ಟಿ20 ವಿಶ್ವಕಪ್: ಸೂಪರ್-12 ಹಂತಕ್ಕೆ ನಮೀಬಿಯಾ
Team Udayavani, Oct 22, 2021, 11:30 PM IST
ಶಾರ್ಜಾ: ಇದೇ ಮೊದಲ ಸಲ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿದ ನಮೀಬಿಯಾ ಸೂಪರ್-12 ಹಂತಕ್ಕೆ ಜಿಗಿದು ಇತಿಹಾಸ ನಿರ್ಮಿಸಿದೆ.
ಶುಕ್ರವಾರ ನಡೆದ “ಎ’ ವಿಭಾಗದ ನಿರ್ಣಾಯಕ ಪಂದ್ಯದಲ್ಲಿ ಅದು ಐರ್ಲೆಂಡ್‌ಗೆ 8 ವಿಕೆಟ್‌ಗಳ ಆಘಾತವಿಕ್ಕಿತು.
ಅನುಭವಿ ಆಟಗಾರರನ್ನು ಹೊಂದಿದ್ದ ಐರ್ಲೆಂಡ್ ಅಮೋಘ ಆರಂಭದ ಹೊರತಾಗಿಯೂ 8 ವಿಕೆಟಿಗೆ ಕೇವಲ 125 ರನ್ ಮಾಡಿತು. ಜವಾಬಿತ್ತ ನಮೀಬಿಯಾ 18.3 ಓವರ್‌ಗಳಲ್ಲಿ 2 ವಿಕೆಟಿಗೆ 126 ರನ್ ಬಾರಿಸಿತು. ಚೇಸಿಂಗ್ ವೇಳೆ ನಾಯಕ ಗೆರಾರ್ಡ್ ಎರಾಸ್ಮಸ್ ಅಜೇಯ 53 ರನ್ ಹೊಡೆದರು.
ಐರ್ಲೆಂಡಿಗೆ ಪಾಲ್ ಸ್ಟರ್ಲಿಂಗ್ (38) ಮತ್ತು ಕೆವಿನ್ ಒ ಬ್ರಿಯಾನ್ (25) 62 ರನ್ನುಗಳ ಆರಂಭ ಒದಗಿಸಿದ್ದರು. ಬಳಿಕ ನಮೀಬಿಯಾ ಬೌಲರ್ ಮೇಲುಗೈ ಸಾಧಿಸಿದರು. ಜಾನ್ ಫ್ರೈಲಿಂಕ್ 21ಕ್ಕೆ 3, ಡೇವಿಡ್ ವೀಸ್ 22ಕ್ಕೆ 2 ವಿಕೆಟ್ ಕಿತ್ತು ಐರ್ಲೆಂಡ್‌ಗೆ ಕಡಿವಾಣ ಹಾಕಿದರು.
ಇದನ್ನೂ ಓದಿ:ಶೂಟಿಂಗ್ ವೇಳೆ ನಟನ ಗನ್‌ನಿಂದ ಫೈರಿಂಗ್; ಸಿನಿಮಾ ಟೋಗ್ರಾಫರ್ ಸಾವು
ಸ್ಕಾಟ್ಲೆಂಡ್ ಹ್ಯಾಟ್ರಿಕ್ ಜಯ
ದುಬಾೖ: ನಾಯಕ ಕೈಲ್ ಕೋಟ್ಜರ್ (41) ಅವರ ಬಿರುಸಿನ ಬ್ಯಾಟಿಂಗ್ ಮತ್ತು ಸಂಘಟಿತ ಬೌಲಿಂಗ್ ದಾಳಿಯ ಬಲದಿಂದ ಒಮಾನ್‌ಗೆ 8 ವಿಕೆಟ್‌ಗಳಿಂದ ಆಘಾತವಿಕ್ಕಿದ ಸ್ಕಾಟ್ಲೆಂಡ್ ಗೆಲುವಿನ ಹ್ಯಾಟ್ರಿಕ್ ಸಾಧಿಸಿ ಸೂಪರ್-12 ಹಂತಕ್ಕೆ ನೆಗೆದಿದೆ.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಒಮಾನ್ 20 ಓವರ್ ಆಡಿ 122ಕ್ಕೆ ಆಲೌಟ್ ಆಯಿತು. ಜವಾಬಿತ್ತ ಸ್ಕಾಟ್ಲೆಂಡ್ 17 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 123 ರನ್ ಪೇರಿಸಿತು.
ಸೂಪರ್-12 ಹಂತದಲ್ಲಿ ಸ್ಕಾಟ್ಲೆಂಡ್ 2ನೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾರತ, ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ಎದುರು ಪೈಪೋಟಿ ನಡೆಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.