ಟಿ20: ಭಾರತಕ್ಕೆ ಪ್ರಯಾಸದ ಗೆಲುವು
ನವದೀಪ್ ಸೈನಿ 17 ರನ್ನಿಗೆ 3 ವಿಕೆಟ್ ; ಕೈರನ್ ಪೊಲಾರ್ಡ್ 49 ರನ್
Team Udayavani, Aug 4, 2019, 4:04 AM IST
ಲಾಡರ್‌ಹಿಲ್ (ಅಮೆರಿಕ): ಬ್ಯಾಟಿಂಗ್‌ನಲ್ಲಿ ಪರದಾಡಿದ ಹೊರತಾಗಿಯೂ ಭಾರತ ತಂಡವು ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಲು ಯಶಸ್ವಿಯಾಗಿದೆ. ಇದೇ ಮೈದಾನದಲ್ಲಿ ರವಿವಾರ ಎರಡನೇ ಪಂದ್ಯ ನಡೆಯಲಿದೆ.
ಗೆಲ್ಲಲು 96 ರನ್ ಗಳಿಸುವ ಗುರಿ ಪಡೆದ ಭಾರತ ತಂಡವು ಕೆಲವು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಆದರೆ ಗುರಿ ಅಲ್ಪಮೊತ್ತ ಇದ್ದ ಕಾರಣ ಭಾರತ 17.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ ಜಯಭೇರಿ ಬಾರಿಸಿತು.
ಹೊಸ ವೆಗಿ ನವದೀಪ್ ಸೈನಿ ಸಹಿತ ಭಾರತೀಯ ಬೌಲರ್‌ಗಳ ಬಿಗು ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟಿಗೆ 95 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಭಾರತೀಯರೂ ಕೂಡ ವಿಂಡೀಸ್ ದಾಳಿಯನ್ನು ಎದುರಿಸಲು ಒದ್ದಾಡಿದರು. ರೋಹಿತ್, ನಾಯಕ ಕೊಹ್ಲಿ , ಮನೀಷ್ ಪಾಂಡೆ ಸ್ವಲ್ಪಮಟ್ಟಿಗೆ ಹೋರಾಟದ ಬ್ಯಾಟಿಂಗ್ ಪ್ರದರ್ಶಿಸಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಸಿಕ್ಸರ್ ಬಾರಿಸಿ ತಂಡದ ಗೆಲುವು ಸಾರಿದರು.
ಶಿಖರ್ ಧವನ್ ಒಂದು ರನ್ನಿಗೆ ಔಟಾದರೆ ಹೊಸ ವಿಕೆಟ್ಕೀಪರ್ ರಿಷಬ್ ಪಂತ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ವಿಶ್ವಕಪ್‌ನ ಹೀರೋ ರೋಹಿತ್ ಶರ್ಮ 24 ರನ್ ಗಳಿಸಿ ನಾರಾಯಣ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಕೊಹ್ಲಿ ಮತ್ತು ಮನೀಷ್ ಪಾಂಡೆ ತಲಾ 19 ರನ್ ಗಳಿಸಿದರು.
ಶೆಲ್ಡನ್ ಕಾಟ್ರೆಲ್, ಕಿಮೊ ಪೌಲ್ ಮತ್ತು ಸುನೀಲ್ ತಲಾ ಎರಡು ವಿಕೆಟ್ ಕಿತ್ತರು.
ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತೀಯ ತಂಡವು ಉತ್ತಮ ಮಟ್ಟದ ಬೌಲಿಂಗ್ ದಾಳಿ ಸಂಘಟಿಸಿತ್ತು. ದಾಳಿಗಿಳಿದ ಆರು ಮಂದಿಯೂ ವಿಕೆಟ್ ಉರುಳಿಸಲು ಯಶಸ್ವಿಯಾದರು. ಸೈನಿ 17 ರನ್ನಿಗೆ 3 ವಿಕೆಟ್ ಕಿತ್ತು ಮಿಂಚಿದರು.
ಕೈರನ್ ಪೋಲಾರ್ಡ್ ಅವರನ್ನು ಹೊರತುಪಡಿಸಿ ತಂಡದ ಇತರ ಯಾವುದೇ ಆಟಗಾರ ಭಾರತೀಯ ದಾಳಿಯನ್ನು ಉತ್ತರಿಸಲು ಅಸಮರ್ಥರಾದರು. ಪೋಲಾರ್ಡ್ ಮತ್ತು ನಿಕೋಲಾಸ್ ಪೂರನ್ ಮಾತ್ರ ಎರಡಂಕೆಯ ಮೊತ್ತ ದಾಖಲಿಸಿದ್ದರು. ನಾಯಕ ಕಾರ್ಲೋಸ್ ಬ್ರಾತ್‌ವೇಟ್ ಮತ್ತು ಪೋಲಾರ್ಡ್ ಆರನೇ ವಿಕೆಟಿಗೆ 34 ರನ್ ಪೇರಿಸಿದ್ದು ಗರಿಷ್ಠ ಮೊತ್ತದ ಜತೆಯಾಟವಾಗಿದೆ.
ತಂಡದ ಮೊತ್ತದ ಅರ್ಧದಷ್ಟು ರನ್ ಅನ್ನು ಪೋಲಾರ್ಡ್ ಒಬ್ಬರೇ ಹೊಡೆದಿದ್ದಾರೆ. ಅವರು 2 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 49 ರನ್ ಹೊಡೆದಿದ್ದರು. ಪೂರನ್ 20 ರನ್ ಗಳಿಸಿದರು. ಆರಂಭಿಕರಿಬ್ಬರ ಸಹಿತ ಮೂವರು ಶೂನ್ಯಕ್ಕೆ ಔಟಾಗಿದ್ದಾರೆ.
ಬೌಲಿಂಗ್ ಆರಂಭಿಸಿದ ವಾಷಿಂಗ್ಟನ್ ಸುಂದರ್ ತನ್ನ ಎರಡನೇ ಎಸೆತದಲ್ಲಿ ಜಾನ್ ಕ್ಯಾಂಬೆಲ್ ಅವರ ವಿಕೆಟನ್ನು ಹಾರಿಸಿದ್ದರು. ಎರಡನೇ ಓವರಿನಲ್ಲಿ ಲೆವಿಸ್ ಅವರನ್ನು ಭುವನೇಶ್ವರ್ ಕ್ಲೀನ್‌ಬೌಲ್ಡ್ ಮಾಡಿದ್ದರು.
ಸ್ಕೋರ್ ಪಟ್ಟಿ
ವೆಸ್ಟ್ ಇಂಡೀಸ್
ಜಾನ್ ಕ್ಯಾಂಬೆಲ್ ಸಿ ಪಾಂಡ್ಯ ಬಿ ಸುಂದರ್ 0
ಎವಿನ್ ಲೆವಿಸ್ ಬಿ ಕುಮಾರ್ 0
ನಿಕೋಲಸ್ ಪೂರನ್ ಸಿ ಪಂತ್ ಬಿ ಸೈನಿ 20
ಕೈರನ್ ಪೊಲಾರ್ಡ್ ಎಲ್‌ಬಿಡಬ್ಲ್ಯು ಬಿ ಸೈನಿ 49
ಶಿಮ್ರನ್ ಹೆಟ್‌ಮೈರ್ ಬಿ ಸೈನಿ 0
ರೊಮನ್ ಪೊವೆಲ್ ಸಿ ಪಂತ್ ಬಿ ಖಲೀಲ್ 4
ಬ್ರಾತ್‌ವೇಟ್ ಸಿ ಮತ್ತು ಬಿ ಪಾಂಡ್ಯ 9
ಸುನಿಲ್ ನಾರಾಯಣ್ ಸಿ ಖಲೀಲ್ ಬಿ ಜಡೇಜ 2
ಕಿಮೋ ಪೌಲ್ ಸಿ ಕೊಹ್ಲಿ ಬಿ ಕುಮಾರ್ 3
ಶೆಲ್ಡನ್ ಕಾಟ್ರೆಲ್ ಔಟಾಗದೆ 0
ಒಶಾನೆ ಥಾಮಸ್ ಔಟಾಗದೆ 0
ಇತರ 8
ಒಟ್ಟು(20 ಓವರ್‌ಗಳಲ್ಲಿ 9 ವಿಕೆಟಿಗೆ) 95
ವಿಕೆಟ್ ಪತನ: 1-0, 2-8, 3-28, 4-28, 5-33, 6-67, 7-70, 8-88, 9-95.
ಬೌಲಿಂಗ್: ವಾಷಿಂಗ್ಟನ್ ಸುಂದರ್ 2-0-18-1
ಭುವನೇಶ್ವರ್ ಕುಮಾರ್ 4-0-19-2
ನವದೀಪ್ ಸೈನಿ 4-1-17-3
ಖಲೀಲ್ ಅಹ್ಮದ್ 2-0-8-1
ಕೃಣಾಲ್ ಪಾಂಡ್ಯ 4-1-20-1
ರವೀಂದ್ರ ಜಡೇಜ 4-1-13-1
ಭಾರತ
ರೋಹಿತ್ ಶರ್ಮ ಸಿ ಪೊಲಾರ್ಡ್ ಬಿ ನಾರಾಯಣ್ 24
ಶಿಖರ್ ಧವನ್ ಎಲ್‌ಬಿಡಬ್ಲ್ಯು ಬಿ ಕಾಟ್ರೆಲ್ 1
ವಿರಾಟ್ ಕೊಹ್ಲಿ ಸಿ ಪೊಲಾರ್ಡ್ ಬಿ ಕಾಟ್ರೆಲ್ 19
ರಿಷಭ್ ಪಂತ್ ಸಿ ಕಾಟ್ರೆಲ್ ಬಿ ನಾರಾಯಣ್ 0
ಮನೀಷ್ ಪಾಂಡೆ ಬಿ ಕಿಮೋ ಪೌಲ್ 19
ಕೃಣಾಲ್ ಪಾಂಡ್ಯ ಬಿ ಕಿಮೋ ಪೌಲ್ 12
ರವೀಂದ್ರ ಜಡೇಜ ಔಟಾಗದೆ 10
ವಾಷಿಂಗ್ಟನ್ ಸುಂದರ್ ಔಟಾಗದೆ 8
ಇತರ 5
ಒಟ್ಟು (17.2 ಓವರ್‌ಗಳಲ್ಲಿ 6 ವಿಕೆಟ್‌ಗೆ) 98
ವಿಕೆಟ್ ಪತನ: 1-4, 2-32, 3-32, 4-64, 5-69, 6-88.
ಬೌಲಿಂಗ್: ಒಶಾನೆ ಥಾಮಸ್ 4-0-29-0
ಶೆಲ್ಡನ್ ಕಾಟ್ರೆಲ್ 4-0-20-2
ಸುನಿಲ್ ನಾರಾಯಣ್ 4-0-14-2
ಕಿಮೊ ಪೌಲ್ 3.2-0-23-2
ಬ್ರಾತ್‌ವೇಟ್ 2-0-12-0
ಇಂದು ಮತ್ತೂಂದು ಪಂದ್ಯ
ಲಾಡೆರ್‌ಹಿಲ್ (ಅಮೆರಿಕ): ಭಾರತ -ವೆಸ್ಟ್ ಇಂಡೀಸ್ ತಂಡಗಳು ಎರಡನೇ ಟಿ20 ಪಂದ್ಯದಲ್ಲಿ ರವಿವಾರ ಮತ್ತೂಮ್ಮೆ ಮುಖಾಮುಖೀಯಾಗಲಿವೆ.
ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ -ವಿಂಡೀಸ್‌ಗೆ ಇದು ಸತತ ಎರಡನೇ ಪಂದ್ಯ ಎನ್ನುವುದು ವಿಶೇಷ. ಈ ಪಂದ್ಯಕ್ಕೂ ಲಾಡೆರ್‌ಹಿಲ್ ಆತಿಥ್ಯವಾಗಿದ್ದು ಉಭಯ ತಂಡಗಳ ಮಹಾ ಕದನಕ್ಕೆ ಇದು ಮತ್ತೂಂದು ವೇದಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.