T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು
Team Udayavani, Jun 30, 2024, 8:38 AM IST
ಬಾರ್ಬಡೋಸ್: ಹಲವು ಕಾಯುವಿಕೆಯ ಬಳಿಕ ಅಂದರೆ ಸುಮಾರು 17 ವರ್ಷಗಳ ಬಳಿಕ ಭಾರತವು ಟಿ20 ವಿಶ್ವಕಪ್ ಜಯಿಸಿದೆ. ಬ್ರಿಜ್ ಟೌನ್ ನ ಕೆನ್ನಿಂಗ್ಸ್ಟನ್ ಓವಲ್ ನಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ರೋಹಿತ್ ಬಳಗವು ದಕ್ಷಿಣ ಆಫ್ರಿಕಾ ತಂಡವನ್ನು ಏಳು ರನ್ ಗಳ ಅಂತರದಿಂದ ಸೋಲಿಸಿತು. ಈ ಮೂಲಕ ಕೋಟಿ ಕೋಟಿ ಭಾರತೀಯರು ಕಾಯುತ್ತಿದ್ದ ಘಳಿಗೆಗೆ ಕೆರಿಬಿಯನ್ ದ್ವೀಪ ಸಾಕ್ಷಿಯಾಯಿತು.
ಕಳೆದ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, ಏಕದಿನ ಫೈನಲ್ ಗೆ, ಇದೀಗ ಟಿ20 ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಭಾರತೀಯ ತಂಡದ ಪಯಣ ಕೂಡಾ ಈ ಗೆಲುವಿನೊಂದಿಗೆ ಅಂತ್ಯವಾಗಿದೆ. ಟಿ20 ವಿಶ್ವಕಪ್ ಅವರ ಕೊನೆಯ ಕೂಟವಾಗಿತ್ತು.
ಟಿ20 ವಿಶ್ವಕಪ್ 2024 ಗೆದ್ದ ಬಳಿಕ ಮಾತನಾಡಿದ ದ್ರಾವಿಡ್, “ಒಬ್ಬ ಆಟಗಾರನಾಗಿ, ನಾನು ಟ್ರೋಫಿ ಗೆಲ್ಲುವ ಅದೃಷ್ಟವನ್ನು ಹೊಂದಿರಲಿಲ್ಲ ಆದರೆ ನಾನು ನನ್ನ ಅತ್ಯುತ್ತಮವಾದುದನ್ನು ನೀಡಿದ್ದೆ. ಕೋಚ್ ಆಗಿ, ತಂಡ ಈ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗುವಂತೆ ಮಾಡಿದ್ದು ನನ್ನ ಅದೃಷ್ಟ ಇದು ಉತ್ತಮ ಪ್ರಯಾಣವಾಗಿದೆ … ” ಎಂದಿದ್ದಾರೆ.
𝗗𝗿𝗲𝗮𝗺 𝗙𝗶𝗻𝗶𝘀𝗵! ☺️ 🏆
Signing off in a legendary fashion! 🫡 🫡
Congratulations to #TeamIndia Head Coach Rahul Dravid on an incredible #T20WorldCup Campaign 👏👏#SAvIND pic.twitter.com/GMO216VuXy
— BCCI (@BCCI) June 29, 2024
“ಇದು 2 ವರ್ಷಗಳ ಪ್ರಯಾಣ, ಕೇವಲ ಈ ಟಿ20 ವಿಶ್ವಕಪ್ ನದ್ದು ಅಲ್ಲ. ಈ ತಂಡದ ನಿರ್ಮಾಣ, ಬಯಸಿದ್ದ ಕೌಶಲ್ಯಗಳು, ನಾವು ಬಯಸಿದ ಆಟಗಾರರು… ಇವೆಲ್ಲಾ ನಾನು 2021 ರಲ್ಲಿ ಹುದ್ದೆಗೆ ಬಂದಾಗ ಪ್ರಾರಂಭವಾದ ಚರ್ಚೆಗಳು. ಕೇವಲ ಈ ವಿಶ್ವಕಪ್ ನ ಸಿದ್ದತೆಯಲ್ಲ. ಇದು 2 ವರ್ಷಗಳ ಪ್ರಯಾಣದಂತೆ ಭಾಸವಾಗುತ್ತಿದೆ. ಎರಡು ವರ್ಷದಿಂದ ಏನೆಲ್ಲಾ ಮಾಡಿದ್ದೆವು ಅದೆಲ್ಲಾ ಈಗ ಬಾರ್ಬಡೋಸ್ ನಲ್ಲಿ ಬಂದು ಸಮ್ಮಿಳಿತವಾಗಿದೆ ಅಷ್ಟೇ” ಎಂದು ರಾಹುಲ್ ಹೇಳಿದರು.
End of an era 😭💙 pic.twitter.com/FW7ZpPLRX5
— KolkataKnightRiders (@KKRiders) June 29, 2024
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರೋಹಿತ್ ಶರ್ಮಾ ನಿವೃತ್ತಿಯ ಕುರಿತು ಮಾತನಾಡಿದ ಅವರು, “ಒಬ್ಬ ವ್ಯಕ್ತಿಯಾಗಿ ನಾನು ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ… ಅವರು ಯಾವ ರೀತಿಯ ವ್ಯಕ್ತಿ ಎನ್ನುವುದು, ಅವರು ನನಗೆ ತೋರಿದ ಗೌರವ, ತಂಡಕ್ಕಾಗಿ ಅವರು ಹೊಂದಿದ್ದ ಕಾಳಜಿ ಮತ್ತು ಬದ್ಧತೆ ನನ್ನನು ಪ್ರಭಾವಿಸಿದೆ. ಅವರು ಎಂದಿಗೂ ಹಿಮ್ಮೆಟ್ಟಲಿಲ್ಲ, ಒಬ್ಬ ವ್ಯಕ್ತಿಯಾಗಿ ನಾನು ರೋಹಿತ್ ರನ್ನು ಮಿಸ್ ಮಾಡಿಕೊಳ್ಳುತ್ತೇನೆ” ಎಂದರು.
ಭಾರತೀಯ ಕ್ರಿಕೆಟ್ ತಂಡದಲ್ಲಿರುವ ಇಂದಿನ ಹುಡುಗರು ಅದ್ಭುತ ಪ್ರತಿಭೆಗಳಿದ್ದಾರೆ. ಈ ಸಮಯದಲ್ಲಿ ಅವರ ಶಕ್ತಿ ಮತ್ತು ಆತ್ಮವಿಶ್ವಾಸ ಮತ್ತೊಂದು ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಭಾರತವು ಮುಂದಿನ 5-6 ವರ್ಷಗಳಲ್ಲಿ ಹಲವಾರು ಟ್ರೋಫಿಗಳನ್ನು ಗೆಲ್ಲುತ್ತದೆ. ಇಷ್ಟೆಲ್ಲಾ ಸಾಮರ್ಥ್ಯವಿದೆ, ಇಷ್ಟೆಲ್ಲಾ ಒಳ್ಳೆಯ ಕ್ರಿಕೆಟ್ ಆಡುತ್ತಿದ್ದೇವೆ, ಆದರೆ ದೊಡ್ಡ ಟ್ರೋಫಿ ಎಂಬ ಗೆರೆ ದಾಟಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವೊಂದಿತ್ತು. ಆದರೆ ಮುಂದಿನ ದಿನಗಳಲ್ಲಿ ಹುಡುಗರು ಇದೇ ವಿಶ್ವಾಸದಲ್ಲಿ ತುಂಬಾ ಟ್ರೋಫಿ ಗೆಲ್ಲಲಿದ್ದಾರೆ ಎಂಬ ದೈರ್ಯವಿದೆ” ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.