T20 World Cup ಉದ್ಘಾಟನೆ: ಇಂದು ಭಾರತ-ಬಾಂಗ್ಲಾ ಅಭ್ಯಾಸದ ಬಳಿಕ ವೈಭವ
ಎಂಟೂ ವಿಶ್ವಕಪ್ ಆಡಿದ ದಾಖಲೆ ಇಬ್ಬರದ್ದು...
Team Udayavani, Jun 1, 2024, 6:56 AM IST
ನ್ಯೂಯಾರ್ಕ್: ಇಷ್ಟು ಕಾಲ ಐಪಿಎಲ್ ಜೋಶ್‌ನಲ್ಲಿದ್ದ ಭಾರತದ ಕ್ರಿಕೆಟಿಗರೀಗ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಹೊಂದಿಕೊಳ್ಳಬೇಕಿದೆ. ಎರಡೂ ಚುಟುಕು ಪಂದ್ಯಾವಳಿಗಳೇ ಆದರೂ ವಿಶ್ವಕಪ್ ಎನ್ನುವುದು “ಡಿಫರೆಂಟ್ ಬಾಲ್ ಗೇಮ್’. ಇದಕ್ಕೆ ಪೂರ್ವಭಾವಿಯಾಗಿ ಟೀಮ್ ಇಂಡಿಯಾ ಶನಿವಾರ ನ್ಯೂಯಾರ್ಕ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ.
ನ್ಯೂಯಾರ್ಕ್‌ನಲ್ಲಿ ನಡೆಯುವ ಈ ಮುಖಾಮುಖೀ ಹಗಲು ಪಂದ್ಯವಾಗಿದೆ. ಆದರೆ ಭಾರತೀಯ ಕಾಲಮಾನದಂತೆ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಇದು ಕೊನೆಯ ವಿಶ್ವಕಪ್ ಅಭ್ಯಾಸ ಪಂದ್ಯ.
ಶನಿವಾರ 9ನೇ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಆರಂಭದ ದಿನವೂ ಹೌದು. ಡಲ್ಲಾಸ್‌ನಲ್ಲಿ ನಡೆಯುವ “ಎ’ ವಿಭಾಗದ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಡಾ ಸೆಣಸಲಿವೆ. ಭಾರತೀಯ ಕಾಲಮಾನದಂತೆ ಈ ಪಂದ್ಯದ ಆರಂಭದ ಸಮಯ ರವಿವಾರ ಬೆಳಗ್ಗೆ 6 ಗಂಟೆ.
ಎಲ್ಲರೂ ಐಪಿಎಲ್ ಆಟಗಾರರೇ
ಭಾರತದ ಎಲ್ಲ 15 ಆಟಗಾರರೂ ಐಪಿಎಲ್‌ನಲ್ಲಿ ಆಡಿದವರೇ ಆಗಿದ್ದಾರೆ. ಆದರೆ ಚಾಂಪಿಯನ್ ಕೆಕೆಆರ್, ರನ್ನರ್ ಅಪ್ ಹೈದರಾಬಾದ್ ತಂಡದ ಯಾವುದೇ ಆಟಗಾರರಿಲ್ಲ. ಸೋತು ಸುಣ್ಣವಾದ ಮುಂಬೈ ಇಂಡಿಯನ್ಸ್‌ನ ಪ್ರಮುಖ ನಾಲ್ವರು ಕ್ರಿಕೆಟಿಗರಿದ್ದಾರೆ.
ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಏರಿಸಿಕೊಂಡ ವಿರಾಟ್ ಕೊಹ್ಲಿ ನ್ಯೂಯಾರ್ಕ್ ತಲುಪಿದ್ದಾರಷ್ಟೇ. ಇವರು ಅಭ್ಯಾಸ ಪಂದ್ಯದಲ್ಲಿ ಆಡುವುದು ಇನ್ನೂ ಖಾತ್ರಿಯಾಗಿಲ್ಲ.
ಉಳಿದಂತೆ ತಂಡದ ಎಲ್ಲ ಆಟ ಗಾರರೂ ಅಮೆರಿಕದ ವಾತಾವರಣಕ್ಕೆ ಹೊಂದಿಕೊಂಡು ತಮ್ಮ ಲಯ ಹಾಗೂ ಫಾರ್ಮ್ ಸಾಬೀತುಪಡಿಸಬೇಕಾದ ಅಗತ್ಯವಿದೆ. ಕೊಹ್ಲಿ ಆಡದೇ ಹೋದರೆ ರೋಹಿತ್ ಶರ್ಮ ಜತೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಇಳಿಯುವುದು ಖಚಿತ. ಬಳಿಕ ಸೂರ್ಯಕುಮಾರ್, ದುಬೆ, ಪಂತ್, ಪಾಂಡ್ಯ, ಜಡೇಜ ಅವರಿಂದ ಬ್ಯಾಟಿಂಗ್ ಸರದಿ ಬೆಳೆಯಬೇಕಿದೆ. ಲೀಗ್ ಪಂದ್ಯಗಳ ವೇಳೆ ಕೊಹ್ಲಿ ಮರಳುವುದರಿಂದ ಜೈಸ್ವಾಲ್ ಅವರನ್ನು ಎಲ್ಲಿ ಆಡಿಸುವುದು ಎಂಬ ಪ್ರಶ್ನೆ ಇದೆ. ಒಂದು ವೇಳೆ ಅಭ್ಯಾಸ ಪಂದ್ಯದಲ್ಲಿ ಜೈಸ್ವಾಲ್ ಮಿಂಚಿದರೆ ಅವರನ್ನು ಲೀಗ್‌ನಲ್ಲಿ ಆಡಿಸಲೇಬೇಕಾಗುತ್ತದೆ.
ವೇಗಿಗಳಿಗೆ ಸವಾಲು
ಬೌಲಿಂಗ್ ವಿಭಾಗದಲ್ಲಿ ಬುಮ್ರಾಗೆ ಜತೆ ನೀಡಲಿರುವ ಸಿರಾಜ್, ಅರ್ಷದೀಪ್ ಐಪಿಎಲ್‌ನಲ್ಲಿ ಮಂಕಾ ಗಿದ್ದರು. ಆದರೆ ಇಲ್ಲಿನ ಪಿಚ್‌ಗಳು ಬೌಲರ್‌ಗಳಿಗೆ ಹೆಚ್ಚಿನ ಸಹಾಯ ನೀಡಲಿವೆ. ಹೀಗಾಗಿ ಸ್ವಿಂಗ್, ಯಾರ್ಕರ್, ಸ್ಲೋವರ್ ಡೆಲಿವರಿ, ಲೆಗ್ ಮತ್ತು ಆಫ್ ಕಟರ್‌ಗಳಿಂದ ಹೆಚ್ಚಿನ ಲಾಭವಾಗಲಿದೆ. ನಮ್ಮ ವೇಗಿಗಳಿಗೆ ಇದೊಂದು ಸವಾಲು.
ಬಾಂಗ್ಲಾ ತಂಡ ಅಮೆರಿಕ ವಿರುದ್ಧ ಸರಣಿ ಸೋತಿರಬಹುದು, ಆದರೆ ಬೌಲಿಂಗ್ ವಿಭಾಗ ವೈವಿಧ್ಯಮಯ ಎಂಬುದರಲ್ಲಿ ಎರಡು ಮಾತಿಲ್ಲ. ಶಕಿಬ್, ಮಹೆದಿ ಹಸನ್, ಕಟರ್ ಮಾಸ್ಟರ್ ಮುಸ್ತಫಿಜುರ್ ಎಸೆತಗಳನ್ನು ನಿಭಾಯಿಸುವುದರಲ್ಲಿ ನಮ್ಮವರ ಬ್ಯಾಟಿಂಗ್ ಯಶಸ್ಸು ಅಡಗಿದೆ.
ತಂಡಗಳು
ಭಾರತ:
ರೋಹಿತ್ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ:
ನಜ್ಮುಲ್ ಹುಸೇನ್ (ನಾಯಕ), ತಸ್ಕಿನ್ ಅಹ್ಮದ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ತಾಂಜಿದ್ ಹಸನ್ ತಮೀಮ್, ಶಕಿಬ್ ಅಲ್ ಹಸನ್, ತೌಹಿದ್ ಹೃದಯ್, ಮಹ್ಮದುಲ್ಲ ರಿಯಾದ್, ಜಾಕರ್ ಅಲಿ ಅನಿಕ್, ತನ್ವೀರ್
ಇಸ್ಲಾಮ್, ಮಹೆದಿ ಹಸನ್, ರಿಷಾದ್ ಹುಸೇನ್, ಮುಸ್ತಫಿಜುರ್ ರೆಹಮಾನ್, ಶೊರೀಫುಲ್ ಇಸ್ಲಾಮ್, ತಾಂಜಿಮ್ ಹಸನ್.
ಆರಂಭ: ರಾತ್ರಿ 8.00 · ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಎಂಟೂ ವಿಶ್ವಕಪ್ ಆಡಿದ ದಾಖಲೆ
ಒಂಬತ್ತನೇ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಕ್ಷಣಗಣನೆ ಮೊದಲ್ಗೊಂಡಿದೆ. ಈ ಸಂದರ್ಭದಲ್ಲಿ ಹಿಂದಿನ ಎಲ್ಲ 8 ವಿಶ್ವ ಕಪ್‌ಗ್ಳಲ್ಲಿ ಆಡಿದ ಕ್ರಿಕೆಟಿಗರ ಬಗ್ಗೆ ಸಹಜ ವಾಗಿಯೇ ಕುತೂಹಲ ಮೂಡುತ್ತದೆ.
ಇಂಥ ಇಬ್ಬರು ಕ್ರಿಕೆಟಿಗರನ್ನು ಕಾಣ ಬಹುದು. ಇವರೆಂದರೆ ಭಾರತದ ರೋಹಿತ್ ಶರ್ಮ ಮತ್ತು ಬಾಂಗ್ಲಾದೇಶದ ಶಕಿಬ್ ಅಲ್ ಹಸನ್. ಇವರಲ್ಲಿ ರೋಹಿತ್ 9ನೇ ವಿಶ್ವಕಪ್‌ನಲ್ಲಿ ನಾಯಕರಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
ರೋಹಿತ್ ಶರ್ಮ 39 ಪಂದ್ಯಗಳಿಂದ 963 ರನ್ ಮಾಡಿದ್ದಾರೆ. ಇದರಲ್ಲಿ 9 ಅರ್ಧ ಶತಕಗಳಿವೆ. 91 ಫೋರ್, 35 ಸಿಕ್ಸರ್ ಸಿಡಿಸಿದ್ದಾರೆ. ಶಕಿಬ್ 36 ಪಂದ್ಯವಾಡಿದ್ದು, 742 ರನ್ ಹಾಗೂ 47 ವಿಕೆಟ್ ಸಂಪಾದಿಸಿದ್ದಾರೆ.
ಮಿಚೆಲ್ ಮಾರ್ಷ್ ಬ್ಯಾಟಿಂಗ್ ಮಾತ್ರ
ಬಾರ್ಬ ಡಾಸ್: ಆಸ್ಟ್ರೇಲಿಯ ತಂಡದ ನಾಯಕ ಮಿಚೆಲ್ ಮಾರ್ಷ್ ಒಮಾನ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂಬುದಾಗಿ ಕೋಚ್ ಆ್ಯಂಡ್ರೂé ಮೆಕ್‌ಡೊನಾಲ್ಡ್ ಹೇಳಿದ್ದಾರೆ. ಐಪಿಎಲ್ ವೇಳೆ ಸ್ನಾಯು ಸೆಳೆತಕ್ಕೊಳಗಾದ ಕಾರಣ ಅವರು ಬ್ಯಾಟಿಂಗ್ ಮಾತ್ರ ನಡೆಸಲಿದ್ದಾರೆ ಎಂದರು. ಈ ಪಂದ್ಯ ಜೂ. 6ರಂದು ನಡೆಯಲಿದೆ.
ಮಿಚೆಲ್ ಮಾರ್ಷ್ ನಮೀಬಿಯಾ ಮತ್ತು ವೆಸ್ಟ್ ಇಂಡೀಸ್ ಎದುರಿನ ಎರಡೂ ಅಭ್ಯಾಸ ಪಂದ್ಯಗಳನ್ನಾಡಿದ್ದರು. ಕೇವಲ ಬ್ಯಾಟಿಂಗ್ ಮಾತ್ರ ನಡೆಸಿದ್ದರು. ಗಳಿಸಿದ್ದು 18 ಹಾಗೂ 4 ರನ್ ಮಾತ್ರ.
ಪೇಸ್ ಬೌಲಿಂಗ್ ಆಲ್‌ರೌಂಡರ್ ಆಗಿರುವ ಮಿಚೆಲ್ ಮಾರ್ಷ್ ಈ ಎರಡೂ ಪಂದ್ಯಗಳಲ್ಲಿ ಪೂರ್ಣಾವಧಿ ಫೀಲ್ಡಿಂಗ್ ನಡೆಸಿರಲಿಲ್ಲ. ಇವರು ಅಂಗಳದಿಂದ ಹೊರನಡೆದ ವೇಳೆ ಮ್ಯಾಥ್ಯೂ ವೇಡ್ ನಾಯಕತ್ವ ನಿಭಾಯಿಸಿದ್ದರು.
ಮಿಚೆಲ್ ಮಾರ್ಷ್ ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಒಂದೇ ಪಂದ್ಯವಾಡಿದ್ದರು. ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ಎಪ್ರಿಲ್ ಕೊನೆಯ ವಾರದಲ್ಲಿ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.