T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ


Team Udayavani, Jun 25, 2024, 11:18 AM IST

T20 World Cup:‌ ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ

ಕಿಂಗ್‌ ಸ್ಟನ್:‌ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅಫ್ಘಾನಿಸ್ಥಾನ ಬಾಂಗ್ಲಾದೇಶವನ್ನು ಮಣಿಸಿ ಚೊಚ್ಚಲ ಬಾರಿಗೆ ಸೆಮಿಫೈನಲ್ ಗೇರಿದೆ.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಗಿಳಿದ ಅಫ್ಘಾನಿಸ್ಥಾನ ಆರಂಭದಲ್ಲಿ ಜೊತೆಯಾಟ ನೀಡಿದ ಬಳಿಕ ಮಂದಗತಿಯ ಆಟವನ್ನು ಆಡಿತು.

ಗುರ್ಬಜ್‌(43 ರನ್), ಇಬ್ರಾಹಿಂ ಜದ್ರಾನ್‌(18‌ ರನ್) ಪವರ್‌ ಪ್ಲೇ ಓವರ್‌ ನಲ್ಲಿ ಬಿರುಸಿನ ಆಟವನ್ನು ನೀಡಿದ ಬಳಿಕ ಅಘ್ಘಾನ್‌ ತಂಡದ ಇತರೆ ಬ್ಯಾಟರ್‌ ಗಳು ಕನಿಷ್ಠ ರನ್‌ ಬಾರಿಸಿ ಪೆವಿಲಿಯನ್‌ ನತ್ತ ಸಾಗಿದರು.

ಅಂತಿಮ ಹಂತದಲ್ಲಿ ಬಂದ ಕ್ಯಾಪ್ಟನ್‌ ರಶೀದ್‌ ಖಾನ್‌ 19 ರನ್‌ ಬಾರಿಸಿ ನೂರಾರ ಗಡಿದಾಟಿಸಿದರು.

ಬಾಂಗ್ಲಾದ ಪರವಾಗಿ ರಿಶಾದ್ ಹುಸೇನ್‌ 3 ಪ್ರಮುಖ ವಿಕೆಟ್‌ ಗಳನ್ನು ಪಡೆದರು. ಮುಸ್ತಫಿಜುರ್, ತಸ್ಕಿನ್ ಅಹ್ಮದ್ ತಲಾ 1 ವಿಕೆಟ್‌ ಪಡೆದರು.‌

20 ಓವರ್‌ ನಲ್ಲಿ 5 ವಿಕೆಟ್‌ ಕಳೆದುಕೊಂಡು 115 ರನ್‌ ಗಳ ಕನಿಷ್ಠ ಗುರಿಯನ್ನು ಅಘ್ಘಾನ್‌ ಬಾಂಗ್ಲಾಕ್ಕೆ ನೀಡಿತು.

12.1 ಓವರ್‌ ಯೊಳಗೆ ಪಂದ್ಯವನ್ನು ಗೆದ್ದರೆ ಬಾಂಗ್ಲಾ ಕೂಡ ಸೆಮಿಪೈನಲ್‌ ಗೆ ಹೋಗುವ ಅವಕಾಶವಿತ್ತು. ಈ ಕಾರಣದಿಂದ ಆರಂಭದಲ್ಲೇ ಬಿರುಸಿದ ಬ್ಯಾಟಿಂಗ್‌ ಮಾಡಲು ಬಾಂಗ್ಲಾ ಆಟಗಾರರು ಮುಂದಾದರು.

ಆರಂಭಿಕ ಆಟಗಾರ ಲಿಟನ್‌ ದಾಸ್ 54 ರನ್‌ ಗಳಿಸಿ ಔಟಾಗದೆ ತಂಡವನ್ನು ಗೆಲುವಿನತ್ತ ಸಾಗಿಸಲು ಪ್ರಯತ್ನಿಸಿದರು. ಆದರೆ ಉಳಿದ ಆಟಗಾರರು ಸಾಲಾಗಿ ವಿಕೆಟ್‌ ಒಪ್ಪಿಸುತ್ತಾ ಹೋದರು. ಬಾಂಗ್ಲಾದ ಭರವಸೆ ಆಟಗಾರರಾದ ಶಾಕಿಬ್ ಅಲ್ ಹಸನ್, ತಂಝೀದ್ ಹಸನ್, ನಜ್ಮುಲ್ ಹೊಸೈನ್ ಶಾಂತೋ, ಸೌಮ್ಯ ಸರ್ಕಾರ್, ಮಹಮ್ಮದುಲ್ಲಾ ಎರಡಂಕಿ ರನ್‌ ಗಳಿಸಲೂ ಕೂಡ ಪರದಾಡುವ ಸ್ಥಿತಿ ಕಂಡುಬಂತು.

ಕನಿಷ್ಠ ಮೊತ್ತದ ಪಂದ್ಯದಲ್ಲಿ ಅಘ್ಘಾನ್‌ ಬ್ಯಾಟರ್‌ ಗಳನ್ನು ಕಟ್ಟಿಹಾಕಿ ಪಂದ್ಯದ ಮೇಲೆ ಗರಿಷ್ಠ ಒತ್ತಡವನ್ನು ಹಾಕಿದರು. ಒಂದು ಹಂತದಲ್ಲಿ ಸುಲಭವಾಗಿ ಪಂದ್ಯವನ್ನು ಗೆಲುವ ಸಾಧ್ಯತೆಯಿದ್ದ ಪಂದ್ಯದಲ್ಲಿ ಅಘ್ಘಾನ್‌ ಬೌಲರ್‌ ಗಳು ಮೈಲುಗೈ ಸಾಧಿಸಿದರು.

ಮಳೆಯ ಕಾರಣದಿಂದ ಪಂದ್ಯವನ್ನು 19 ಓವರ್‌ ಗೆ ಇಳಿಸಲಾಗಿತ್ತು. 114 ರ ಗುರಿಯನ್ನು ನೀಡಲಾಗಿತ್ತು.

ನವೀನ್‌ ಉಲ್‌ ಹಕ್‌ ಹಾಗೂ ನಾಯಕ ರಶೀದ್‌ ಖಾನ್‌ ಅವರ ಬೌಲಿಂಗ್‌ ಬಾಂಗ್ಲಾದ ಬ್ಯಾಟರ್‌ ಗಳು ತತ್ತರಿಸಿದರು. ನವೀನ್‌ ಹಾಗೂ ರಶೀದ್‌ ತಲಾ 4 ವಿಕೆಟ್‌ ಗಳನ್ನು ಪಡೆದರು.

ಅಘ್ಘಾನ್‌ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶವನ್ನು ಪಡೆದಿದೆ. ಇನ್ನೊಂದೆಡೆ  ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದೆ.

ಮೊದಲ ಸೆಮಿಫೈನಲ್‌ ಜೂ.26 ರಂದು ದಕ್ಷಿಣ ಆಫ್ರಿಕಾ – ಅಫ್ಘಾನಿಸ್ತಾನ ನಡುವೆ ನಡೆಯಲಿದೆ. ಎರಡನೇ ಸೆಮಿಫೈನಲ್‌ ಜೂ.27 ರಂದು ಭಾರತ – ಇಂಗ್ಲೆಂಡ್‌ ನಡುವೆ ನಡೆಯಲಿದೆ.

ಟಾಪ್ ನ್ಯೂಸ್

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC

ICC; ಟು-ಟೈರ್‌ ಟೆಸ್ಟ್‌  ನಿಯಮಕ್ಕೆ ಸಿದ್ಧತೆ? ಏನಿದು ಸಿಸ್ಟಮ್‌?

badminton

Malaysia Super 1000 Badminton: ಯಶಸ್ವಿ ಆರಂಭಕ್ಕೆ ಮೊದಲ ಮೆಟ್ಟಿಲು

1-kho

Kho Kho ಇಂಡಿಯಾಕ್ಕೆ ಒಡಿಶಾ ಪ್ರಾಯೋಜಕತ್ವ

1-Y-J

Yashasvi Jaiswal ವಿಶ್ವಾಸ; ನಾವು ಬಲಿಷ್ಠರಾಗಿ ಬರುವೆವು…

1-SA

Test; ಪಾಕಿಸ್ಥಾನಕ್ಕೆ 10 ವಿಕೆಟ್‌ ಸೋಲು :ದಕ್ಷಿಣ ಆಫ್ರಿಕಾ 2-0 ಕ್ಲೀನ್‌ಸ್ವೀಪ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.