T20: ಮಳೆ ಪಂದ್ಯ ಗೆದ್ದ ನ್ಯೂಜಿಲ್ಯಾಂಡ್; ಸರಣಿ 1-1 ಸಮಬಲ
Team Udayavani, Dec 31, 2023, 11:46 PM IST
ಮೌಂಟ್ ಮೌಂಗನಿ: ಮಳೆಯಿಂದ ಅಡಚಣೆಗೊಳಗಾದ 3ನೇ ಟಿ20 ಪಂದ್ಯವನ್ನು ಡಿ-ಎಲ್ ನಿಯಮದಂತೆ 17 ರನ್ನುಗಳಿಂದ ಗೆದ್ದ ನ್ಯೂಜಿಲ್ಯಾಂಡ್, ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು 1-1 ಸಮಬಲದಲ್ಲಿ ಮುಗಿಸುವಲ್ಲಿ ಯಶಸ್ವಿಯಾಗಿದೆ.
ರವಿವಾರ ಇಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 19.2 ಓವರ್‌ಗಳಲ್ಲಿ 110ಕ್ಕೆ ಕುಸಿಯಿತು. ನ್ಯೂಜಿ ಲ್ಯಾಂಡ್ ಕೂಡ ಚೇಸಿಂಗ್ ವೇಳೆ ಪರದಾಡಿತು. 49ಕ್ಕೆ 5 ವಿಕೆಟ್ ಉರುಳಿಸಿ ಕೊಂಡಿತು. ಆದರೆ ಅದೃಷ್ಟ ದೊಡ್ಡದಿತ್ತು. 14.4 ಓವರ್ ಆದಾಗ ಮಳೆ ಸುರಿ ಯಿತು. ಪಂದ್ಯ ರದ್ದುಗೊಂಡಿತು. ಆಗ ನ್ಯೂಜಿಲ್ಯಾಂಡ್ 5 ವಿಕೆಟಿಗೆ 95 ರನ್ ಮಾಡಿತ್ತು. ಡಕ್‌ವರ್ತ್-ಲೂಯಿಸ್ ನಿಯಮದಂತೆ ಬಾಂಗ್ಲಾಕ್ಕಿಂತ 17 ರನ್ ಮುಂದಿತ್ತು.
ಮೊದಲ ಪಂದ್ಯವನ್ನು ಬಾಂಗ್ಲಾ 5 ವಿಕೆಟ್‌ಗಳಿಂದ ಜಯಿಸಿತ್ತು. ದ್ವಿತೀಯ ಮುಖಾಮುಖೀ ಮಳೆಯಿಂದ ರದ್ದುಗೊಂಡಿತ್ತು.
ನ್ಯೂಜಿಲ್ಯಾಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ 16ಕ್ಕೆ 4 ವಿಕೆಟ್ ಉರುಳಿಸಿ ಬಾಂಗ್ಲಾ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೌಥಿ, ಮಿಲೆ°, ಸಿಯರ್ ತಲಾ 2 ವಿಕೆಟ್ ಉರುಳಿಸಿದರು.
ಚೇಸಿಂಗ್ ವೇಳೆ ನ್ಯೂಜಿಲ್ಯಾಂಡ್‌ನ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್ ತಲಾ ಒಂದೊಂದು ರನ್ ಮಾಡಿ ನಿರ್ಗಮಿಸಿದಾಗ ಬಾಂಗ್ಲಾಕ್ಕೆ ಮೇಲುಗೈ ಅವಕಾಶವಿತ್ತು. ಆದರೆ ಜೇಮ್ಸ್ ನೀಶಮ್ (28)-ಮಿಚೆಲ್ ಸ್ಯಾಂಟ್ನರ್ (18) ಸೇರಿಕೊಂಡು ತಂಡವನ್ನು ಆಧರಿಸಿ ನಿಂತರು. ಮುರಿಯದ 6ನೇ ವಿಕೆಟಿಗೆ 46 ರನ್ ಒಟ್ಟುಗೂಡಿತು. ಆಗ ಮಳೆ ಸುರಿಯಿತು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ- 19.2 ಓವರ್‌ಗಳಲ್ಲಿ 110 (ನಜ್ಮುಲ್ 17, ತೌಹಿದ್ 16, ಆಫಿಫ್ 14, ಸ್ಯಾಂಟ್ನರ್ 18ಕ್ಕೆ 4, ಮಿಲೆ° 23ಕ್ಕೆ 2, ಸೌಥಿ 25ಕ್ಕೆ 2, ಸಿಯರ್ 28ಕ್ಕೆ 2). ನ್ಯೂಜಿಲ್ಯಾಂಡ್-14.4 ಓವರ್‌ಗಳಲ್ಲಿ 95 (ಅಲೆನ್ 38, ನೀಶಮ್ ಔಟಾಗದೆ 28, ಸ್ಯಾಂಟ್ನರ್ ಔಟಾಗದೆ 18, ಶೊರೀಫುಲ್ 17ಕ್ಕೆ 2, ಮಹೆದಿ ಹಸನ್ 18ಕ್ಕೆ 2).
ಪಂದ್ಯಶ್ರೇಷ್ಠ: ಮಿಚೆಲ್ ಸ್ಯಾಂಟ್ನರ್. ಸರಣಿಶ್ರೇಷ್ಠ: ಶೊರೀಫುಲ್ ಇಸ್ಲಾಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.