ಹರ್ಮನ್‌ಪ್ರೀತ್‌ ಹಾರಾಟ; ಭಾರತ ಬೊಂಬಾಟ್‌ ಆಟ

Team Udayavani, Nov 11, 2018, 6:55 AM IST

indian-cricketer-harman-kaur.jpg

ಪ್ರೊವಿಡೆನ್ಸ್‌ (ಗಯಾನಾ): ಏಕದಿನ ವಿಶ್ವಕಪ್‌ ಸೆಮಿಪೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸುಂಟರಗಾಳಿಯಂಥ ಬೀಸುಗೆಯಲ್ಲಿ ಅಜೇಯ 171 ರನ್‌ ಸಿಡಿಸಿದ 16 ತಿಂಗಳ ಬಳಿಕ ಮತ್ತೂಂದು ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನದಿಂದ ಸುದ್ದಿಯಾಗಿದ್ದಾರೆ ಟೀಮ್‌ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್‌ ಕೌರ್‌.

ಟಿ20 ವಿಶ್ವಕಪ್‌ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಕೇವಲ 51 ಎಸೆತಗಳಲ್ಲಿ ಕೌರ್‌ 103 ರನ್‌ ಬಾರಿಸಿದ್ದಾರೆ. ಪರಿಣಾಮ, 34 ರನ್‌ ಜಯದೊಂದಿಗೆ ಭಾರತದ ಶುಭಾರಂಭ.

ಶುಕ್ರವಾರ ರಾತ್ರಿ ಗಯಾನಾದ ಪ್ರೊವಿಡೆನ್ಸ್‌ ಅಂಗಳದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 5 ವಿಕೆಟಿಗೆ 194 ರನ್‌ ಪೇರಿಸಿ ಸರ್ವಾಧಿಕ ಮೊತ್ತದ ವಿಶ್ವದಾಖಲೆ ನಿರ್ಮಿಸಿದರೆ, ನ್ಯೂಜಿಲ್ಯಾಂಡ್‌ 9 ವಿಕೆಟಿಗೆ 160 ರನ್‌ ಗಳಿಸಿ ಶರಣಾಯಿತು. ರವಿವಾರ ರಾತ್ರಿ ನಡೆಯಲಿರುವ “ಬಿ’ ವಿಭಾಗದ ತನ್ನ 2ನೇ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ಥಾನ ವಿರುದ್ಧ ಸೆಣಸಲಿದ್ದಾರೆ.

49 ಎಸೆತಗಳಲ್ಲಿ ಶತಕ
ಮೊದಲ 13 ಎಸೆತಗಳಲ್ಲಿ ಕೇವಲ 5 ರನ್‌ ಮಾಡಿದ್ದ ಹರ್ಮನ್‌ಪ್ರೀತ್‌, ಈ ಹಂತದಿಂದ ಒಮ್ಮೆಲೇ “ಸ್ಫೋಟಕ ಮೋಡ್‌’ಗೆ ಪರಿವರ್ತನೆಗೊಂಡರು. 33 ಎಸೆತಗಳಲ್ಲಿ ಅರ್ಧ ಶತಕ ದಾಖಲಾಯಿತು. ಇನ್ನಷ್ಟು ಬಿರುಸುಗೊಂಡ ಕೌರ್‌, 49 ಎಸೆತ ಎದುರಿಸುವಷ್ಟರಲ್ಲಿ ಶತಕವನ್ನೂ ಬಾರಿಸಿದರು! 6ನೇ ಓವರಿನಲ್ಲಿ 40 ರನ್ನಿಗೆ 3 ವಿಕೆಟ್‌ ಬಿದ್ದಾಗ ಕ್ರೀಸ್‌ ಇಳಿದ ಕೌರ್‌ ಚುಟುಕು ಕ್ರಿಕೆಟಿನ ಅಸಾಮಾನ್ಯ ಬ್ಯಾಟಿಂಗ್‌ ಸಾಹಸವೊಂದಕ್ಕೆ ಸಾಕ್ಷಿಯದರು. ಇದರೊಂದಿಗೆ ಟಿ20 ವಿಶ್ವಕಪ್‌ಗೆ “ಫ‌ುಲ್‌ ಪ್ಯಾಕೇಜ್‌’ ಓಪನಿಂಗ್‌ ಲಭಿಸಿತು.

ಬೆನ್ನಟ್ಟಿ ಬಂದ ಬೇಟ್ಸ್‌
ಭಾರತದ ವಿಶ್ವದಾಖಲೆಯ ಮೊತ್ತಕ್ಕೆ ಕಿವೀಸ್‌ ಓಪನರ್‌ ಸುಝೀ ಬೇಟ್ಸ್‌ ಸಿಡಿಲಬ್ಬರದ ಆರಂಭವನ್ನೇ ನೀಡಿದರು. 6.3 ಓವರ್‌ಗಳಲ್ಲಿ 52 ರನ್‌ ಒಟ್ಟುಗೂಡಿತು. 14ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಬೇಟ್ಸ್‌ 50 ಎಸೆತಗಳಿಂದ 67 ರನ್‌ ಸಿಡಿಸಿದರು (8 ಬೌಂಡರಿ). ಆದರೆ ಇನ್ನೊಂದು ತುದಿಯಲ್ಲಿ ವಿಕೆಟ್‌ ಕೀಳುವ ಯೋಜನೆಯಲ್ಲಿ ಭಾರತ ಯಶಸ್ವಿಯಾಗಿತ್ತು. ಪದಾರ್ಪಣ ಪಂದ್ಯವಾಡಿದ ಡಿ. ಹೇಮಲತಾ ಮತ್ತು ಪೂನಂ ಯಾದವ್‌ ತಲಾ 3, ರಾಧಾ ಯಾದವ್‌ 2 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-5 ವಿಕೆಟಿಗೆ 194 (ಹರ್ಮನ್‌ಪ್ರೀತ್‌ 103, ಜೆಮಿಮಾ 59, ತಹುಹು 18ಕ್ಕೆ 2). ನ್ಯೂಜಿಲ್ಯಾಂಡ್‌-9 ವಿಕೆಟಿಗೆ 160 (ಬೇಟ್ಸ್‌ 67, ಮಾರ್ಟಿನ್‌ 39, ಹೇಮಲತಾ 26ಕ್ಕೆ 3, ಪೂನಂ ಯಾದವ್‌ 33ಕ್ಕೆ 3, ರಾಧಾ ಯಾದವ್‌ 31ಕ್ಕೆ 2). ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.

ಓಡಲಾಗುತ್ತಿಲ್ಲವೆಂದು ಸಿಕ್ಸರ್‌,ಬೌಂಡರಿ ಚಚ್ಚಿದ ಹರ್ಮನ್‌!
ಮಾಮೂಲಿ ಕ್ರಿಕೆಟಿಗರಿಗೂ ಅದ್ಭುತ ಕ್ರಿಕೆಟಿಗರಿಗೂ ಏನು ವ್ಯತ್ಯಾಸ? ಸಮಸ್ಯೆಗಳಿಗೆ ಸಿಲುಕಿದರೆ ಮಾಮೂಲಿ ಕ್ರಿಕೆಟಿಗರು ಶರಣಾಗುತ್ತಾರೆ. ಅದ್ಭುತ ಕ್ರಿಕೆಟಿಗರು ಅದನ್ನೇ ಒಂದು ಸವಾಲಾಗಿ ಸ್ವೀಕರಿಸುತ್ತಾರೆ. ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅದ್ಭುತ ಕ್ರಿಕೆಟಿಗರ ಸಾಲಿಗೆ ಸೇರುತ್ತಾರೆ. ಇದು ಮಹಿಳಾ ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಸಾಬೀತಾಗಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆನ್ನು ನೋವು ಮತ್ತು ಹೊಟ್ಟೆ ಸ್ನಾಯು ಸೆಳೆತಕ್ಕೆ ಸಿಲುಕಿದ್ದ ಹರ್ಮನ್‌, ಓಡಲು ಸಾಧ್ಯವಾಗದ ಸ್ಥಿತಿ ತಲುಪಿದ್ದರು. ಆಗವರು ಓಡುವುದನ್ನು ನಿಲ್ಲಿಸಿ, ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದು ಪಂದ್ಯವನ್ನೇ ಗೆಲ್ಲಿಸಿದರು!
ಶುಕ್ರವಾರ ಹರ್ಮನ್‌ ಶತಕ ಬಾರಿಸದಿದ್ದರೆ ಭಾರತದ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಸೋಲುವ ಸಾಧ್ಯತೆಯೂ ಇತ್ತು. ಅಂತಹ ಕಷ್ಟದ ಪರಿಸ್ಥಿತಿಯಲ್ಲೂ ಹರ್ಮನ್‌ ಅದ್ಭುತ ಹೊಡೆತಗಳೊಂದಿಗೆ ತಂಡವನ್ನು ಮೇಲೆತ್ತಿದರು. ಪಂದ್ಯ ಮುಗಿದ ಮೇಲೆ ತಮ್ಮ ಸ್ಥಿತಿಯನ್ನು ಹರ್ಮನ್‌ ಹೇಳಿಕೊಂಡಿದ್ದಾರೆ.

“ಶುಕ್ರವಾರ ಬೆಳಗ್ಗೆಯೇ ನನಗೆ ಬೆನ್ನುನೋವು ಇತ್ತು. ಪರಿಸ್ಥಿತಿ ಉತ್ತಮವಾಗಿಲ್ಲ ಅನ್ನಿಸಿತ್ತು. ಮೈದಾನಕ್ಕಿಳಿದಾಗಲೇ ಹೊಟ್ಟೆ ಸ್ನಾಯುಬಿಗಿತ ಉಂಟಾಗಿತ್ತು. ಬ್ಯಾಟ್‌ ಹಿಡಿದು ಅಂಕಣದಲ್ಲಿ ಓಡಲು ಶುರು ಮಾಡಿದಾಗ ಪರಿಸ್ಥಿತಿ ಇನ್ನಷ್ಟು ಹದೆಗೆಟ್ಟಿತು. ಬಿಗಿತ ಜೋರಾಯಿತು. ಕಡೆಗೆ ವಿಧಿಯಿಲ್ಲದೇ ಸಹ ಬ್ಯಾಟ್ಸ್‌ಮನ್‌ ಜೆಮಿಮಾ ಬಳಿ ತೆರಳಿ, ನೀನು ನನಗೆ ಸ್ಟ್ರೈಕ್‌ ನೀಡಿದರೆ ಚಚ್ಚಲು ಶುರು ಮಾಡುತ್ತೇನೆ ಎಂದೆ. ಈ ಪ್ರಯತ್ನದಲ್ಲಿ ಯಶಸ್ವಿಯಾದೆ. ಪಂದ್ಯವನ್ನು ಗೆಲ್ಲಲು 150ರಂತಹ ಸಣ್ಣ ಮೊತ್ತ ಸಾಕಾಗುವುದಿಲ್ಲವೆಂದು ನನಗೆ ಮುಂಚಿತವಾಗಿಯೇ ಗೊತ್ತಿತ್ತು’ ಎಂದು ಹರ್ಮನ್‌ಪ್ರೀತ್‌ ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.