T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
Team Udayavani, Nov 21, 2024, 1:22 PM IST
ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಯಲ್ಲಿ ಭಾರತೀಯ ಬ್ಯಾಟರ್ ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದರಲ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ್ದ ತಿಲಕ್ ವರ್ಮಾ (Tilak Varma) ಇದೀಗ ಟಿ20 ರ್ಯಾಂಕಿಂಗ್ ನಲ್ಲಿ ಭರ್ಜರಿ ನೆಗೆತ ಕಂಡಿದ್ದಾರೆ.
ಬುಧವಾರ ಪ್ರಕಟವಾದ ಪುರುಷರ ಟಿ20ಐ ಬ್ಯಾಟರ್ ಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ರ್ಯಾಂಕಿಂಗ್‌ನಲ್ಲಿ ತಿಲಕ್ ವರ್ಮಾ ಅವರು 69 ಸ್ಥಾನಗಳನ್ನು ನೆಗೆತ ಕಂಡಿದ್ದಾರೆ. ಇದೀಗ ತಿಲಕ್ ವರ್ಮಾ ಅವರು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.
ತಿಲಕ್ ಅವರು ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ಶ್ರೇಯಾಂಕದ ಭಾರತೀಯ ಟಿ20ಐ ಬ್ಯಾಟರ್ ಆದರು. ಮುಂಬೈ ಇಂಡಿಯನ್ಸ್ ತಾರೆ ತಿಲಕ್ ಆಸ್ಟ್ರೇಲಿಯದ ಟ್ರಾವಿಸ್ ಹೆಡ್ ಮತ್ತು ಇಂಗ್ಲೆಂಡ್ ನ ಫಿಲ್ ಸಾಲ್ಟ್ ಅವರಿಗಿಂತ ಹಿಂದಿದ್ದಾರೆ.
ತಿಲಕ್ ವರ್ಮಾ ತಮ್ಮ ಟಿ20ಐ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅಗ್ರ 10 ರೊಳಗೆ ಪ್ರವೇಶಿಸಿದ್ದಾರೆ. ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತದ ಪ್ರಬಲ ಸರಣಿಯ ಗೆಲುವಿನಲ್ಲಿ ಅವರ ಅವಳಿ ಶತಕಗಳ ನಂತರ ಏರಿಕೆಯಾಗಿದೆ.
ಭಾರತ 3-1 ಅಂತರದಲ್ಲಿ ಜಯ ಸಾಧಿಸಿದ ನಂತರ ತಿಲಕ್ ವರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಅವರು ನಾಲ್ಕು ಪಂದ್ಯಗಳಲ್ಲಿ 198 ಸ್ಟ್ರೈಕ್ ರೇಟ್ ನಲ್ಲಿ 280 ರನ್ ಗಳಿಸಿದರು. ಅಲ್ಲದೆ 20 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ಅಲ್ಲದೆ ಸರಣಿಯಲ್ಲಿ ಎರಡು ಶತಕ ಬಾರಿಸಿದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ 17 ಸ್ಥಾನ ಮೇಲಕ್ಕೇರಿ 22ನೇ ಸ್ಥಾನಕ್ಕೇರಿದ್ದಾರೆ.
ಟಿ20 ರ್ಯಾಂಕಿಂಗ್ ನ ಅಗ್ರ 30ರೊಳಗೆ ಐವರು ಭಾರತೀಯರಿದ್ದಾರೆ. ಅವರೆಂದರೆ ತಿಲಕ್ ವರ್ಮಾ -3, ಸೂರ್ಯಕುಮಾರ್ ಯಾದವ್- 4, ಯಶಸ್ವಿ ಜೈಸ್ವಾಲ್- 8, ರುತುರಾಜ್ ಗಾಯಕ್ವಾಡ್- 15, ಸಂಜು ಸ್ಯಾಮ್ಸನ್ -22.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.