T20 series : ಗೆಲುವಿನ ಹಳಿ ಏರಿದ ನ್ಯೂಜಿಲ್ಯಾಂಡ್
Team Udayavani, Sep 5, 2023, 12:12 AM IST
ಬರ್ಮಿಂಗ್ಹ್ಯಾಮ್: ಆತಿಥೇಯ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ನ್ಯೂಜಿಲ್ಯಾಂಡ್ ಗೆಲುವಿನ ಖಾತೆ ತೆರೆದಿದೆ. ಇಲ್ಲಿನ ಎಜ್ಬಾಸ್ಟನ್ ಅಂಗಳದಲ್ಲಿ ನಡೆದ 3ನೇ ಮುಖಾಮುಖೀಯನ್ನು 74 ರನ್ನುಗಳ ಅಂತರದಿಂದ ಗೆದ್ದು ಹಿನ್ನಡೆಯನ್ನು 1-2ಕ್ಕೆ ಇಳಿಸಿಕೊಂಡಿದೆ.
ಮೊದಲೆರಡು ಪಂದ್ಯಗಳಲ್ಲಿ ಸೋಲ ನುಭವಿಸಿದ್ದ ಟಿಮ್ ಸೌಥಿ ಪಡೆ ಇಲ್ಲಿ ಮೊದಲು ಬ್ಯಾಟಿಂಗ್ ನಡೆಸಿ 5 ವಿಕೆಟಿಗೆ 202 ರನ್ ರಾಶಿ ಹಾಕಿತು. ಜವಾಬಿತ್ತ ಇಂಗ್ಲೆಂಡ್ 18.3 ಓವರ್ಗಳಲ್ಲಿ 128ಕ್ಕೆ ಕುಸಿಯಿತು. ಸರಣಿ ನಿರ್ಣಾಯಕ ಪಂದ್ಯ ಮಂಗಳವಾರ ನಾಟಿಂಗ್ಹ್ಯಾಮ್ನಲ್ಲಿ ನಡೆಯಲಿದೆ.
ನ್ಯೂಜಿಲ್ಯಾಂಡ್ನ ಬೃಹತ್ ಮೊತ್ತಕ್ಕೆ ಕಾರಣರಾದವರು ಆರಂಭಕಾರ ಫಿನ್ ಅಲೆನ್ ಮತ್ತು ಗ್ಲೆನ್ ಫಿಲಿಪ್ಸ್. ಇವರು ಕ್ರಮವಾಗಿ 83 ಮತ್ತು 69 ರನ್ ಬಾರಿಸಿದರು. ಬೌಲಿಂಗ್ನಲ್ಲಿ ಘಾತಕ ಪ್ರದರ್ಶನವಿತ್ತ ಕೈಲ್ ಜೇಮಿಸನ್ ಮತ್ತು ಐಶ್ ಸೋಧಿ ತಲಾ 3 ವಿಕೆಟ್, ಟಿಮ್ ಸೌಥಿ 2 ವಿಕೆಟ್ ಉರುಳಿಸಿ ಇಂಗ್ಲೆಂಡ್ ಕತೆ ಮುಗಿಸಿದರು.ಇಂಗ್ಲೆಂಡ್ ಪರ ನಾಯಕ ಜಾಸ್ ಬಟ್ಲರ್ ಸರ್ವಾಧಿಕ 40 ರನ್ ಹಾಗೂ ಮೊಯಿನ್ ಅಲಿ 26 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-5 ವಿಕೆಟಿಗೆ 202 (ಫಿನ್ ಅಲೆನ್ 83, ಗ್ಲೆನ್ ಫಿಲಿಪ್ಸ್ 69, ಗಸ್ ಅಟ್ಕಿನ್ಸನ್ 69ಕ್ಕೆ 2). ನ್ಯೂಜಿಲ್ಯಾಂಡ್-18.3 ಓವರ್ಗಳಲ್ಲಿ 128 (ಜಾಸ್ ಬಟ್ಲರ್ 40, ಮೊಯಿನ್ ಅಲಿ 26, ಕೈಲ್ ಜೇಮಿಸನ್ 23ಕ್ಕೆ 3, ಐಶ್ ಸೋಧಿ 33ಕ್ಕೆ 3, ಟಿಮ್ ಸೌಥಿ 30ಕ್ಕೆ 2). ಪಂದ್ಯಶ್ರೇಷ್ಠ: ಫಿನ್ ಅಲೆನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.