ಕಾಂಗರೂಗೆ ಅಯರ್‌ಲ್ಯಾಂಡ್ ಸುಲಭ ತುತ್ತು
Team Udayavani, Nov 13, 2018, 6:10 AM IST
ಪ್ರೊವಿಡೆನ್ಸ್ (ಗಯಾನಾ): ರವಿವಾರ ರಾತ್ರಿಯ 2ನೇ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಯರ್‌ಲ್ಯಾಂಡ್ ವನಿತೆಯರು ಆಸ್ಟ್ರೇಲಿಯಕ್ಕೆ ಸುಲಭದ ತುತ್ತಾಗಿದ್ದಾರೆ. ಆಸೀಸ್ 9 ವಿಕೆಟ್‌ಗಳ ಜಯ ಸಾಧಿಸಿ “ಬಿ’ ವಿಭಾಗದ ಅಗ್ರಸ್ಥಾನಿಯಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಯರ್‌ಲ್ಯಾಂಡ್ ತೀರಾ ನಿಧಾನ ಗತಿಯಲ್ಲಿ ಆಡಿ 6 ವಿಕೆಟಿಗೆ ಕೇವಲ 93 ರನ್ ಗಳಿಸಿತು. ಜವಾಬಿತ್ತ ಆಸ್ಟ್ರೇಲಿಯ 9.1 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 94 ರನ್ ಪೇರಿಸಿತು. ಆರಂಭಿಕ ಆಟಗಾರ್ತಿ ಅಲಿಸ್ಸಾ ಹೀಲಿ 31 ಎಸೆತಗಳಿಂದ ಅಜೇಯ 56 ರನ್ ಮಾಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು (9 ಬೌಂಡರಿ, 1 ಸಿಕ್ಸರ್). ಬೆತ್ ಮೂನಿ 14 ರನ್ನಿಗೆ ಔಟಾದರು.
ಆಸೀಸ್ ಬೌಲಿಂಗ್ ಸರದಿಯಲ್ಲಿ ಎಲಿಸ್ಸಾ ಪೆರ್ರಿ ಅಮೋಘ ನಿಯಂತ್ರಣ ಸಾಧಿಸಿ 12 ರನ್ನಿಗೆ 2 ವಿಕೆಟ್ ಕಿತ್ತರು. 24 ರನ್ ಮಾಡಿದ ಕೆ.ಜೆ. ಗಾರ್ತ್ ಅಯರ್‌ಲ್ಯಾಂಡ್ ಸರದಿಯ ಟಾಪ್ ಸ್ಕೋರರ್ (26 ಎಸೆತ, 2 ಬೌಂಡರಿ).
ಸಂಕ್ಷಿಪ್ತ ಸ್ಕೋರ್: ಅಯರ್‌ಲ್ಯಾಂಡ್-6 ವಿಕೆಟಿಗೆ 93 (ಗಾರ್ತ್ 24, ಶಿಲ್ಲಿಂಗ್ಟನ್ 19, ಡೆಲಾನಿ 14, ಪೆರ್ರಿ 12ಕ್ಕೆ 2, ಗಾಡ್ನ್ìರ್ 5ಕ್ಕೆ 1). ಆಸ್ಟ್ರೇಲಿಯ-9.1 ಓವರ್‌ಗಳಲ್ಲಿ ಒಂದು ವಿಕೆಟಿಗೆ 94 (ಹೀಲಿ ಔಟಾಗದೆ 56, ಮೂನಿ 14, ಇತರ 15). ಪಂದ್ಯಶ್ರೇಷ್ಠ: ಅಲಿಸ್ಸಾ ಹೀಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
MUST WATCH
ಹೊಸ ಸೇರ್ಪಡೆ
Kasaragod: ಅಪರಾಧ ಸುದ್ದಿಗಳು
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.