ಟಿ20:ನ್ಯೂಜಿಲ್ಯಾಂಡಿಗೆ 3ನೇ ಆಘಾತಪಾಕಿಸ್ಥಾನ ಕ್ಲೀನ್ ಸ್ವೀಪ್ ಸಾಧನೆ
Team Udayavani, Nov 6, 2018, 6:30 AM IST
ದುಬಾೖ: ನ್ಯೂಜಿಲ್ಯಾಂಡ್ ಎದುರಿನ ಟಿ20 ಸರಣಿಯಲ್ಲಿ ಪಾರಮ್ಯ ಮೆರೆದ ಪಾಕಿಸ್ಥಾನ 3 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ರವಿವಾರ ರಾತ್ರಿಯ ಅಂತಿಮ ಪಂದ್ಯವನ್ನು 47 ರನ್ನುಗಳಿಂದ ಗೆಲ್ಲುವ ಮೂಲಕ ಪಾಕ್ ಈ ಸಾಧನೆ ಮಾಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 3 ವಿಕೆಟಿಗೆ 166 ರನ್ ಪೇರಿಸಿದರೆ, ನ್ಯೂಜಿಲ್ಯಾಂಡ್ 16.5 ಓವರ್‌ಗಳಲ್ಲಿ 119 ರನ್ನಿಗೆ ಕುಸಿಯಿತು. 79 ರನ್ ಬಾರಿಸಿದ ಬಾಬರ್ ಆಜಂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು (58 ಎಸೆತ, 7 ಬೌಂಡರಿ, 2 ಸಿಕ್ಸರ್). ಪಾಕ್ ಸರದಿಯಲ್ಲಿ ಮಿಂಚಿದ ಮತ್ತೂಬ್ಬ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್ (ಅಜೇಯ 53). ಇವರಿಬ್ಬರು ಸೇರಿಕೊಂಡು ದ್ವಿತೀಯ ವಿಕೆಟಿಗೆ 94 ರನ್ ಪೇರಿಸಿದರು. ಹಫೀಜ್‌ಗೆ ಸರಣಿಶ್ರೇಷ್ಠ ಪ್ರಶಸ್ತಿ ಒಲಿಯಿತು.
ಚೇಸಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಒಂದು ಹಂತದಲ್ಲಿ 2 ವಿಕೆಟಿಗೆ 96 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ನಾಯಕ ಕೇನ್ ವಿಲಿಯಮ್ಸನ್ ಕ್ರೀಸ್ ಆಕ್ರಮಿಸಿಕೊಂಡಿದ್ದರು. ಆದರೆ 13ರಿಂದ ಮೊದಲ್ಗೊಂಡು 17ನೇ ಓವರ್ ತನಕ ಪ್ರತಿ ಓವರಿನಲ್ಲೂ ಎರಡೆರಡು ವಿಕೆಟ್‌ಗಳನ್ನು ಉದುರಿಸಿಕೊಳ್ಳುತ್ತಲೇ ಹೋದ ನ್ಯೂಜಿಲ್ಯಾಂಡ್ ಸೋಲಿನ ಪ್ರಪಾತಕ್ಕೆ ಜಾರಿತು. 23 ರನ್ ಅಂತರದಲ್ಲಿ ಕಿವೀಸ್‌ನ ಕೊನೆಯ 8 ವಿಕೆಟ್ ಹಾರಿಹೋಯಿತು!ಶಾಬಾದ್ ಖಾನ್ 3, ವಕಾಸ್ ಮಕ್ಸೂದ್ ಮತ್ತು ಇಮಾದ್ ವಾಸಿಮ್ ತಲಾ 2 ವಿಕೆಟ್ ಹಾರಿಸಿ ಕಿವೀಸ್‌ಗೆ ಕಂಟಕವಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.