ಟಿ20 ವಿಶ್ವಕಪ್, ಐಪಿಎಲ್ ಭವಿಷ್ಯ ಇಂದು ನಿರ್ಧಾರ
- ಐಸಿಸಿ ಟೆಲಿ ಕಾನ್ಫರೆನ್ಸ್ - ಟಿ20 ವಿಶ್ವಕಪ್ 2022ಕ್ಕೆ? ಐಪಿಎಲ್ ಹಾದಿ ಸುಗಮ?
Team Udayavani, May 28, 2020, 6:28 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ಈ ವರ್ಷಾಂತ್ಯ ನಡೆಯುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಹಾಗೂ 2020ರ ಐಪಿಎಲ್ ಕೂಟದ ಭವಿಷ್ಯ ಗುರುವಾರ ನಿರ್ಧಾರವಾಗಲಿದೆ. ಐಸಿಸಿ ನಡೆಸಲಿರುವ ಟೆಲಿ ಕಾನ್ಫರೆನ್ಸ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳ ಕಾತರ, ನಿರೀಕ್ಷೆಗಳಿಗೆಲ್ಲ ಬಹುತೇಕ ತೆರೆ ಬೀಳಲಿದೆ.
ಜಗತ್ತನ್ನೇ ವ್ಯಾಪಿಸಿರುವ ಕೋವಿಡ್ ದಿಂದಾಗಿ ಐಪಿಎಲ್ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗೆಯೇ 2020ರ ಕೊನೆಯಲ್ಲಿ ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಕೂಡ ಅನಿಶ್ಚಿತತೆಯಲ್ಲಿದೆ. ಈಗಿನ ಲೆಕ್ಕಾಚಾರವೊಂದರ ಪ್ರಕಾರ ಟಿ20 ವಿಶ್ವಕಪ್ ಪಂದ್ಯಾವಳಿ 2022ಕ್ಕೆ ಮುಂದೂಡಲ್ಪಡಲಿದೆ. ಇಲ್ಲಿ ಲಭಿಸಿದ ಅವಕಾಶದಲ್ಲಿ ಐಪಿಎಲ್ ಪಂದ್ಯಾ ವಳಿಯನ್ನು ಆಡಿಸುವುದು ಬಿಸಿಸಿಐ ಯೋಜನೆಯಾಗಿದೆ.
“ಗುರುವಾರದ ಸಭೆಯಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡುವ ಎಲ್ಲ ಸಾಧ್ಯತೆ ಗೋಚರಿಸುತ್ತಿದೆ. ಈ ವರ್ಷ ಟಿ20 ವಿಶ್ವಕಪ್ ನಡೆಯುವ ಸಾಧ್ಯತೆ ಕ್ಷೀಣಿಸಿದೆೆ’ ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾನಾ ಲೆಕ್ಕಾಚಾರಗಳು
ಬಿಸಿಸಿಐ ಮೂಲದ ಪ್ರಕಾರ ಟಿ20 ವಿಶ್ವಕಪ್ ಮುಂದಿನ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇಲ್ಲಿ ನಾನಾ ಲೆಕ್ಕಾಚಾರಗಳಿವೆ. ಒಂದು ವೇಳೆ ಈ ವರ್ಷದ ಟಿ20 ವಿಶ್ವಕಪ್ ಜಾಗದಲ್ಲಿ ಐಪಿಎಲ್ ನಡೆದರೂ ಅನಂತರದ 3-4 ತಿಂಗಳಲ್ಲೇ 2021ರ ಐಪಿಎಲ್ ನಡೆಸು ವುದು ಎಷ್ಟು ಸಮಂಜಸ ಎಂಬುದು ಮುಖ್ಯ ಪ್ರಶ್ನೆ. ಇದರಲ್ಲಿ ಸ್ಟಾರ್ ಸ್ಪೋರ್ಟ್ಸ್ ಪಾತ್ರವೂ ನಿರ್ಣಾಯಕ ಎಂಬುದಾಗಿ ಬಿಸಿಸಿಐ ಹೇಳಿದೆ.
2021ರಲ್ಲಿ ಮತ್ತೂಂದು ವಿಶ್ವಕಪ್!
ಐಸಿಸಿ ವೇಳಾಪಟ್ಟಿ ಪ್ರಕಾರ 2021ರಲ್ಲೂ ಟಿ20 ವಿಶ್ವಕಪ್ ನಡೆಯಲಿದ್ದು, ಇದು ಭಾರತದ ಆತಿಥ್ಯದಲ್ಲಿ ಸಾಗಲಿರುವುದು ವಿಶೇಷ. ಇದರ ದಿನಾಂಕವಿನ್ನೂ ಪ್ರಕಟಗೊಂಡಿಲ್ಲ. ತನ್ನ ಆತಿಥ್ಯವನ್ನು ಐಸಿಸಿ ಕಸಿದುಕೊಳ್ಳದು ಎಂಬ ವಿಶ್ವಾಸ ಬಿಸಿಸಿಐನದ್ದು. ಆದರೆ ಸೀಮಿತ ಅವಧಿಯಲ್ಲಿ ಅದೆಷ್ಟು ವಿಶ್ವಕಪ್ ಪಂದ್ಯಾವಳಿಗಳನ್ನು ನಡೆಸಲು ಸಾಧ್ಯ ಎಂಬ ಪ್ರಶ್ನೆಗೂ ಇಲ್ಲಿ ಪರಿಹಾರ ಹುಡುಕಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.