ಟಿ20 ವಿಶ್ವಕಪ್‌ಗೆ ಎದುರಾಯಿತು ಮಳೆ ಕಾಟ; ಅಭ್ಯಾಸ ಪಂದ್ಯಗಳೆಲ್ಲ ರದ್ದು
ಭಾರತ-ಪಾಕಿಸ್ಥಾನ ಪಂದ್ಯಕ್ಕೂ ಮಳೆ ಭೀತಿ
Team Udayavani, Oct 20, 2022, 7:50 AM IST
ಬ್ರಿಸ್ಬೇನ್: ಬ್ರಿಸ್ಬೇನ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬುಧವಾರದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ಗಳೆಲ್ಲವೂ ಕೊಚ್ಚಿ ಹೋದವು. ಇದರಲ್ಲಿ ಭಾರತ-ನ್ಯೂಜಿಲ್ಯಾಂಡ್ ಮುಖಾಮುಖಿಯೂ ಸೇರಿತ್ತು.
ಬೆಳಗ್ಗಿನ ಅಫ್ಘಾನಿಸ್ಥಾನ-ಪಾಕಿಸ್ಥಾನ ಪಂದ್ಯ 22.2 ಓವರ್‌ಗಳ ಆಟವನ್ನು ಕಂಡಿ ತಾದರೂ ಫಲಿತಾಂಶದಿಂದ ದೂರವೇ ಉಳಿಯಿತು. ಅಪರಾಹ್ನದ ಭಾರತ- ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ- ಬಾಂಗ್ಲಾದೇಶ ಪಂದ್ಯಗಳು ಟಾಸ್ ಕೂಡ ಕಾಣಲಿಲ್ಲ. ಇದರಿಂದ ಶನಿವಾರದಿಂದ ಮೊದಲ್ಗೊಳ್ಳಲಿರುವ ಸೂಪರ್- 12 ಸ್ಪರ್ಧೆಗಳಿಗೆ ಅಭ್ಯಾಸದ ಕೊರತೆ ಎದುರಾದಂತಾಗಿದೆ.
ಭಾರತ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಖ್ಯಾತಿಯ ಆಸ್ಟ್ರೇಲಿಯವನ್ನು 6 ರನ್ನುಗಳಿಂದ ಕೆಡವಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ಉಳಿದವರಿಗೆ ಆಡಲು ಅವಕಾಶ ನೀಡುವುದು ಟೀಮ್ ಇಂಡಿಯಾದ ಉದ್ದೇಶವಾಗಿತ್ತು. ಆದರೆ ಮಳೆಯಿಂದ ಈ ಯೋಜನೆ ತಲೆ ಕೆಳಗಾಯಿತು.
ಇನ್ನೊಂದೆಡೆ ನ್ಯೂಜಿಲ್ಯಾಂಡ್‌ಗೆ ಗೆಲು ವಿನ ಅನಿವಾರ್ಯತೆ ಇತ್ತು. ಮೊದಲ ಅಭ್ಯಾಸ ಪಂದ್ಯದಲ್ಲಿ ಅದು ದಕ್ಷಿಣ ಆಫ್ರಿಕಾ ವಿರುದ್ಧ 98 ರನ್ನಿಗೆ ಕುಸಿದು 9 ವಿಕೆಟ್‌ಗಳ ಸೋಲಿಗೆ ತುತ್ತಾಗಿತ್ತು.
ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ 6 ವಿಕೆಟಿಗೆ 154 ರನ್ ಗಳಿಸಿತ್ತು. ಪಾಕ್ 2.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 19 ರನ್ ಮಾಡಿದ್ದಾಗ ಮಳೆ ಸುರಿಯಿತು. ಪಂದ್ಯ ಇಲ್ಲಿಗೇ ನಿಂತಿತು. ಅಫ್ಘಾನಿಸ್ಥಾನದ 3 ವಿಕೆಟ್ 19 ರನ್ನಿಗೆ ಉದುರಿತ್ತು. ಮೊಹಮ್ಮದ್ ನಬಿ ಕಪ್ತಾನನ ಆಟವಾಡಿ 51 ರನ್ (37 ಎಸೆತ, 5 ಬೌಂಡರಿ, 1 ಸಿಕ್ಸರ್), ಇಬ್ರಾಹಿಂ ಜದ್ರಾನ್ 35 ರನ್ ಹೊಡೆದರು.
ಪಾಕಿಸ್ಥಾನ ಪರ ಶಹೀನ್ ಷಾ ಅಫ್ರಿದಿ ಮತ್ತು ಹ್ಯಾರಿಸ್ ರವೂಫ್ 2 ವಿಕೆಟ್, ಮೊಹಮ್ಮದ್ ನವಾಜ್ ಮತ್ತು ಶದಾಬ್ ಖಾನ್ ಒಂದೊಂದು ವಿಕೆಟ್ ಉರುಳಿಸಿದರು. ಅಫ್ಘಾನ್ ಬೌಲಿಂಗ್ ತೀರಾ ಕಳಪೆಯಾಗಿತ್ತು. ಪಾಕಿಸ್ಥಾನಕ್ಕೆ ನೀಡಿದ 19 ರನ್ನಿನಲ್ಲಿ 13 ವೈಡ್ ಎಸೆತಗಳಿದ್ದವು!
ಮೆಲ್ಬರ್ನ್ ನಲ್ಲಿ ಮಳೆ ಸಾಧ್ಯತೆ
ಶನಿವಾರದಿಂದ ಟಿ20 ವಿಶ್ವಕಪ್ ಪಂದ್ಯಾವಳಿಯ “ಸೂಪರ್-12′ ಸ್ಪರ್ಧೆ ಗಳು ಆರಂಭಗೊಳ್ಳಲಿವೆ. ಇದಕ್ಕೂ ಈಗ ಮಳೆ ಭೀತಿ ಎದುರಾಗಿದೆ.
ರವಿವಾರ ಭಾರತ-ಪಾಕಿಸ್ಥಾನ ನಡುವೆ “ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಈ ಟೂರ್ನಿಯ ಹೈ ವೋಲ್ಟೆàಜ್ ಪಂದ್ಯ ನಡೆಯಲಿದೆ. ಹವಾಮಾನ ಮುನ್ಸೂಚ ನೆಯಂತೆ ಈ ಪಂದ್ಯಕ್ಕೂ ಮಳೆಯ ಕಾಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ಮೆಲ್ಬರ್ನ್ ನಲ್ಲಿ ಶುಕ್ರವಾರದಿಂದ ಮಳೆಯ ಅಬ್ಬರ ಆರಂಭವಾಗಲಿದೆ. ರವಿವಾರದ ಮಳೆ ಸಾಧ್ಯತೆ ಶೇ. 80ರಷ್ಟಿದೆ ಎಂಬುದು ಹವಾಮಾನ ಇಲಾಖೆಯ ವರದಿ. ಅಂದು ರಾತ್ರಿ 7 ಗಂಟೆಗೆ ಭಾರತ-ಪಾಕಿಸ್ಥಾನ ಪಂದ್ಯ ಮೊದಲ್ಗೊಳ್ಳಲಿದೆ.
ಸೂಪರ್-12 ಹಂತದ ಆರಂಭಿಕ ಪಂದ್ಯ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ನಡುವೆ ಶನಿವಾರ ಸಿಡ್ನಿಯಲ್ಲಿ ನಡೆಯ ಲಿದ್ದು, ಈ ಪಂದ್ಯಕ್ಕೂ ಮಳೆಯಿಂದ ಅಡಚಣೆಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.