T20;ಸೂರ್ಯ ಬಳಗಕ್ಕೆ ಗೆಲ್ಲಲೇಬೇಕಾದ ಒತ್ತಡ
ಸರಣಿ ಸಮಬಲದ ಹಾದಿ ಸುಗಮವಲ್ಲ
Team Udayavani, Dec 14, 2023, 6:50 AM IST
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ಎದುರಿನ ಮಳೆಪೀಡಿತ ದ್ವಿತೀಯ ಟಿ20 ಪಂದ್ಯವನ್ನು 5 ವಿಕೆಟ್ಗಳಿಂದ ಕಳೆದುಕೊಂಡ ಭಾರತಕ್ಕೀಗ ಸರಣಿ ಸಮಬಲದ ಒತ್ತಡ ಎದು ರಾಗಿದೆ. ಗುರುವಾರ ಜೊಹಾನ್ಸ್ಬರ್ಗ್ನ “ನ್ಯೂ ವಾಂಡರರ್ ಸ್ಟೇಡಿಯಂ’ನಲ್ಲಿ 3ನೇ ಹಾಗೂ ಅಂತಿಮ ಮುಖಾಮುಖೀ ಏರ್ಪಡಲಿದ್ದು, ಸರಣಿ ಸಮಬಲ ಸಾಧಿಸಲು ಸೂರ್ಯಕುಮಾರ್ ಪಡೆ ಇದನ್ನು ಗೆಲ್ಲಲೇಬೇಕಿದೆ.
ಮೊದಲ ಮುಖಾಮುಖಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡ ಬಳಿಕ ಎರಡೇ ಪಂದ್ಯಗಳಲ್ಲಿ ಸರಣಿ ಇತ್ಯರ್ಥವಾಗ ಬೇಕಾದ ಸನ್ನಿವೇಶ ಎದುರಾಗಿತ್ತು. ಮಂಗಳವಾರದ ದ್ವಿತೀಯ ಪಂದ್ಯಕ್ಕೂ ಮಳೆಯ ಕಾಟ ಎದುರಾಯಿತು. ಭಾರತದ ಇನ್ನಿಂಗ್ಸ್ ಮುಕ್ತಾಯಕ್ಕೆ ಇನ್ನೇನು 3 ಎಸೆತಗಳಿವೆ ಎನ್ನುವಾಗ ಸುರಿದ ಮಳೆಯಿಂದ ಟಾರ್ಗೆಟ್ ಬದಲಿಸಬೇಕಾಗಿ ಬಂತು. ಭಾರತ 7 ವಿಕೆಟಿಗೆ 180 ರನ್ನುಗಳ ಸವಾಲಿನ ಮೊತ್ತ ಪೇರಿಸಿತ್ತು. ದಕ್ಷಿಣ ಆಫ್ರಿಕಾ 15 ಓವರ್ಗಳಲ್ಲಿ 152 ರನ್ ಗುರಿ ಲಭಿಸಿತು. ಅಂದರೆ, ಓವರ್ಗೆ ಸರಾಸರಿ 10ರಷ್ಟು ರನ್ ತೆಗೆಯಬೇಕಾದ ಒತ್ತಡ. ಮಾರ್ಕ್ರಮ್ ಪಡೆ ಇದನ್ನು ಯಶಸ್ವಿಯಾಗಿ ನಿಭಾಯಿಸಿ “ವಿನ್ನಿಂಗ್ ಮಾರ್ಕ್’ ಗಳಿಸಿತು. 13.5 ಓವರ್ಗಳಲ್ಲಿ 5 ವಿಕೆಟಿಗೆ 154 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಬೌಲಿಂಗ್ ಸುಧಾರಿಸೀತೇ?
ಇದಕ್ಕೆ ಜೊಹಾನ್ಸ್ಬರ್ಗ್ನಲ್ಲಿ “ಯಂಗ್ ಇಂಡಿಯಾ’ ತಿರುಗೇಟು ನೀಡಲೇಬೇಕಿದೆ. ಅತೀ ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಾಣಬೇಕಾದ, ನಿಯಂತ್ರಣ ಸಾಧಿಸಬೇಕಾದ ಸವಾಲು ಎದುರಾಗಿದೆ.
ದ್ವಿತೀಯ ಪಂದ್ಯದ ತಾಣ ವಾದ ಪೋರ್ಟ್ ಎಲಿಜಬೆತ್ನ “ಸೇಂಟ್ ಜಾಜ್Õì ಪಾರ್ಕ್’ ಅಪ್ಪಟ ಬ್ಯಾಟಿಂಗ್ ಟ್ರ್ಯಾಕ್ ಆಗಿ ಗೋಚರಿಸಿತ್ತು. ಟಿ20 ಜೋಶ್ ಹೆಚ್ಚಿಸುವ ಸಲುವಾಗಿ “ನ್ಯೂ ವಾಂಡರರ್ ಟ್ರ್ಯಾಕ್’ ಕೂಡ ಬ್ಯಾಟಿಂಗ್ ಸ್ನೇಹಿಯಾಗಿ ರೂಪುಗೊಂಡಿದೆ ಎಂದು ವರದಿಯಾಗಿದೆ. ಹೀಗಾಗಿ ಬೌಲರ್, ಅದರಲ್ಲೂ ಪ್ರವಾಸಿ ಭಾರತದ ಅನನುಭವಿ ಎಸೆತಗಾರರಿಗೆ ಇನ್ನೊಂದು ಅಗ್ನಿಪರೀಕ್ಷೆ ಎದು ರಾಗಲಿದೆ ಎಂದೇ ಹೇಳ ಬೇಕಾಗುತ್ತದೆ.
ದ್ವಿತೀಯ ಪಂದ್ಯದಲ್ಲಿ ಎಡಗೈ ಪೇಸರ್ ಅರ್ಷದೀಪ್ ಸಿಂಗ್ ಮತ್ತು ಮುಕೇಶ್ ಕುಮಾರ್ ಸಿಕ್ಕಾಪಟ್ಟೆ ದುಬಾರಿ ಆಗಿದ್ದರು. ಓವರ್ಗೆ ಕ್ರಮವಾಗಿ 15.50 ಹಾಗೂ 11.33 ರನ್ ನೀಡಿದ್ದರು. ಮಳೆ ಮತ್ತು ಮಂಜಿ ನಿಂದ ಬೌಲಿಂಗ್ ಟಾಸ್ಕ್ ತುಸು ಕಷ್ಟವಾಗಿತ್ತು ನಿಜ. ಆದರೆ ಅನುಭವಿ ಗಳಾದ ಸಿರಾಜ್, ಜಡೇಜ ಮತ್ತು ಕುಲದೀಪ್ ನಿಯಂತ್ರಣ ಸಾಧಿಸಲು ಬಹುತೇಕ ಯಶಸ್ವಿಯಾಗಿದ್ದರು. ನಿರ್ಣಾಯಕ ಪಂದ್ಯದಲ್ಲಿ ರವಿ ಬಿಷ್ಣೋಯಿ, ದೀಪಕ್ ಚಹರ್ ಅವಕಾಶ ಪಡೆ ಯುವ ಸಾಧ್ಯತೆ ಇದೆ.
ರಿಂಕು-ಸೂರ್ಯ ಸಾಹಸ
ಬ್ಯಾಟಿಂಗ್ ವಿಷಯಕ್ಕೆ ಬಂದಾಗ, ಭಾರತದ ಓಪನಿಂಗ್ ವೈಫಲ್ಯ ಎದ್ದು ಕಾಣುತ್ತದೆ. ಜೈಸ್ವಾಲ್, ಗಿಲ್ ಇಬ್ಬರೂ ಸೊನ್ನೆ ಸುತ್ತಿದ್ದು ಅಕ್ಷಮ್ಯ. ಆಗ ಸ್ಕೋರ್ಬೋರ್ಡ್ ಕೇವಲ 6 ರನ್ ದಾಖಲಿಸುತ್ತಿತ್ತು. ಆದರೆ ರಿಂಕು ಸಿಂಗ್, ಸೂರ್ಯ ಕುಮಾರ್ ಯಾದವ್ ಅವರ ಅರ್ಧ ಶತಕದ ಸಾಹಸದಿಂದ ಭಾರತದ ಮೊತ್ತ 180ರ ತನಕ ಬೆಳೆದದ್ದು ಅಮೋಘ ಚೇತರಿಕೆಗೆ ಹಾಗೂ ಬ್ಯಾಟಿಂಗ್ ಸಾಹಸಕ್ಕೆ ಸಾಕ್ಷಿಯಾಯಿತು. ರಿಂಕು ಅವರೀಗ ಭಾರತದ ನ್ಯೂ ಟಿ20 ಸ್ಟಾರ್ ಎಂಬುದರಲ್ಲಿ ಎರಡು ಮಾತಿಲ್ಲ.
ದಕ್ಷಿಣ ಆಫ್ರಿಕಾ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ. ಹೆಂಡ್ರಿಕ್ಸ್, ಮಾರ್ಕ್ರಮ್, ಕ್ಲಾಸೆನ್, ಮಿಲ್ಲರ್ ಅವರೆಲ್ಲ ಬಿಗ್ ಹಿಟ್ಟರ್. ಇವರನ್ನು ತಡೆಯಲು ಸಾಮಾನ್ಯ ಬೌಲಿಂಗ್ ಪಡೆ ಖಂಡಿತ ಸಾಲದು. ಹೀಗಾಗಿ ಸರಣಿ ಸಮಬಲದ ಹಾದಿ ಸುಗಮವಂತೂ ಅಲ್ಲ.
ಮುಗ್ಗರಿಸಿದ ಭಾರತ
ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಡಿ-ಎಲ್ ನಿಯಮದಂತೆ 5 ವಿಕೆಟ್ ಸೋಲಿಗೆ ತುತ್ತಾಯಿತು. ಮಳೆಯಿಂದಾಗಿ ಭಾರತದ ಇನ್ನಿಂಗ್ಸ್ 19.3 ಓವರ್ಗಳಿಗೆ ನಿಂತಿತು. ಸ್ಕೋರ್ 7ಕ್ಕೆ 180. ರಿಂಕು ಸಿಂಗ್ ಅಜೇಯ 68, ಸೂರ್ಯಕುಮಾರ್ 56 ರನ್ ಹೊಡೆದರು. ದಕ್ಷಿಣ ಆಫ್ರಿಕಾಕ್ಕೆ ಲಭಿಸಿದ ಗುರಿ 15 ಓವರ್ಗಳಲ್ಲಿ 152 ರನ್. ಅದು 13.4 ಓವರ್ಗಳಲ್ಲಿ 5 ವಿಕೆಟಿಗೆ 154 ರನ್ ಬಾರಿಸಿ ಗೆಲುವು ಸಾಧಿಸಿತು. ರೀಝ ಹೆಂಡ್ರಿಕ್ಸ್ 49, ಐಡನ್ ಮಾರ್ಕ್ರಮ್ 30, ಮಿಲ್ಲರ್ 17 ರನ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.