T20 World Cup ಕ್ರಿಕೆಟ್-2024; ಅಮೆರಿಕದ ತಾಣಗಳು ಅಂತಿಮ
ನ್ಯೂಯಾರ್ಕ್, ಡಲ್ಲಾಸ್, ಫ್ಲೋರಿಡಾದಲ್ಲಿ ಚುಟುಕು ಕ್ರಿಕೆಟ್ ಸಮರ
Team Udayavani, Sep 21, 2023, 12:23 AM IST
ದುಬಾೖ: ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಅಮೆರಿಕದಲ್ಲಿ ನಡೆಯಲಿದೆ. ಇಲ್ಲಿನ 3 ತಾಣಗಳಲ್ಲಿ ಪಂದ್ಯಗಳನ್ನು ಆಡಲಾಗುವುದು ಎಂಬುದಾಗಿ ಐಸಿಸಿ ಪ್ರಕಟಿಸಿದೆ. ಇವುಗಳೆಂದರೆ ನ್ಯೂಯಾರ್ಕ್, ಡಲ್ಲಾಸ್ ಮತ್ತು ಫ್ಲೋರಿಡಾ.
ವೆಸ್ಟ್ ಇಂಡೀಸ್‌ನ ಪ್ರಧಾನ ಆತಿಥ್ಯದಲ್ಲಿ ಆಡಲಾಗುವ 2024ರ ಕೂಟವನ್ನು ನೆರೆಯ ಅಮೆ ರಿಕಕ್ಕೂ ವಿಸ್ತರಿಸುವುದು ಐಸಿಸಿಯ ಮಹತ್ವಾಕಾಂಕ್ಷೆಯ ಯೋಜನೆ ಯಾಗಿತ್ತು. 2021ರಲ್ಲೇ ಅಮೆರಿಕ ವನ್ನು ಸಹ ಆತಿಥೇಯ ರಾಷ್ಟ್ರವನ್ನಾಗಿ ಐಸಿಸಿ ಆಯ್ಕೆ ಮಾಡಿತ್ತು. ಬುಧವಾರ ಇಲ್ಲಿನ ತಾಣಗಳನ್ನು ಘೋಷಿಸಿತು. ಫ್ಲೋರಿಡಾದ ಬ್ರೋವಾರ್ಡ್ ಕೌಂಟಿ, ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರಿ ಮತ್ತು ನ್ಯೂಯಾರ್ಕ್‌ನ ಐಸೆನ್ ಹೋವರ್ ಪಾರ್ಕ್ ನಲ್ಲಿ ಪಂದ್ಯ ಗಳನ್ನು ಆಯೋಜಿಸ ಲಾಗು ವುದು ಎಂದು ಐಸಿಸಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆಫ್ ಅಲಡೈಸ್ ತಿಳಿಸಿದರು.
“ಅಮೆರಿಕದ 3 ಕೇಂದ್ರಗಳಲ್ಲಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ. ಈ ಪ್ರತಿಷ್ಠಿತ ಪಂದ್ಯಾವಳಿಯ ಆಯೋ ಜನೆಗೆ ಅಮೆರಿಕದಲ್ಲಿ ಬಹಳಷ್ಟು ತಾಣ ಗವೆ. ದೇಶವಾಸಿಗಳ ಉತ್ಸಾಹವೂ ದೊಡ್ಡ ಮಟ್ಟದಲ್ಲಿದೆ. ಮೂಲ ಸೌಕರ್ಯಗಳನ್ನು ಪರಿ ಗಣಿಸಿ ಮೂರು ತಾಣಗಳನ್ನು ಆಯ್ಕೆ ಮಾಡಿದ್ದೇವೆ. ಇವುಗಳೆಂದರೆ ನ್ಯೂಯಾರ್ಕ್, ಡಲ್ಲಾಸ್ ಮತ್ತು ಫ್ಲೋರಿಡಾ’ ಎಂಬುದಾಗಿ ಅಲಡೈìಸ್ ತಿಳಿಸಿದರು.
2024ರ ಜೂನ್ 4ರಂದು ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಾವಳಿ ಜೂ. 30ರಂದು ಕೊನೆ ಗೊಳ್ಳಲಿದೆ. ಮೂಲವೊಂದರ ಪ್ರಕಾರ ಭಾರತ-ಪಾಕಿಸ್ಥಾನ ನಡು ವಿನ ಪಂದ್ಯವೂ ಅಮೆರಿಕದಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.