ಆಸ್ಟ್ರೇಲಿಯಕ್ಕೆ ಟಿ20 ಸರಣಿ
ಅಂತಿಮ ಪಂದ್ಯದಲ್ಲಿ 10 ವಿಕೆಟ್ ಗೆಲುವು
Team Udayavani, Nov 9, 2019, 5:14 AM IST
ಪರ್ತ್: ಪ್ರವಾಸಿ ಪಾಕಿಸ್ಥಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಆಸ್ಟ್ರೇಲಿಯ 2-0 ಅಂತರದಿಂದ ಗೆದ್ದುಕೊಂಡಿದೆ. ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯ 10 ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 8 ವಿಕೆಟಿಗೆ 106 ರನ್ ಪೇರಿಸಿತು. ಇದಕ್ಕುತ್ತರವಾಗಿ ಕಾಂಗರೂ ಪಡೆ 11.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 109 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಪಾಕ್ ಪರ ಇಫ್ತಿಕರ್ ಅಹ್ಮದ್ 45, ಇಮಾಮ್ ಉಲ್-ಹಕ್ 14 ರನ್ ಹೊರತು ಪಡಿಸಿದರೆ ಉಳಿದವರ್ಯಾರೂ ಎರಡಂಕಿಯ ಗಡಿ ದಾಟಲಿಲ್ಲ.
ಆಸೀಸ್ ಪರ ನಾಯಕ ಆರನ್ ಫಿಂಚ್ ಅಜೇಯ (55) ಅರ್ಧಶತಕ ಸಿಡಿಸಿದರೆ ವಾರ್ನರ್ ಅಜೇಯ 48 ರನ್ ಗಳಿಸಿದರು. ಬೌಲರ್‌ಗಳಾದ ಕೇನ್ ರಿಚಡ್ಸìನ್ 3 ವಿಕೆಟ್ ಉರುಳಿ ಸಿದರೆ ಸ್ಟಾರ್ಕ್ ಮತ್ತು ಎಬೋಟ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ 20 ಓವರ್‌ಗಳಲ್ಲಿ 8 ವಿಕೆಟಿಗೆ 106 (ಇಫ್ತಿಕರ್ 45, ಇಮಾಮ್ 14, ರಿಚಡ್ಸìನ್ 18ಕ್ಕೆ 3, ಎಬೋಟ್ 14ಕ್ಕೆ 2, ಸ್ಟಾರ್ಕ್ 29ಕ್ಕೆ 2); ಆಸ್ಟ್ರೇಲಿಯ 11.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 109 (ಆರನ್ ಫಿಂಚ್ ಔಟಾಗದೆ 55, ವಾರ್ನರ್ ಔಟಾಗದೆ 48). ಪಂದ್ಯಶ್ರೇಷ್ಠ: ಸೀನ್ ಅಬೋಟ್. ಸರಣಿ ಶ್ರೇಷ್ಠ:
ಸ್ಟೀವನ್ ಸ್ಮಿತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.