T20 WC: ಗಲ್ಲಿ ಕ್ರಿಕೆಟ್ ನೆನಪಿಸಿದ ಕೊಹ್ಲಿ; ಆ್ಯಂಟಿಗುವಾ ಪಂದ್ಯದಲ್ಲಿ ಆಗಿದ್ದೇನು? Video
Team Udayavani, Jun 23, 2024, 1:08 PM IST
ಆ್ಯಂಟಿಗುವಾ: ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 8 ಹಂತದ ಬಾಂಗ್ಲಾದೇಶ ವಿರುದ್ದ ಸುಲಭ ಗೆಲುವು ಸಾಧಿಸಿದ ಭಾರತ ಸೆಮಿ ಹಂತಕ್ಕೆ ಹತ್ತಿರವಾಗಿದೆ. ಆ್ಯಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಆಲ್ ರೌಂಡ್ ಆಟದ ಎದುರು ಬಾಂಗ್ಲಾ ಟೈಗರ್ಸ್ ಸೋಲು ಕಂಡರು.
ಅದ್ಭುತ ಐಪಿಎಲ್ ಬಳಿಕ ಜೋಶ್ ನಲ್ಲಿ ವಿಶ್ವಕಪ್ ಗೆ ಬಂದಿದ್ದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಗ್ರೂಪ್ ಹಂತದಲ್ಲಿ ವಿಫಲರಾಗಿದ್ದಾರೆ. ಆದರೆ ಬಾಂಗ್ಲಾ ವಿರುದ್ದದ ಪಂದ್ಯದಲ್ಲಿ ಉತ್ತಮ ಆರಂಭ ನೀಡಿದ್ದ ವಿರಾಟ್ ದೊಡ್ಡ ಇನ್ನಿಂಗ್ಸ್ ಕಟ್ಟಲಾಗಲಿಲ್ಲ. 28 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು.
ವಿಶ್ವಕಪ್ ನಲ್ಲಿ ಇನ್ನೂ ತನ್ನ ನೈಜ ಆಟ ತೋರಿಸದ ವಿರಾಟ್ ಮೈದಾನದಲ್ಲಿ ಎಂಟರ್ಟೈನ್ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಆ್ಯಂಟಿಗುವಾದಲ್ಲಿ ಅವರು ಚೆಂಡನ್ನು ಪಡೆಯಲು ಜಾಹೀರಾತು ಹೋರ್ಡಿಂಗ್‌ನ ಕೆಳಗೆ ನುಗ್ಗಿ ನೋಡುಗರಿಗೆ ಗಲ್ಲಿ ಕ್ರಿಕೆಟ್ ವೈಬ್ ನೀಡಿದರು.
ಬಾಂಗ್ಲಾದೇಶ ತಂಡಕ್ಕೆ 18 ಎಸೆತಗಳಲ್ಲಿ 74 ರನ್ ಅಗತ್ಯವಿದ್ದಾಗ ಈ ಪ್ರಸಂಗ ನಡೆಯಿತು. ಅರ್ಶದೀಪ್ ಎಸೆತದಲ್ಲಿ ಬಾಂಗ್ಲಾ ಬ್ಯಾಟರ್ ರಿಶಾದ್ ಹುಸೈನ್ ಮಿಡ್ ವಿಕೆಟ್ ಬೌಂಡರಿ ಮೇಲೆ ಸಿಕ್ಸರ್ ಬಾರಿಸಿದರು. ಚೆಂಡು ಅಲ್ಲಿದ್ದ ಎಲ್ಇಡಿ ಜಾಹೀರಾತು ಹೋರ್ಡಿಂಗ್ ಅಡಿಗೆ ಹೋಯಿತು.
Virat Kohli searching for the ball 😂❤pic.twitter.com/tiSXqd7k0e
— Ram Garapati (@srk0804) June 22, 2024
ಮಿಡ್ ವಿಕೆಟ್ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಚೆಂಡನ್ನು ತರಲು ಹೋರ್ಡಿಂಗ್ ಬೋರ್ಡ್ ಒಳಗೆ ತೂರಬೇಕಾಯಿತು. ಇಂತಹ ದೃಶ್ಯಗಳು ಸಾಮಾನ್ಯವಾಗಿ ಗಲ್ಲಿ ಕ್ರಿಕೆಟ್‌ನಲ್ಲಿ ಕಂಡುಬರುತ್ತವೆ, ಕೊಹ್ಲಿಯ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.