T20 World Cup: ಇಂಡಿಯಾ vs ಇಂಗ್ಲೆಂಡ್ :ನಾಕೌಟ್ ನರ್ವಸ್‌ನಿಂದ ಮುಕ್ತವಾಗಲಿ ಭಾರತ
Team Udayavani, Jun 27, 2024, 7:30 AM IST
ಪ್ರೊವಿಡೆನ್ಸ್ (ಗಯಾನಾ): ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ಹೆಚ್ಚು ಶಕ್ತಿಶಾಲಿಯಾಗಿ ಕ್ರೋಢೀಕರಿಸಿರುವ ಭಾರತ ತಂಡ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿ ಸಲು ಸಜ್ಜಾಗಿದೆ. ಉಳಿದಿರುವುದು, ಐಸಿಸಿ ಪಂದ್ಯಾವಳಿಯಲ್ಲಿ ತನ್ನ “ನಾಕೌಟ್ ನಡುಕ’ ವನ್ನು ಹೋಗಲಾಡಿಸಿಕೊಂಡು ಮುಂದು ವರಿಯುವುದು.
ಅಂದಹಾಗೆ ಭಾರತಕ್ಕೆ ಇದೊಂದು ಪ್ರತ್ಯುತ್ತರ ನೀಡುವ ಪಂದ್ಯ. 2022ರ ಕಳೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲೂ ಭಾರತ-ಇಂಗ್ಲೆಂಡ್ ಎದುರಾಗಿದ್ದವು. “ಅಡಿಲೇಡ್ ಓವಲ್’ನಲ್ಲಿ ನಡೆದ ಈ ಮುಖಾಮುಖೀಯಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳಿಂದ ಭರ್ಜರಿಯಾಗಿ ರೋಹಿತ್ ಪಡೆಯನ್ನು ಮಗುಚಿತ್ತು. ಭಾರತ 6 ವಿಕೆಟಿಗೆ 168 ರನ್ ಗಳಿಸಿದರೆ, ಇಂಗ್ಲೆಂಡ್ 16 ಓವರ್‌ಗಳಲ್ಲಿ ನೋಲಾಸ್ 170 ರನ್ ಬಾರಿಸಿ ಪ್ರಶಸ್ತಿ ಸುತ್ತಿಗೆ ಮುನ್ನುಗ್ಗಿತ್ತು.
ಭುವನೇಶ್ವರ್, ಅರ್ಷದೀಪ್, ಅಕ್ಷರ್, ಶಮಿ, ಅಶ್ವಿನ್, ಪಾಂಡ್ಯ ಅವರನ್ನೊಳಗೊಂಡ ಭಾರತದ ಬೌಲಿಂಗ್ ಪಡೆಗೆ ಆಂಗ್ಲರ ಒಂದೇ ಒಂದು ವಿಕೆಟ್ ಕೂಡ ಉರುಳಿಸಲಾಗಿರಲಿಲ್ಲ. ಇದು ಐಸಿಸಿ ಟೂರ್ನಿಯಲ್ಲಿ ಟೀಮ್ ಇಂಡಿಯಾಕ್ಕೆ ಎದುರಾದ ಅತ್ಯಂತ ಶೋಚನೀಯ ಸೋಲಾಗಿತ್ತು. ಈಗ ಮತ್ತೆ ರೋಹಿತ್-ಬಟ್ಲರ್ ಪಡೆಗಳು ಎದುರಾಗಿವೆ. ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಅನುಭವಿಸಿದ ಸೋಲಿಗೆ ಕೆರಿಬಿಯನ್ ನಾಡಿನಲ್ಲಿ ಸೇಡು ತೀರಿಸಿಕೊಂಡು ಹೊರದಬ್ಬಿದ ಭಾರತವೀಗ, ಕ್ರಿಕೆಟ್ ಜನಕರಿಗೂ ಜಬರ್ದಸ್ತ್ ಆಘಾತವೊಂದನ್ನು ನೀಡಬೇಕಾಗಿದೆ. ಲೀಗ್ ಹಾಗೂ ಸೂಪರ್-8 ಹಂತದ ಲಯದಲ್ಲೇ ಸಾಗಿದರೆ ಟೀಮ್ ಇಂಡಿಯಾದ ಮೇಲುಗೈಯನ್ನು ನಿರೀಕ್ಷಿಸಲಡ್ಡಿಯಿಲ್ಲ.
ವಿರಾಟ್ ಕೊಹ್ಲಿಯದೇ ಚಿಂತೆ
ಅಜೇಯವಾಗಿ ಉಪಾಂತ್ಯಕ್ಕೆ ಬಂದಿರುವ ಭಾರತದ ಏಕೈಕ ಚಿಂತೆಯೆಂದರೆ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್. ಐಪಿಎಲ್‌ನಲ್ಲಿ ರನ್ ಪ್ರವಾಹ ಹರಿಸಿದ ಅವರು ವಿಶ್ವಕಪ್‌ನಲ್ಲಿನ್ನೂ ಗುಣಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಸಹಜವಾಗಿಯೇ ಇದು ಅಗ್ರ ಕ್ರಮಾಂಕದ ಮೇಲೆ ಒತ್ತಡ ತರುತ್ತಿದೆ. ಆದರೆ ಆಸ್ಟ್ರೇಲಿಯ ವಿರುದ್ಧ 41 ಎಸೆತಗಳಲ್ಲಿ 92 ರನ್ ಬಾರಿಸಿ ಸಿಡಿದು ನಿಂತ ರೋಹಿತ್ ಶರ್ಮ ಇಂಗ್ಲೆಂಡ್ ಪಾಲಿನ ಎಚ್ಚರಿಕೆಯ ಗಂಟೆಯಾಗಿದ್ದಾರೆ. ಬಹುಶಃ ಇದು ರೋಹಿತ್-ಕೊಹ್ಲಿ ಜೋಡಿಗೆ ಕೊನೆಯ ವಿಶ್ವಕಪ್ ಆಗಿರುವ ಕಾರಣ ಸ್ಮರಣೀಯಗೊಳಿಸಬೇಕಾದ ಅಗತ್ಯವಿದೆ.
ರಿಷಭ್ ಪಂತ್ ಒನೌಡೌನ್‌ಗೆ ಫಿಟ್ ಆದಂತಿದೆ. ಸೂರ್ಯ ಕುಮಾರ್ ಹೊಡೆತ ಗಳ ಆಯ್ಕೆ ಯಲ್ಲಿ ಎಚ್ಚರ ವಹಿಸ ಬೇಕಿದೆ. ದುಬೆ ಅವರೀಗ ತಮ್ಮ ವಿರುದ್ಧದ ಟೀಕೆಗಳಿಗೆಲ್ಲ ಬ್ಯಾಟ್‌ನಿಂದಲೇ ಉತ್ತರ ನೀಡ ತೊಡಗಿ ದ್ದಾರೆ. ಪಾಂಡ್ಯ ಆಪತಾºಂಧವನ ಪಾತ್ರ ವಹಿಸುತ್ತಲೇ ಬಂದಿ ದ್ದಾರೆ. ಆದರೆ ಜಡೇಜ ಅವರ ಆಲ್‌ರೌಂಡ್ ಪ್ರದರ್ಶನ ಸಾಲದು.
ಭಾರತದ ಬೌಲಿಂಗ್ ಓಕೆ. ಐಪಿಎಲ್‌ನಲ್ಲಿ ದುಬಾರಿಯಾದವರಿಗೆ ಈ ವಿಶ್ವಕಪ್ ದೊಡ್ಡ ರಿಲ್ಯಾಕ್ಸ್ ಕೊಟ್ಟಿದೆ. ಬುಮ್ರಾ ಅವ ರದು ಸೂಪರ್ ಶೋ. ಅರ್ಷದೀಪ್ ಕೆಲ ವೊಮ್ಮೆ ಎರ್ರಾಬಿರ್ರಿ ಯಾದರೂ ಬ್ರೇಕ್ ಕೊಡು ವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅಕ್ಷರ್, ಕುಲದೀಪ್ ಅವರ ಸ್ಪಿನ್ ಧಾರಾಳ ಯಶಸ್ಸು ಕಾಣುತ್ತಿದೆ. ಹೀಗಾಗಿ ಚಹಲ್ ಆಡುವ ಸಾಧ್ಯತೆ ಇಲ್ಲ. ಪ್ರಯೋಗಕ್ಕೆ ಇದು ಸಮಯವೂ ಅಲ್ಲ.
ಇಂಗ್ಲೆಂಡ್‌ಗೆ ಅದೃಷ್ಟದ ಬಲ
ಇಂಗ್ಲೆಂಡ್ ಅದೃಷ್ಟ ಬಲದಿಂದ ಮುನ್ನಡೆ ಕಾಣುತ್ತ ಬಂದ ತಂಡ. ಸ್ಕಾಟ್ಲೆಂಡ್ ಎದುರಿನ ಪಂದ್ಯ ಮಳೆಯಿಂದ ರದ್ದಾದದ್ದು, ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಕ್ಕೆ ಶರಣಾದದ್ದು ಬಟ್ಲರ್ ಬಳಗಕ್ಕೆ ಕಂಟಕವಾಗಿ ಕಾಡಿತ್ತು. ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಶರಣಾಯಿತು. ಆದರೆ ಲಕ್ ಕೈಬಿಡಲಿಲ್ಲ. ಇದು ಸೆಮಿಫೈನಲ್‌ನಲ್ಲೂ ಜತೆಯಾಗಿ ಇದ್ದೀತೇ? ನಿರೀಕ್ಷೆ ಸಹಜ.
ಆರಂಭಿಕರಾದ ಬಟ್ಲರ್- ಸಾಲ್ಟ್ ಉತ್ತಮ ಲಯ ದಲ್ಲಿದ್ದಾರೆ. ಬ್ರೂಕ್ ಕೂಡ ಅಪಾಯಕಾರಿ. ಬೇರ್‌ಸ್ಟೊ, ಅಲಿ, ಲಿವಿಂಗ್ ಸ್ಟೋನ್, ಕರನ್ ಅವ ರಿಂದ ಇನ್ನೂ ಹೆಚ್ಚಿನ ಪ್ರದರ್ಶನವನ್ನು ನಿರೀಕ್ಷಿಸ ಲಾಗಿದೆ. ಬಿಗ್ ಹಿಟ್ಟರ್ ವಿಲ್ ಜಾಕ್ಸ್ ರೇಸ್‌ನಲ್ಲಿದ್ದಾರೆ.
ಇಂಗ್ಲೆಂಡ್ ಬೌಲಿಂಗ್ ವಿಭಾಗಕ್ಕೆ ಕ್ರಿಸ್ ಜೋರ್ಡನ್ ಅವರ ಹ್ಯಾಟ್ರಿಕ್ ಹೆಚ್ಚಿನ ಶಕ್ತಿ ತುಂಬಿದೆ. ಆರ್ಚರ್, ಟಾಪ್ಲಿ, ರಶೀದ್ ಇದ ರಿಂದ ಸ್ಫೂರ್ತಿ ಪಡೆಯ ಬಹುದು.
ಸ್ಪರ್ಧಾತ್ಮಕ ಪಿಚ್
ಜೂ. 8ರ ಬಳಿಕ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯ ನಡೆದಿಲ್ಲ. ಅಂದಿನ ಹಗಲು ಪಂದ್ಯ ದಲ್ಲಿ ವೆಸ್ಟ್ ಇಂಡೀಸ್ ಉಗಾಂಡವನ್ನು ಉರುಳಿಸಿತ್ತು. ಹೀಗಾಗಿ ಈ ಮಹತ್ವದ ಪಂದ್ಯಕ್ಕೆ ಸ್ಪರ್ಧಾತ್ಮಕ ಪಿಚ್ ರೂಪಿಸಲು ಧಾರಾಳ ಅವಕಾಶ ಲಭಿಸಿದೆ.
ಪಂದ್ಯಕ್ಕೆ ಮಳೆ ಭೀತಿ
ಈ ಪಂದ್ಯಕ್ಕೆ ಮಳೆ ಭೀತಿ ಇದೆ. ಸ್ಪಷ್ಟ ಫಲಿತಾಂಶಕ್ಕೆ ಕನಿಷ್ಠ 10 ಓವರ್‌ಗಳ ಆಟ ನಡೆಯಬೇಕಿದೆ. ಹೆಚ್ಚುವರಿ ಸಮಯದ ಹೊರತಾಗಿಯೂ ಪಂದ್ಯ ರದ್ದುಗೊಂಡರೆ ಸೂಪರ್-8 ಮುನ್ನಡೆಯ ಆಧಾರದಲ್ಲಿ ಭಾರತ ಫೈನಲ್ ಪ್ರವೇಶಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.