T20 ವಿಶ್ವಕಪ್: ಮೇ 25ರಂದು ಭಾರತದ ಬಹುತೇಕ ಆಟಗಾರರ ಮೊದಲ ತಂಡ ನ್ಯೂಯಾರ್ಕ್ಗೆ
Team Udayavani, May 19, 2024, 6:40 AM IST
ಹೊಸದಿಲ್ಲಿ: ಪ್ರತಿಷ್ಠಿತ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತದ ಬಹುತೇಕ ಆಟಗಾರರ ಮೊದಲ ತಂಡ ಮೇ 25ರಂದು ನ್ಯೂಯಾರ್ಕ್ಗೆ ವಿಮಾನ ಏರಲಿದೆ. ತಂಡದ ಉಳಿದ ಸದಸ್ಯರು ಮೇ 26ರ ಐಪಿಎಲ್ ಫೈನಲ್ ಬಳಿಕ ಪ್ರಯಾಣಿಸಲಿದ್ದಾರೆ.
ಈ ಮೊದಲು ವರದಿಯಾದಂತೆ ಐಪಿಎಲ್ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾದ ತಂಡಗಳ ವಿಶ್ವಕಪ್ ಆಟಗಾರರು ಮೇ 21ರಂದು, ಅಂದರೆ ಕೊನೆಯ ಲೀಗ್ ಪಂದ್ಯ ಮುಗಿದು 2 ದಿನಗಳ ಬಳಿಕ ನ್ಯೂಯಾರ್ಕ್ಗೆ ಪ್ರಯಾಣಿಸಬೇಕಿತ್ತು. ಆದರೆ ಭಾರತ ಏಕೈಕ ಅಭ್ಯಾಸ ಪಂದ್ಯವನ್ನು ಆಡುವ ಕಾರಣ ಈ ಪಯಣವನ್ನು ವಿಳಂಬಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಬಾಂಗ್ಲಾದೇಶ ವಿರುದ್ಧದ ಈ ಅಭ್ಯಾಸ ಪಂದ್ಯವನ್ನು ಜೂನ್ ಒಂದರಂದು ಆಡಲಾಗುವುದು.
“ನಾಯಕ ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮೊದ ಲಾದ ಆಟಗಾರರು ಹಾಗೂ ಸಹಾಯಕ ಸಿಬಂದಿ ಮೇ 25ರ ಮೊದಲ ಬ್ಯಾಚ್ನಲ್ಲಿರುತ್ತಾರೆ’ ಎಂದು ಬಿಸಿಸಿಐ ತಿಳಿಸಿದೆ.
ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜ, ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್ ಅವರೆಲ್ಲ ಎರಡನೇ ಬ್ಯಾಚ್ನಲ್ಲಿರುತ್ತಾರೆ. ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಜೂ. 5ರಂದು ಐರ್ಲೆಂಡ್ ವಿರುದ್ಧ ನ್ಯೂಯಾರ್ಕ್ನಲ್ಲಿ ಆಡಲಿದೆ. ಜೂನ್ 9ರಂದು ಪಾಕಿಸ್ಥಾನವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.