T20 ಸರಣಿ: ನೂತನ ಆರಂಭದ ನಿರೀಕ್ಷೆಯಲ್ಲಿ ಯಂಗ್‌ ಇಂಡಿಯಾ

ಭಾರತ-ಆಸ್ಟ್ರೇಲಿಯ ;  ವಿಶ್ವಕಪ್‌ ಮುಗಿದ ಬೆನ್ನಲ್ಲೇ  ಸೂರ್ಯಕುಮಾರ್‌ ನಾಯಕತ್ವಕ್ಕೆ ಸವಾಲು

Team Udayavani, Nov 23, 2023, 6:00 AM IST

1-sadsad

ವಿಶಾಖಪಟ್ಟಣ: ಟೀಮ್‌ ಇಂಡಿಯಾದ ವಿಶ್ವಕಪ್‌ ಫೈನಲ್‌ ಸೋಲಿನ ಬಿಸಿ ಆರುವ ಮೊದಲೇ ಆಸ್ಟ್ರೇಲಿಯ ವಿರುದ್ಧವೇ 5 ಪಂದ್ಯಗಳ ಟಿ20 ಸರಣಿಯ ಕ್ಷಣಗಣನೆ ಮೊದಲ್ಗೊಂಡಿದೆ. “ಜೆನ್‌-ನೆಕ್ಸ್ಟ್ ಸ್ಟಾರ್‌’ಗಳಿಂದ ತುಂಬಿ ತುಳುಕುತ್ತಿರುವ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಯಂಗ್‌ ಇಂಡಿಯಾ, ಬಲಿಷ್ಠವಾಗಿ ಗೋಚರಿಸುತ್ತಿರುವ ಆಸ್ಟ್ರೇಲಿಯದ ಸವಾಲಿಗೆ ಹೇಗೆ ಉತ್ತರಿಸೀತೆಂಬುದೊಂದು ಪ್ರಶ್ನೆ. ಮೊದಲ ಮುಖಾಮುಖೀ ಗುರುವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ.

ವಿಪರ್ಯಾಸವೆಂದರೆ, ಭಾರತದ ಅಭಿಮಾನಿ ಗಳಿನ್ನೂ ಫೈನಲ್‌ ಸೋಲಿನ ಆಘಾತದಿಂದ ಚೇತರಿಸಿ ಕೊಂಡಿಲ್ಲ. ಇನ್ನೊಂದೆಡೆ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಕ್ಕೆ ಸಂಭ್ರಮಾಚರಣೆ ನಡೆಸಲು ಸಮಯವಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಬಿಡುವೆಂಬುದಿಲ್ಲ! ವಿಶ್ವಕಪ್‌ ಫೈನಲ್‌ ಮುಗಿದ 96 ಗಂಟೆಗಳಲ್ಲೇ ಇನ್ನೊಂದು ಅವಸರದ ಸರಣಿಯ ಅಗತ್ಯ ಏನಿತ್ತು ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸಿದೆ. ಸರಣಿಯ ಮಾದರಿ ಬೇರೆ ಇರಬಹುದು, ಆದರೆ ಪ್ರಸ್ತುತ ಸ್ಥಿತಿಯಲ್ಲಿ ಇದು ತಂದೊಡ್ಡಿರುವ ಸವಾಲು, ಒತ್ತಡ ನಿಜಕ್ಕೂ ವಿಪರೀತ.
ಫೈನಲ್‌ ಸೋಲಿಗೆ ಏನು ಕಾರಣ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಹೊತ್ತಿ ನಲ್ಲಿ ಯಂಗ್‌ ಇಂಡಿಯಾ ಮತ್ತದೇ ಆಸ್ಟ್ರೇಲಿಯ ವಿರುದ್ಧ ಎಡವಿದರೆ ನಿಜಕ್ಕೂ ಭಾರತೀಯ ಕ್ರಿಕೆಟ್‌ ಪಾಲಿಗೆ ಗಾಯದ ಮೇಲೆ ದೊಡ್ಡ ಬರೆ ಬೀಳಲಿದೆ. ಒಂದು ವೇಳೆ ಸರಣಿ ಗೆದ್ದರೂ ಅದೊಂದು ಮಹಾಸಂಭ್ರಮವೆನಿಸದು. ಏಕೆಂದರೆ ವಿಶ್ವಕಪ್‌ ಫೈನಲ್‌ ಸೋಲಿಗೆ ಟಿ20 ಸರಣಿ ಗೆಲುವು ಯಾವ ವಿಧದದಲ್ಲೂ ಸಾಟಿಯಾಗದು.

ಸರಣಿಯ ಉದ್ದೇಶವೇ ಬೇರೆ
ಇರಲಿ. ಈ ಸರಣಿಯ ಉದ್ದೇಶ ದೊಡ್ಡದೇ ಇದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಸಶಕ್ತ ತಂಡವೊಂದನ್ನು ಕಟ್ಟಿ ಬೆಳೆಸುವ ಸಲುವಾಗಿ ಇಲ್ಲಿ ಐಪಿಎಲ್‌ ಹೀರೋಗಳನ್ನು ಒಳಗೊಂಡಿರುವ ಯುವ ಪಡೆಯನ್ನು ಅಖಾಡಕ್ಕೆ ಇಳಿಸಲಾಗಿದೆ. ಭಾರತದಲ್ಲಿರುವ ಪ್ರತಿಭಾನ್ವಿತರ ಟಿ20 ತಂಡ ಇದೆಂಬುದನ್ನು ಒಪ್ಪಲೇಬೇಕು. ಯಶಸ್ವಿ ಜೈಸ್ವಾಲ್‌, ರಿಂಕು ಸಿಂಗ್‌, ತಿಲಕ್‌ ವರ್ಮ, ಜಿತೇಶ್‌ ಶರ್ಮ ಅವರೆಲ್ಲ ಕಳೆದ ಕೆಲವೇ ದಿನಗಳ ಅಂತರದಲ್ಲಿ ಟಿ20 ಕ್ರಿಕೆಟಿಗೆ ಪದಾರ್ಪಣೆ ಮಾಡಿದವರು.

ರೋಹಿತ್‌, ಕೊಹ್ಲಿ, ರಾಹುಲ್‌ ಅವರೆಲ್ಲ 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಭಾರತವನ್ನು ಪ್ರತಿನಿಧಿಸಿಲ್ಲ. ಚುಟುಕು ಮಾದರಿ ಕ್ರಿಕೆಟ್‌ನಿಂದ ಬೇರ್ಪಡಲಿರುವ ಇನ್ನೂ ಕೆಲವು ಆಟಗಾರರು ನಮ್ಮಲ್ಲಿದ್ದಾರೆ. ಹೀಗಾಗಿ ಭಾರತದ ಟಿ20 ಭವಿಷ್ಯವೀಗ ಐಪಿಎಲ್‌ ಹೀರೋಗಳ ಕೈಯಲ್ಲಿದೆ ಎಂದೇ ತೀರ್ಮಾನಿಸಬೇಕಾಗುತ್ತದೆ. ಈ ತಂಡಕ್ಕೀಗ ಬಲಿಷ್ಠ ಆಸ್ಟ್ರೇಲಿಯ ಎದುರು ಮೊದಲ ಅಗ್ನಿಪರೀಕ್ಷೆ ಎದುರಾಗಿದೆ. ಹಾಗೆಯೇ ರೋಹಿತ್‌ ಶರ್ಮ ಬಳಗದ ಫೈನಲ್‌ ಸೋಲನ್ನು ಸ್ವಲ್ಪ ಮಟ್ಟಿಗಾದರೂ ಮರೆಸುವ ಪ್ರಯತ್ನ ಸೂರ್ಯಕುಮಾರ್‌ ಯಾದವ್‌ ತಂಡದಿಂದ ಆಗಬೇಕಿದೆ.
ಇವರಲ್ಲಿ ಕೆಲವರು ವೆಸ್ಟ್‌ ಇಂಡೀಸ್‌, ಐರ್ಲೆಂಡ್‌, ಏಷ್ಯಾ ಕಪ್‌ನಲ್ಲಿ ಕೆಲವು “ಬಿ’ ದರ್ಜೆ ತಂಡಗಳ ವಿರುದ್ಧ ಮಿಂಚಿದ್ದಾರೆ. ಆಸ್ಟ್ರೇಲಿಯ ವಿರುದ್ಧವೂ ಗಮನಾರ್ಹ ಪ್ರದರ್ಶನ ನೀಡಿದರೆ ಕೆಲವು ಆಟಗಾರರ ಸ್ಥಾನ ಗಟ್ಟಿಗೊಳ್ಳುವುದರಲ್ಲಿ ಅನುಮಾನವಿಲ್ಲ.

ಆಸ್ಟ್ರೇಲಿಯ ತಂಡದಲ್ಲೂ ಸಾಕಷ್ಟು ಮಂದಿ ಐಪಿಎಲ್‌ ಸಾಧಕರಿದ್ದಾರೆ. ಸ್ಟೋಯಿನಿಸ್‌, ಎಲ್ಲಿಸ್‌, ಟಿಮ್‌ ಡೇವಿಡ್‌ ಅವರದ್ದೆಲ್ಲ ದೊಡ್ಡ ಹೆಸರು. ಆಸೀಸ್‌ ಬೌಲಿಂಗ್‌ ಲೈನ್‌ಅಪ್‌ ಅತ್ಯಂತ ಘಾತಕವಾಗಿದೆ. ಕೇನ್‌ ರಿಚರ್ಡ್‌ಸನ್‌, ನಥನ್‌ ಎಲ್ಲಿಸ್‌, ಸೀನ್‌ ಅಬೋಟ್‌, ಎಡಗೈ ಬೌಲರ್‌ ಬೆಹೆÅಂಡಾಫ್ì ಅವರನ್ನೊಳಗೊಂಡ ವೇಗದ ವಿಭಾಗ ಉತ್ತಮ ಕ್ವಾಲಿಟಿಯದ್ದಾಗಿದೆ. ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ ಕೂಡ ಇದ್ದಾರೆ. ಇವರನ್ನು ತಡೆದು ನಿಲ್ಲುವಲ್ಲಿ ನಮ್ಮವರು ಯಶಸ್ವಿ ಆಗುವುದು ಮುಖ್ಯ. ಆಗಷ್ಟೇ ಸೂರ್ಯಕುಮಾರ್‌ ಪಡೆ‌ಯಿಂದ ಮೇಲುಗೈ ನಿರೀಕ್ಷಿಸಬಹುದು.

ಎಡಗೈ ಆಟಗಾರರ ದಂಡು
ಪ್ಲಸ್‌ ಪಾಯಿಂಟ್‌ ಎಂದರೆ, ಟಿ20 ಟೀಮ್‌ನಲ್ಲಿ ಎಡಗೈ ಆಟಗಾರರ ದೊಡ್ಡ ದಂಡೇ ಇರುವುದು. ಜೈಸ್ವಾಲ್‌, ಕಿಶನ್‌, ತಿಲಕ್‌, ರಿಂಕು, ಪಟೇಲ್‌, ದುಬೆ, ವಾಷಿಂಗ್ಟನ್‌… ಹೀಗೆ 7 ಮಂದಿ ಲೆಫ್ಟಿಗಳಿದ್ದಾರೆ. ಇದನ್ನು ಭಾರತದ ಭಾರತದ ವಿಶ್ವಕಪ್‌ ತಂಡಕ್ಕೆ ಹೋಲಿಸಿ ನೋಡಿ. ರೋಹಿತ್‌ ಪಡೆಯಲ್ಲಿ ಒಬ್ಬನೇ ಒಬ್ಬ ಎಡಗೈ ಸ್ಪೆಷಲಿಸ್ಟ್‌ ಬ್ಯಾಟರ್‌ ಇರಲಿಲ್ಲ. ಇಶಾನ್‌ ಕಿಶನ್‌ ಇದ್ದರೂ ಗಿಲ್‌ ಆಗಮನದ ಬಳಿಕ ಬೇರ್ಪಟ್ಟರು. ಜಡೇಜ ಅವರನ್ನು ಆಲ್‌ರೌಂಡರ್‌ ಆಗಿ ಪರಿಗಣಿಸಲಾಗಿತ್ತು. ಹೀಗಾಗಿ ಟಿ20 ತಂಡದ ಈ ಲೆಫ್ಟಿಗಳಿಂದ ಭಾರತಕ್ಕೆ ಲಾಭವಾದೀತೇ? ಕುತೂಹಲ ಸಹಜ.

ಅಪಾಯಕಾರಿ ಹೆಡ್‌
ಆಸ್ಟ್ರೇಲಿಯದ ಬ್ಯಾಟಿಂಗ್‌ ಸರದಿ ವಿಶ್ವಕಪ್‌ ಫೈನಲ್‌ ಹೀರೋ ಟ್ರ್ಯಾವಿಸ್‌ ಹೆಡ್‌ ಅವರನ್ನು ಒಳಗೊಂಡಿದೆ. ಜತೆಗೆ ಸ್ಮಿತ್‌, ಮ್ಯಾಕ್ಸ್‌ವೆಲ್‌, ನಾಯಕ ವೇಡ್‌, ಇಂಗ್ಲಿಸ್‌, ಡೇವಿಡ್‌, ಶಾರ್ಟ್‌ ಉಳಿದ ಪ್ರಮುಖರು. ಇವರಿಗೆ ಹೋಲಿಸಿದರೆ ಭಾರತದ ಬೌಲಿಂಗ್‌ ಸಾಮರ್ಥ್ಯ ಸಾಲದೆಂದೇ ಹೇಳಬೇಕಾಗುತ್ತದೆ. ಅರ್ಷದೀಪ್‌, ಪ್ರಸಿದ್ಧ್ ಕೃಷ್ಣ, ಮುಕೇಶ್‌, ಬಿಷ್ಣೋಯಿ, ಆವೇಶ್‌, ವಾಷಿಂಗ್ಟನ್‌ ಅವರೆಲ್ಲ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ನೀಡಿ ಕಾಂಗರೂ ಪಡೆಯ ಮೇಲೆ ಒತ್ತಡ ಹೇರಬೇಕಾದುದು ಅನಿವಾರ್ಯ.

ಸಂಭಾವ್ಯ ತಂಡಗಳು
ಭಾರತ: ಇಶಾನ್‌ ಕಿಶನ್‌, ಯಶಸ್ವಿ ಜೈಸ್ವಾಲ್‌, ಸೂರ್ಯಕುಮಾರ್‌ ಯಾದವ್‌ (ನಾಯಕ), ತಿಲಕ್‌ ವರ್ಮ, ಶಿವಂ ದುಬೆ, ರಿಂಕು ಸಿಂಗ್‌, ಅಕ್ಷರ್‌ ಪಟೇಲ್‌/ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ, ಅರ್ಷದೀಪ್‌ ಸಿಂಗ್‌, ಪ್ರಸಿದ್ಧ್ ಕೃಷ್ಣ/ಆವೇಶ್‌ ಖಾನ್‌, ಮುಕೇಶ್‌ ಕುಮಾರ್‌.

ಆಸ್ಟ್ರೇಲಿಯ: ಸ್ಟೀವನ್‌ ಸ್ಮಿತ್‌, ಮ್ಯಾಥ್ಯೂ ಶಾರ್ಟ್‌, ಆರನ್‌ ಹಾರ್ಡಿ, ಜೋಶ್‌ ಇಂಗ್ಲಿಸ್‌, ಮಾರ್ಕಸ್‌ ಸ್ಟೋಯಿನಿಸ್‌, ಟಿಮ್‌ ಡೇವಿಡ್‌, ಮ್ಯಾಥ್ಯೂ ವೇಡ್‌ (ನಾಯಕ), ಸೀನ್‌ ಅಬೋಟ್‌, ನಥನ್‌ ಎಲ್ಲಿಸ್‌, ಜೇಸನ್‌ ಬೆಹೆÅಂಡಾಫ್ì, ತನ್ವೀರ್‌ ಸಂಘಾ.

 

ಟಾಪ್ ನ್ಯೂಸ್

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

Ahmed Shehzad: ಭಾರತ-ಪಾಕ್‌ ಗಡಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂಗೆ ಸಲಹೆ!

Ahmed Shehzad: ಭಾರತ-ಪಾಕ್‌ ಗಡಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂಗೆ ಸಲಹೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.