T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ
ಧೋನಿ ದಾಖಲೆ ಮುರಿದ ಬಾಬರ್ ಅಜಂ
Team Udayavani, Jun 17, 2024, 12:00 AM IST
ಲಾಡರ್‌ಹಿಲ್ (ಫ್ಲೋರಿಡಾ): “ಎ’ ವಿಭಾಗದ ಔಪಚಾರಿಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ಥಾನ ವಿರುದ್ಧ 3 ವಿಕೆಟ್ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ 9 ವಿಕೆಟಿಗೆ 106 ರನ್ ಮಾಡಿತು. ಗುರಿ ಬೆನ್ನಟ್ಟಿದ ಪಾಕ್ ತಿಣುಕಾಡಿತು. ನಾಯಕ ಬಾಬರ್ ಅಜಂ, ಕೊನೆಯ ಹಂತದಲ್ಲಿ ಅಫ್ರಿದಿ ದ್ವಯರು ಬ್ಯಾಟಿಂಗ್ ಮಾಡಿ ಗೆಲುವಿನ ದಡ ಸೇರಿಸಿದರು. ಬಾಬರ್ ಔಟಾಗದೆ 32 ರನ್ ಗಳಿಸಿದರು. ಇದರಿಂದಾಗಿ ಭಾರತದ ದಿಗ್ಗಜ ಬ್ಯಾಟ್ಸ್ ಮ್ಯಾನ್ , ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದ್ದ ದಾಖಲೆ ತನ್ನದಾಗಿಸಿಕೊಂಡರು.
ಟಿ 20 ವಿಶ್ವಕಪ್ ಪಂದ್ಯಗಳಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ತನ್ನದಾಗಿಸಿಕೊಂಡರು. ಬಾಬರ್ 17 ಇನ್ನಿಂಗ್ಸ್ ಗಳಲ್ಲಿ 549 ರನ್ ಗಳಿಸಿದ್ದಾರೆ. ಧೋನಿ 29 ಇನ್ನಿಂಗ್ಸ್ ಗಳಲ್ಲಿ 529 ರನ್ ಗಳಿಸಿದ್ದರು. ಕೇನ್ ವಿಲಿಯಮ್ಸನ್ 19 ಇನ್ನಿಂಗ್ಸ್ ಗಳಲ್ಲಿ 527, ಜಯವರ್ಧನೆ 11 ಇನ್ನಿಂಗ್ಸ್ ಗಳಲ್ಲಿ 360 , ಗ್ರೇಮ್ ಸ್ಮಿತ್ 16 ಇನ್ನಿಂಗ್ಸ್ ಗಳಲ್ಲಿ 352 ರನ್ ಗಳಿಸಿದ್ದಾರೆ.
62 ಕ್ಕೆ 6 ವಿಕೆಟ್ ಕಳೆದು ಕೊಂಡು ಪಾಕ್ ಸಂಕಷ್ಟಕ್ಕೆ ಸಿಲುಕಿತು. ಅಬ್ಬಾಸ್ ಅಫ್ರಿದಿ 17 ರನ್, ಶಾಹೀನ್ ಅಫ್ರಿದಿ ಔಟಾಗದೆ 13 ರನ್ ಗಳಿಸಿ ಗೆಲುವು ತಂದು ಕೊಟ್ಟರು. 18.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು.
ಐರ್ಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟರ್ ಭಾರೀ ವೈಫಲ್ಯ ಅನುಭವಿಸಿದರು. 32 ರನ್ ಆಗುವಷ್ಟರಲ್ಲಿ 6 ವಿಕೆಟ್ ಬಿತ್ತು. ಕೆಳ ಸರದಿಯ ಆಟಗಾರಾದ ಗ್ಯಾರೆತ್ ಡೆಲಾನಿ (ಸರ್ವಾಧಿಕ 31), ಜೋಶುವ ಲಿಟ್ಲ (ಔಟಾಗದೆ 22), ಮಾರ್ಕ್ ಅಡೈರ್ (15) ನಿಂತು ಆಡಿದ ಕಾರಣ ತಂಡದ ಮೊತ್ತ ನೂರರ ಗಡಿ ದಾಟಿತು.
ಅಂತಿಮ ವಿಕೆಟಿಗೆ ಜತೆಗೂಡಿದ ಜೋಶುವ ಲಿಟ್ಲ ಮತ್ತು ಬೆಂಜಮಿನ್ ವೈಟ್ (20 ಎಸೆತಗಳಿಂದ ಅಜೇಯ 5) 26 ರನ್ ಪೇರಿಸುವಲ್ಲಿ ಯಶಸ್ವಿಯಾದರು.
ಪಾಕಿಸ್ಥಾನ ಪರ ಇಮಾದ್ ವಾಸಿಮ್ 8ಕ್ಕೆ 3, ಶಾಹೀನ್ ಅಫ್ರಿದಿ 22ಕ್ಕೆ 3, ಮೊಹಮ್ಮದ್ ಆಮಿರ್ 11ಕ್ಕೆ 2 ವಿಕೆಟ್ ಉರುಳಿಸಿದರು. ಎರಡೂ ತಂಡಗಳು ಈಗಾಗಲೇ ಕೂಟದಿಂದ ನಿರ್ಗಮಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ
MUST WATCH
ಹೊಸ ಸೇರ್ಪಡೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.