T20 World Cup: ಭಾರತ-ಪಾಕ್ ನ್ಯೂಯಾರ್ಕ್ ಫೈಟ್
Team Udayavani, Jun 9, 2024, 7:30 AM IST
ನ್ಯೂಯಾರ್ಕ್: ಸಾಂಪ್ರ ದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 8ನೇ ಸಲ ಮುಖಾಮುಖೀಯಾಗಲಿವೆ. ರವಿವಾರ ನ್ಯೂಯಾರ್ಕ್ ಅಂಗಳದಲ್ಲಿ ಈ ಹೈ ವೋಲ್ಟೆàಜ್ ಪಂದ್ಯ ಸಾಗಲಿದ್ದು, ಈಗಾಗಲೇ ಎರಡೂ ದೇಶಗಳ ಅಭಿಮಾನಿಗಳು ರೋಚಕ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಐರ್ಲೆಂಡ್ ವಿರುದ್ಧ ಮೊದಲ ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ ತುಂಬು ಆತ್ಮವಿಶ್ವಾಸದಲ್ಲಿದೆ. ಆದರೆ ಪಾಕ್ ಸ್ಥಿತಿ ಇದಕ್ಕೆ ತದ್ವಿರುದ್ಧ. ಆತಿಥೇಯ ಅಮೆರಿಕ ವಿರುದ್ಧ ಸೂಪರ್ ಓವರ್‌ನಲ್ಲಿ ಮುಗ್ಗರಿಸಿ ಮೈ ತುಂಬ ಗಾಯ ಮಾಡಿಕೊಂಡಿದೆ. ಈ ಅವಮಾನಕರ ಸೋಲಿಗೆ ತವರಿನ ಮಾಜಿಗಳೇ ಬಾಬರ್ ಪಡೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದು ಕೊಂಡಿದ್ದಾರೆ. ಇದು ಪಾಕ್ ತಂಡಕ್ಕೆ ಬಿದ್ದಿರುವ ದೊಡ್ಡ ಹೊಡೆತ.
ವಿಶ್ವಕಪ್‌ನಲ್ಲಿ ಭಾರತದೆದುರು ಸದಾ ಮುಗ್ಗರಿಸುವುದನ್ನೇ ಕಾಯಕವಾಗಿಸಿ ಕೊಂಡಿರುವ ಪಾಕಿಸ್ಥಾನ, ಈ ಬಾರಿ ಇನ್ನಷ್ಟು ಒತ್ತಡದಲ್ಲಿ ಆಡಬೇಕಿದೆ. ಕಾರಣ, ರೋಹಿತ್ ಪಡೆಯೆದರು ಎಡವಿದರೆ ಪಾಕಿಸ್ಥಾನ ಕೂಟದಿಂದಲೇ ಹೊರಬೀಳುವ ಸಾಧ್ಯತೆ ಇದೆ. ಇನ್ನೊಂ ದೆಡೆ ಅಮೆರಿಕ ಒಂದೊಂದೇ ಮೆಟ್ಟಿಲು ಮೇಲೇರುತ್ತಿರುವುದರಿಂದ ಪಾಕ್ ಹಾದಿಗೆ ಮುಳ್ಳಾಗಿ ಪರಿಣಮಿಸಿದೆ.
ನಿಧಾನ ಗತಿಯ ಟ್ರ್ಯಾಕ್:
ಭಾರತ-ಪಾಕಿಸ್ಥಾನ ಪಂದ್ಯವೆಂದರೆ ಸದಾ ಜೋಶ್ ತುಂಬಿರುತ್ತದೆ. ಆದರೆ ರವಿವಾರದ ಪಂದ್ಯ ನ್ಯೂಯಾರ್ಕ್‌ನ ನಿಧಾನ ಗತಿಯ ಟ್ರ್ಯಾಕ್‌ನಲ್ಲಿ ನಡೆಯುವುದರಿಂದ ಇಲ್ಲಿ ರನ್ ಪ್ರವಾಹ ಹರಿದು ಬರುವ ಸಾಧ್ಯತೆ ತೀರಾ ಕಡಿಮೆ. ಈವರೆಗೆ ಇಲ್ಲಿ ಆಡಲಾದ 3 ಪಂದ್ಯಗಳ 6 ಇನ್ನಿಂಗ್ಸ್
ಗಳಲ್ಲಿ ತಂಡಗಳು 100 ರನ್ ಗಡಿ ದಾಟಿದ್ದು 2 ಸಲ ಮಾತ್ರ. ಕಳೆದ ಎಪ್ರಿಲ್‌ನಲ್ಲಿ “ಅಡಿಲೇಡ್ ಓವಲ್’ನ ಗ್ರೌಂಡ್ಸ್‌ಮ್ಯಾನ್ ಡೇಮಿಯನ್ ಹ್ಯೂಗ್ ಅವರ ಉಸ್ತುವಾರಿಯಲ್ಲಿ ಇಲ್ಲಿನ ಟ್ರ್ಯಾಕ್ ನಿರ್ಮಾಣಗೊಂಡರೂ ಇದು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಅನಿರೀಕ್ಷಿತ ಬೌನ್ಸ್ ಬ್ಯಾಟರ್‌ಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಭಾರತ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಇದೇ ಅಂಗಳದಲ್ಲಿ ಆಡಿತ್ತು. ಐರಿಷ್ ಪಡೆ 16 ಓವರ್‌ಗಳಲ್ಲಿ 96ಕ್ಕೆ ಕುಸಿದ ಬಳಿಕ, 12.2 ಓವರ್‌ಗಳಲ್ಲಿ ರೋಹಿತ್ ಪಡೆ ಗುರಿ ತಲುಪಿತ್ತು. ಬಾಂಗ್ಲಾ ಎದುರಿನ ಅಭ್ಯಾಸ ಪಂದ್ಯವನ್ನೂ ಭಾರತ ಇಲ್ಲೇ ಆಡಿತ್ತು. ಆದರೆ ಪಾಕಿಸ್ಥಾನಕ್ಕೆ ಇದು ನ್ಯೂಯಾರ್ಕ್‌ನಲ್ಲಿ ಮೊದಲ ಪಂದ್ಯ. ಗುರುವಾರ ರಾತ್ರಿಯಷ್ಟೇ ಬಾಬರ್ ಪಡೆ ಇಲ್ಲಿಗೆ ಆಗಮಿಸಿತ್ತು.
ಕುಲದೀಪ್ ಸೇರ್ಪಡೆ?:
ಭಾರತ ಈ ಪಂದ್ಯಕ್ಕಾಗಿ ಒಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವ ಯೋಜನೆಯಲ್ಲಿದೆ. ಆಗ ಅಕ್ಷರ್ ಪಟೇಲ್ ಅಥವಾ ರವೀಂದ್ರ ಜಡೇಜ ಹೊರಗುಳಿಯಬೇಕಾದೀತು.
ಉಳಿದಂತೆ ಬ್ಯಾಟಿಂಗ್ ಸರದಿ ಯಲ್ಲಿ ಯಾವುದೇ ಬದಲಾವಣೆ ಸಂಭವವಿಲ್ಲ. ರೋಹಿತ್-ಕೊಹ್ಲಿ ಇನ್ನಿಂಗ್ಸ್ ಆರಂಭಿ ಸುವು ದರಿಂದ ಜೈಸ್ವಾಲ್‌ಗೆ ಅವಕಾಶ ಸಿಗದು. ಇದರಿಂದ ಲಾಭವಾದದ್ದು ಶಿವಂ ದುಬೆ ಅವರಿಗೆ.
ಪಾಕ್ ಸಾಲು ಸಾಲು ವೈಫಲ್ಯ :
ಎಲ್ಲ ವಿಭಾಗಗಳಲ್ಲೂ ಸುಧಾರಣೆ ಕಂಡರಷ್ಟೇ ಪಾಕಿಸ್ಥಾನಕ್ಕಿಲ್ಲಿ ಉಳಿಗಾಲ. ಅಮೆರಿಕ ವಿರುದ್ಧ ಪಾಕಿಸ್ಥಾನದ ಬೌಲಿಂಗ್ ಹಾಗೂ ಫೀಲ್ಡಿಂಗ್ ತೀರಾ ಕಳಪೆಯಾಗಿತ್ತು. ಆಮಿರ್ ಎಸೆದ ಸೂಪರ್ ಓವರ್‌ನಲ್ಲಿ 7 ವೈಡ್‌ಗಳಿದ್ದವು! ಕ್ಷೇತ್ರರಕ್ಷಣೆಯಲ್ಲಿ ಪಾಕ್ ಆಟಗಾರರು ತೀರಾ ಸೋಮಾರಿಗಳಂತೆ ಕಂಡಿದ್ದರು.
ಬಿಗಿ ಭದ್ರತೆಯಲ್ಲಿ ಪಂದ್ಯ:
ಐಸಿಸಿ ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಈ ಪಂದ್ಯ ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆಯಲಿದೆ. ನಾಸಾವು ಕೌಂಟಿ ಪೊಲೀಸ್ ಮಹಾನಿರ್ದೇಶಕ ಪ್ಯಾಟ್ರಿಕ್ ರೈಡರ್ ಈ ಕುರಿತು ಹೇಳಿಕೆ ನೀಡಿದ್ದು, “ನಮಗೆ ಕ್ರಿಕೆಟ್ ಹೊಸತೇ ಆಗಿರಬಹುದು. ಆದರೆ ಭದ್ರತೆಯ ಯೋಜನೆ ಹೊಸತಲ್ಲ. ಅಂದು ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಒದಗಿಸಿದ ಭದ್ರತೆಗಿಂತಲೂ ಹೆಚ್ಚಿನ ಭದ್ರತೆ ಈ ಪಂದ್ಯಕ್ಕೆ ಇರಲಿದೆ’ ಎಂದಿದ್ದಾರೆ.
ಸಚಿನ್ ಆಗಮನ:
ಈ ಹೈ ವೋಲ್ಟೆàಜ್ ಪಂದ್ಯ ವೀಕ್ಷಿಸಲು ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡುಲ್ಕರ್ ಈಗಾಗಲೇ ನ್ಯೂಯಾರ್ಕ್‌ಗೆ
ಆಗಮಿಸಿದ್ದಾರೆ. ಈ ಪಂದ್ಯವನ್ನು ಕಣ್ತುಂಬಿಸಿ ಕೊಳ್ಳುವುದರ ಜತೆಗೆ ಭಾರತ ತಂಡವನ್ನು ಹುರಿದುಂಬಿಸಲಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ:
ವರ್ಷ ಸ್ಥಳ ಫಲಿತಾಂಶ
2007 ಡರ್ಬನ್ ಭಾರತಕ್ಕೆ “ಬಾಲೌಟ್’ ಜಯ
2007 ಜೊಹಾನ್ಸ್‌ಬರ್ಗ್ ಭಾರತಕ್ಕೆ 5 ರನ್ ಜಯ
2012 ಕೊಲಂಬೊ ಭಾರತಕ್ಕೆ 8 ವಿಕೆಟ್ ಜಯ
2014 ಮಿರ್ಪುರ್ ಭಾರತಕ್ಕೆ 7 ವಿಕೆಟ್ ಜಯ
2016 ಕೋಲ್ಕತಾ ಭಾರತಕ್ಕೆ 6 ವಿಕೆಟ್ ಜಯ
2021 ದುಬಾೖ ಪಾಕಿಸ್ಥಾನಕ್ಕೆ 10 ವಿಕೆಟ್ ಜಯ
2022 ಮೆಲ್ಬರ್ನ್ ಭಾರತಕ್ಕೆ 4 ವಿಕೆಟ್ ಜಯ
ನ್ಯೂಯಾರ್ಕ್ ಪಿಚ್ ವಿರುದ್ಧ ದೂರು
ನ್ಯೂಯಾರ್ಕ್ ಪಿಚ್ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಗೆ ಅನಧಿಕೃತ ದೂರು ನೀಡಿದೆ ಎಂದು ವರದಿಯಾಗಿದೆ. ಅಪಾಯಕಾರಿ ಪಿಚ್‌ನಲ್ಲಿ ತಂಡದ ನಾಯಕ ರೋಹಿತ್ ಶರ್ಮ ಗಾಯಕ್ಕೀಡಾದ ಬಳಿಕ, ಈ ಬೆಳವಣಿಗೆ ಸಂಭವಿಸಿದೆ. ಪಾಕಿಸ್ಥಾನ ವಿರುದ್ಧದ ಪಂದ್ಯಕ್ಕಾಗಿ ಅಭ್ಯಾಸ ನಡೆಸುವಾಗ ರೋಹಿತ್ ಅವರ ಹೆಬ್ಬೆರಳಿಗೆ ಚೆಂಡು ಬಡಿದಿದೆ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲೂ ರೋಹಿತ್ ಭುಜಕ್ಕೆ ಚೆಂಡು ಬಡಿದಿತ್ತು. ಇಲ್ಲಿನ ಡ್ರಾಪ್ ಇನ್ ಪಿಚ್‌ನಲ್ಲಿ ಬಿರುಕುಗಳಿವೆ. ಇಲ್ಲಿ ಬೌನ್ಸ್ ಕೂಡ ಜಾಸ್ತಿ. ಇದೇ ಕಾರಣಕ್ಕೆ ಈ ಪಿಚ್ ಅನ್ನು ಹಲವಾರು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಇದನ್ನು ಪರಿಶೀಲಿಸುವುದಾಗಿ ಐಸಿಸಿ ಭರವಸೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.