T20 WC; ಪಿಚ್ ಮಣ್ಣು ತಿನ್ನಲು ಆ ಕ್ಷಣದ ಭಾವನೆಗಳೇ ಕಾರಣ: ರೋಹಿತ್
Team Udayavani, Jul 3, 2024, 6:00 AM IST
ಬ್ರಿಜ್‌ಟೌನ್: ಬ್ರಿಜ್‌ಟೌನ್‌ನ “ಕೆನ್ಸಿಂಗ್ಟನ್ ಓವಲ್’ ಪಿಚ್‌ನ ಮಣ್ಣು ತಿಂದಿದ್ದಕ್ಕೆ ಆ ಕ್ಷಣದ ಭಾವನೆಗಳೇ ಕಾರಣ ಎಂದು ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ಬಳಿಕ ಅತೀವ ಸಂತಸದಲ್ಲಿದ್ದ ರೋಹಿತ್, ಅಂಗಳದ ಮಣ್ಣನ್ನು ನಾಲಗೆಗೆ ಮೆತ್ತಿಕೊಂಡಿದ್ದರು. ಹಿಂದೆ ವಿಂಬಲ್ಡನ್ ಟೆನಿಸ್ ವಿಜಯದ ವೇಳೆ ನೊವಾಕ್ ಜೊಕೋವಿಕ್ ಅಲ್ಲಿನ ಹುಲ್ಲು ತಿಂದಿದ್ದರು. ರೋಹಿತ್ ಇದನ್ನೇ ಅನುಕರಿಸಿರಬಹುದು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಶ್ನಿಸಿದಾಗ ರೋಹಿತ್ ಮೇಲಿನಂತೆ ಉತ್ತರಿಸಿದ್ದಾರೆ.
ಪಿಚ್ಚಿನ ಮಣ್ಣಿನ ರುಚಿ ಸವಿದಿರುವ ಬಗ್ಗೆ ಗುಟ್ಟು ಬಿಚ್ಚಿಟ್ಟಿರುವ ರೋಹಿತ್, “ಅದು ಮೊದಲೇ ಯೋಜಿಸಿದ್ದಲ್ಲ, ಸಹಜವಾಗಿ ಬಂದಿದ್ದು. ಅದು ಆ ಕ್ಷಣದಲ್ಲಿ ನನಗನ್ನಿಸಿದ ಭಾವನೆ. ಯಾಕೆಂದರೆ ಇದೇ ಪಿಚ್ ನಮಗೆ ಟಿ20 ವಿಶ್ವಕಪ್ ನೀಡಿದ್ದು. ಇದೇ ಮೈದಾನದಲ್ಲಿ ನಾವು ಆಡಿ ಗೆದ್ದಿದ್ದು. ನಾನು ಈ ಪಿಚ್ಚನ್ನು ನನ್ನ ಜೀವಮಾನದುದ್ದಕ್ಕೂ ನೆನಪಿಸಿಕೊಳ್ಳುತ್ತೇನೆ. ಹೀಗಾಗಿ ನಾನು ಪಿಚ್‌ನ ಸಣ್ಣ ತುಣುಕನ್ನು ನನ್ನೊಂದಿಗೆ ಒಯ್ಯಲು ಬಯಸಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.