ಆಗಸ್ಟ್ ವರೆಗೆ ವಿಶ್ವಕಪ್ ಟಿ20 ಕುರಿತ ಮಾತೇ ಇಲ್ಲ! ವಿಶ್ವಕಪ್ ಬಗ್ಗೆ ಆಸೀಸ್ ಹೇಳುವುದೇನು?
Team Udayavani, Apr 21, 2020, 10:03 AM IST
ಮುಂಬೈ: ವಿಶ್ವದೆಲ್ಲೆಡೆ ಕೊರೊನಾ ವೈರಸ್ ಅಟ್ಟಹಾಸಗೈಯುತ್ತಿರುವುದರಿಂದ ಟಿ20 ವಿಶ್ವಕಪ್ ಕ್ರಿಕೆಟ್ ಕೂಟ ಕೂಡ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸೆ.30ರ ತನಕ ವಿಶ್ವಕಪ್ ಆತಿಥ್ಯ ವಹಿಸಿರುವ ಆಸ್ಟ್ರೇಲಿಯ ಕೊರೊನಾಕ್ಕೆ ಹೆದರಿ ತನ್ನ ಗಡಿಬಾಗಿಲನ್ನು ಮುಚ್ಚಿದೆ.
ಅ.18ರಿಂದ ವಿಶ್ವಕಪ್ ಆರಂಭ, ಇಂತಹ ವಿಷಮ ಪರಿಸ್ಥಿತಿಯಲ್ಲಿ ಅಕ್ಟೋಬರ್ನಲ್ಲಿ ವಿಶ್ವಕಪ್ ಕೂಟವನ್ನು ಆಯೋಜಿಸುವುದು ಕಷ್ಟ ಎಂದು
ಅಂದಾಜಿಸಲಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಗಸ್ಟ್ ವರೆಗೆ ಯಾವುದೇ ನಿರ್ಧಾರ ತೆಗೆದು ಕೊಳ್ಳದಿರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್-19 ಕಾರಣದಿಂದ ವಿಶ್ವಾದ್ಯಂತ ಕ್ರೀಡಾಕೂಟಗಳು ರದ್ದಾಗಿದೆ. ಅಕ್ಟೋಬರ್ 18 ರಿಂದ ನವೆಂಬರ್ 15ರವರೆಗೆ ಟಿ20 ವಿಶ್ವಕಪ್ ಆಯೋಜಿಸಲಾಗಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.