ವಿಕೆಟ್. ಇದು ಅವರ ಜೀವನಶ್ರೇಷ್ಠ ಬೌಲಿಂಗ್. ಸತತ ಎಸೆತಗಳಲ್ಲಿ ಕ್ಲಾಸೆನ್ ಮತ್ತು ಮಿಲ್ಲರ್ ವಿಕೆಟ್ ಉಡಾಯಿಸಿದರು. ಆಗ ಪಂದ್ಯ ಭಾರತದ ತೆಕ್ಕೆಗೆ ಬಂದಿತ್ತು. ಆದರೆ ಸ್ಟಬ್ಸ್ (ಔಟಾಗದೆ 47) ಮತ್ತು ಕೋಟಿj (ಔಟಾಗದೆ 19) ಸೇರಿ ಕೊಂಡು ತಂಡವನ್ನು ದಡ ಸೇರಿಸಿದರು.
ಕ್ರುಗರ್ ಬದಲು ಹೆಂಡ್ರಿಕ್ಸ್
ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ದಕ್ಷಿಣ ಆಫ್ರಿಕಾ ಒಂದು ಬದಲಾವಣೆ ಮಾಡಿಕೊಂಡಿತು. ಪ್ಯಾಟ್ರಿಕ್ ಕ್ರುಗರ್ ಬದಲು ರೀಝ ಹೆಂಡ್ರಿಕ್ಸ್ ಆಡಲಿಳಿದರು.
ಸಂಕ್ಷಿಪ್ತ ಸ್ಕೋರ್: ಭಾರತ-6 ವಿಕೆಟಿಗೆ 124 (ಪಾಂಡ್ಯ ಔಟಾಗದೆ 39, ಅಕ್ಷರ್ 27, ತಿಲಕ್ 20, ಮಾರ್ಕ್‌ರಮ್ 4ಕ್ಕೆ 1, ಸಿಮೆಲೇನ್ 20ಕ್ಕೆ 1, ಪೀಟರ್ 20ಕ್ಕೆ 1). ದಕ್ಷಿಣ ಆಫ್ರಿಕಾ-19 ಓವರ್‌ಗಳಲ್ಲಿ 7 ವಿಕೆಟಿಗೆ 128 (ಸ್ಟಬ್ಸ್ ಔಟಾಗದೆ 47, ಹೆಂಡ್ರಿಕ್ಸ್ 24, ಕೋಟ್ಜಿ ಔಟಾಗದೆ 19, ಚಕ್ರವರ್ತಿ 17ಕ್ಕೆ 5).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.