ಟಿ20 ವಿಶ್ವಕಪ್‌: ಅಫ್ಘಾನಿಸ್ಥಾನ ವಿರುದ್ಧ ಅಬ್ಬರಿಸಿದ ಭಾರತ


Team Udayavani, Nov 3, 2021, 11:26 PM IST

ಟಿ20 ವಿಶ್ವಕಪ್‌: ಅಫ್ಘಾನಿಸ್ಥಾನ ವಿರುದ್ಧ ಅಬ್ಬರಿಸಿದ ಭಾರತ

ಅಬುಧಾಬಿ: ರೋಹಿತ್‌ ಶರ್ಮ-ಕೆ.ಎಲ್‌. ರಾಹುಲ್‌ ಅವರ ದಾಖಲೆ ಜತೆಯಾಟದಿಂದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಇದೇ ಮೊದಲ ಸಲ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಭಾರತ, ಅಫ್ಘಾನಿಸ್ಥಾನದೆದುರಿನ ಪಂದ್ಯವನ್ನು 66 ರನ್ನುಗಳಿಂದ ಭರ್ಜರಿಯಾಗಿ ಗೆದ್ದು ಅಂಕದ ಖಾತೆ ತೆರೆದಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 2 ವಿಕೆಟಿಗೆ 210 ರನ್‌ ರಾಶಿ ಹಾಕಿತು. ಇದು ವಿಶ್ವಕಪ್‌ನಲ್ಲಿ ಭಾರತ ಪೇರಿಸಿದ 2ನೇ ಸರ್ವಾಧಿಕ ಗಳಿಕೆ. ಜವಾಬಿತ್ತ ಅಫ್ಘಾನಿಸ್ಥಾನ 7 ವಿಕೆಟಿಗೆ 144 ರನ್‌ ಮಾಡಿ ಶರಣಾಯಿತು. ಈ ದೊಡ್ಡ ಗೆಲುವು ಕೊಹ್ಲಿ ಪಡೆಯನ್ನು ಎಲ್ಲಿಯ ತನಕ ಕೊಂಡೊಯ್ಯುತ್ತದೆ ಎಂಬುದನ್ನು ಕಾದು ನೋಡಬೇಕು.

4 ವರ್ಷಗಳ ಬಳಿಕ ಟಿ20 ಆಡಿದ ಆರ್‌. ಅಶ್ವಿ‌ನ್‌ ಅಮೋಘ ಯಶಸ್ಸು ಸಾಧಿಸಿದರು. 4 ಓವರ್‌ಗಳಲ್ಲಿ ಕೇವಲ 14 ರನ್‌ ನೀಡಿದ ಅವರು 2 ವಿಕೆಟ್‌ ಉರುಳಿಸಿದರು. ಶಮಿ 32ಕ್ಕೆ 3 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು.

140 ರನ್‌ ಜತೆಯಾಟ
ರೋಹಿತ್‌-ರಾಹುಲ್‌ ಮೊದಲ ವಿಕೆಟಿಗೆ 14.4 ಓವರ್‌ಗಳಲ್ಲಿ 140 ರನ್‌ ಪೇರಿಸಿದರು. ಇದು ಟಿ20 ಪಂದ್ಯಗಳಲ್ಲಿ ಭಾರತದ ಮೊದಲ ವಿಕೆಟಿಗೆ ದಾಖಲಾದ ಅತ್ಯಧಿಕ ಮೊತ್ತ. ಇಂಗ್ಲೆಂಡ್‌ ಎದುರಿನ 2007ರ ಡರ್ಬನ್‌ ಪಂದ್ಯದಲ್ಲಿ ಸೆಹವಾಗ್‌-ಗಂಭೀರ್‌ 136 ರನ್‌ ಪೇರಿಸಿದ ದಾಖಲೆ ಪತನಗೊಂಡಿತು. ಕೊನೆಯಲ್ಲಿ ಪಂತ್‌-ಪಾಂಡ್ಯ ಕೂಡ ಬಿರುಸಿನ ಆಟಕ್ಕಿಳಿದರು. ಇವರು ಕೇವಲ 21 ಎಸೆತಗಳಿಂದ 63 ಸೂರೆಗೈದರು.

ಮತ್ತೆ ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತಕ್ಕೆ ರೋಹಿತ್‌-ರಾಹುಲ್‌ ಸ್ಫೋಟಕ ಆರಂಭವಿತ್ತರು. ಓವರಿಗೆ ಹತ್ತರ ಸರಾಸರಿಯಲ್ಲಿ ರನ್‌ ಹರಿದು ಬರತೊಡಗಿತು. ಪವರ್‌ ಪ್ಲೇಯಲ್ಲಿ 53 ರನ್‌ ಒಟ್ಟುಗೂಡಿತು. 10 ಓವರ್‌ ಮುಕ್ತಾಯಕ್ಕೆ ಮೊತ್ತ 85ಕ್ಕೆ ಏರಿತು.

ರೋಹಿತ್‌-ರಾಹುಲ್‌ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸತೊಡಗಿದರು. ಅಬುಧಾಬಿ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯಾಯಿತು. 11.4 ಓವರ್‌ಗಳಲ್ಲಿ ಶತಕದ ಜತೆಯಾಟ ಪೂರ್ತಿಗೊಂಡಿತು. ಇದು ರೋಹಿತ್‌-ರಾಹುಲ್‌ ಜೋಡಿಯ 4ನೇ ಸೆಂಚುರಿ ಪಾಟ್ನರ್‌ಶಿಪ್‌. ಹಾಗೆಯೇ ರೋಹಿತ್‌ ಟಿ20ಯಲ್ಲಿ ಸರ್ವಾಧಿಕ 12 ಶತಕಗಳ ಜತೆಯಾಟಗಳಲ್ಲಿ ಭಾಗಿಯಾಗಿ ಬಾಬರ್‌ ಆಜಂ ಜತೆ ಕಾಣಿಸಿಕೊಂಡರು.

ಇದನ್ನೂ ಓದಿ:ಟಿ20 ವಿಶ್ವಕಪ್‌: ಸೆಮಿಫೈನಲ್‌ನತ್ತ ಕಿವೀಸ್‌ ದಾಪುಗಾಲು

ಮೊದಲ ಅರ್ಧ ಶತಕ ರೋಹಿತ್‌ ಅವರಿಂದ ದಾಖಲಾಯಿತು. ಇದು 2014ರ ಬಳಿಕ ರೋಹಿತ್‌ ಬಾರಿಸಿದ ಮೊದಲ ಟಿ20 ಫಿಫ್ಟಿ. ಅಂದು ಬಾಂಗ್ಲಾದೇಶ ವಿರುದ್ಧ ಮಿರ್ಪುರ್‌ನಲ್ಲಿ 56 ರನ್‌ ಹೊಡೆದಿದ್ದರು. ಅಫ್ಘಾನಿಸ್ಥಾನದ ವಿಶ್ವ ದರ್ಜೆಯ ಸ್ಪಿನ್ನರ್‌ ರಶೀದ್‌ ಖಾನ್‌ ಎಸೆತಗಳೂ ಇವರಿಬ್ಬರ ಆರ್ಭಟದ ಮುಂದೆ ಚಿಂದಿಯಾದವು. ಮುನ್ನುಗ್ಗಿ ಹೋದ ರೋಹಿತ್‌ ಸತತ ಸಿಕ್ಸರ್‌ಗಳ ರುಚಿ ತೋರಿಸಿದರು.

ಕೊನೆಗೂ 15ನೇ ಓವರ್‌ನಲ್ಲಿ ಕರೀಂ ಜನತ್‌ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 47 ಎಸೆತಗಳಿಂದ 74 ರನ್‌ ಬಾರಿಸಿದ ರೋಹಿತ್‌, ನಬಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಈ ವಿಸ್ಫೋಟಕ ಬ್ಯಾಟಿಂಗ್‌ ವೇಳೆ 8 ಫೋರ್‌, 3 ಸಿಕ್ಸರ್‌ ಸಿಡಿಯಲ್ಪಟ್ಟಿತು. ರಾಹುಲ್‌ 49 ಎಸೆತಗಳಿಂದ 69 ರನ್‌ ಕಾಣಿಕೆ ಸಲ್ಲಿಸಿದರು (6 ಬೌಂಡರಿ, 2 ಸಿಕ್ಸರ್‌).

ಪಾಂಡ್ಯ, ಪಂತ್‌ ತಲಾ 13 ಎಸೆತ ಎದುರಿಸಿದರು. ಪಾಂಡ್ಯ 35 (4 ಬೌಂಡರಿ, 2 ಸಿಕ್ಸರ್‌), ಪಂತ್‌ 27 ರನ್‌ (1 ಬೌಂಡರಿ, 3 ಸಿಕ್ಸರ್‌) ಹೊಡೆದರು.

ಸ್ಕೋರ್‌ ಪಟ್ಟಿ
ಭಾರತ
ಕೆ.ಎಲ್‌. ರಾಹುಲ್‌ ಬಿ ಗುಲ್ಬದ್ದಿನ್‌ 69
ರೋಹಿತ್‌ ಶರ್ಮ ಸಿ ನೈಬ್‌ ಬಿ ಕರೀಂ 74
ರಿಷಭ್‌ ಪಂತ್‌ ಔಟಾಗದೆ 27
ಹಾರ್ದಿಕ್‌ ಪಾಂಡ್ಯ ಔಟಾಗದೆ 35
ಇತರ 5
ಒಟ್ಟು (2 ವಿಕೆಟಿಗೆ) 210
ವಿಕೆಟ್‌ ಪತನ:1-140, 2-147.
ಬೌಲಿಂಗ್‌; ಮೊಹಮ್ಮದ್‌ ನಬಿ 1-0-7-0
ಶರಾಫ‌ುದ್ದೀನ್‌ ಅಶ್ರಫ್ 2-0-25-0
ನವೀನ್‌ ಉಲ್‌ ಹಕ್‌ 4-0-59-0
ಹಮೀದ್‌ ಹಸನ್‌ 4-0-34-0
ಗುಲ್ಬದ್ದಿನ್‌ ನೈಬ್‌ 4-0-39-1
ರಶೀದ್‌ ಖಾನ್‌ 4-0-36-0
ಕರೀಂ ಜನತ್‌ 1-0-7-1

ಅಫ್ಘಾನಿಸ್ಥಾನ
ಹಜ್ರತುಲ್ಲ ಬಿ ಠಾಕೂರ್‌ ಬಿ ಬುಮ್ರಾ 13
ಶಾಬಾಜ್‌ ಸಿ ಅಶ್ವಿ‌ನ್‌ ಬಿ ಶಮಿ 0
ರೆಹಮಾತುಲ್ಲ ಸಿ ಹಾರ್ದಿಕ್‌ ಬಿ ಜಡೇಜ 19
ಗುಲ್ಬದಿನ್‌ ನೈಬ್‌ ಎಲ್‌ಬಿಡಬ್ಲ್ಯು ಬಿ ಅಶ್ವಿ‌ನ್‌ 18
ನಜಿಬುಲ್ಲ ಜದ್ರಾನ್‌ ಬಿ ಅಶ್ವಿ‌ನ್‌ 11
ಮೊಮಮ್ಮದ್‌ ನಬಿ ಸಿ ಜಡೇಜ ಬಿ ಶಮಿ 35
ಕರೀಂ ಜನತ್‌ ಔಟಾಗದೆ 42
ರಶೀದ್‌ ಖಾನ್‌ ಸಿ ಹಾರ್ದಿಕ್‌ ಬಿ ಶಮಿ 0
ಸರಾಫ‌ುದ್ದೀನ್‌ ಔಟಾಗದೆ 2
ಇತರ 4
ಒಟ್ಟು (7 ವಿಕೆಟಿಗೆ) 144
ವಿಕೆಟ್‌ ಪತನ:1-13, 2-13, 3-48, 4-59, 5-69, 6-126, 7-127.
ಬೌಲಿಂಗ್‌;ಮೊಹಮ್ಮದ್‌ ಶಮಿ 4-0-32-3
ಜಸ್‌ಪ್ರೀತ್‌ ಬುಮ್ರಾ 4-0-25-1
ಹಾರ್ದಿಕ್‌ ಪಾಂಡ್ಯ 2-0-23-0
ರವೀಂದ್ರ ಜಡೇಜ 3-0-19-1
ಆರ್‌. ಅಶ್ವಿ‌ನ್‌ 4-0-14-2
ಶಾರ್ದೂಲ್ ಠಾಕೂರ್ 3-0-31-0

ಟಾಪ್ ನ್ಯೂಸ್

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

HDK (3)

Siddaramaiah; ಕೊಳ್ಳೆ ಹೊಡೆಯುತ್ತಿದ್ದರೂ ನಿಮ್ಮನ್ನು ಮುಟ್ಟಬಾರದಾ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.