ಸೂಪರ್-12 ಹಂತಕ್ಕೆ ಶ್ರೀಲಂಕಾ, ನೆದರ್ಲೆಂಡ್ಸ್
Team Udayavani, Oct 20, 2022, 6:38 AM IST
ಗೀಲಾಂಗ್: ಟಿ20 ವಿಶ್ವಕಪ್ “ಎ’ ವಿಭಾಗದ ಅರ್ಹತಾ ಸುತ್ತಿನ ಮುಖಾಮುಖೀಯಲ್ಲಿ ಗುರುವಾರ ಅಚ್ಚರಿಯೊಂದು ಸಂಭವಿಸಿತು. ಶ್ರೀಲಂಕಾದ ಜತೆಗೆ ಇವರೆದುರು ಪರಾಭವಗೊಂಡ ನೆದರ್ಲೆಂಡ್ಸ್ ಕೂಡ ಸೂಪರ್-12 ಹಂತವನ್ನು ಪ್ರವೇಶಿಸಿತು. ನಮೀಬಿಯಾ ಮತ್ತು ಯುಎಇ ಹೊರಬಿದ್ದವು.
ಸೂಪರ್-12 ಹಂತದಲ್ಲಿ ಶ್ರೀಲಂಕಾ ಗ್ರೂಪ್ ಒಂದರಲ್ಲಿ ಹಾಗೂ ನೆದರ್ಲೆಂಡ್ಸ್ ಗ್ರೂಪ್ ಎರಡರಲ್ಲಿ ಆಡಲಿವೆ.
“ಮಸ್ಟ್ ವಿನ್’ ಮುಖಾಮುಖೀಯಲ್ಲಿ ಶ್ರೀಲಂಕಾ 16 ರನ್ನುಗಳಿಂದ ನೆದರ್ಲೆಂಡ್ಸ್‌ಗೆ ಸೋಲುಣಿಸಿತು. ಇದರಿಂದ ಲಂಕಾ ಅಂಕ 4ಕ್ಕೆ ಏರಿದ್ದರಿಂದ ಮತ್ತು ರನ್‌ರೇಟ್ ಪ್ಲಸ್‌ನಲ್ಲಿ ಇದ್ದುದರಿಂದ (+0.667) ಅದು ಮುಂದಿನ ಸುತ್ತಿಗೆ ನೆಗೆಯಿತು.
ಸೋತರೂ ನೆದರ್ಲೆಂಡ್ಸ್ ದ್ವಿತೀಯ ಸ್ಥಾನಿಯಾಯಿತು (4 ಅಂಕ, -0.162 ರನ್‌ರೇಟ್). ಆದರೆ ಸೂಪರ್-12 ಅಧಿಕೃತಗೊಂಡಿರಲಿಲ್ಲ. ಅದು ನಮೀಬಿಯಾ-ಯುಎಇ ನಡುವಿನ ಫಲಿತಾಂಶವನ್ನು ಕಾಯಬೇಕಿತ್ತು.
ಇಲ್ಲಿ ಯುಎಇ 7 ರನ್ನುಗಳ ರೋಚಕ ಜಯ ಸಾಧಿಸಿತು. ಇದು ಯುಎಇಗೆ ಒಲಿದ ಮೊದಲ ಜಯ. ಆದರೆ ಇಲ್ಲಿ ನಮೀಬಿಯಾ ಜಯಿಸಿದ್ದೇ ಆದರೆ ಉತ್ತಮ ರನ್‌ರೇಟ್ ಲೆಕ್ಕಾಚಾರದಲ್ಲಿ ಅಗ್ರಸ್ಥಾನಿಯಾಗಿ ಸೂಪರ್-12 ಸುತ್ತಿಗೆ ನೆಗೆಯುತ್ತಿತ್ತು. ಆಗ ನೆದರ್ಲೆಂಡ್ಸ್ ಹೊರಬೀಳುತ್ತಿತ್ತು. ನಮೀಬಿಯಾದ ಆಸೆಗೆ ಯುಎಇ ತಣ್ಣೀರೆರಚಿತು. ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 55 ರನ್ನುಗಳಿಂದ ಕೆಡವಿದ್ದಷ್ಟೇ ನಮೀಬಿಯಾದ ಸಾಧನೆ ಎನಿಸಿತು.
ಆಪತ್ಭಾಂಧವ ಮೆಂಡಿಸ್:
ಶ್ರೀಲಂಕಾ ಮೊದಲು ಬ್ಯಾಟಿಂಗ್ ನಡೆಸಿ 6 ವಿಕೆಟಿಗೆ 162 ರನ್ ಪೇರಿಸಿತು. ಜವಾಬಿತ್ತ ಡಚ್ಚರ ಪಡೆ 9 ವಿಕೆಟ್ ಕಳೆದುಕೊಂಡು 146 ರನ್ ಮಾಡಿ ಶರಣಾಯಿತು.
ಅಂತಿಮ ಓವರ್ ತನಕ ಕ್ರೀಸ್ ಆಕ್ರಮಿಸಕೊಂಡ ಆರಂಭಕಾರ ಕುಸಲ್ ಮೆಂಡಿಸ್ 44 ಎಸೆತಗಳಿಂದ 79 ರನ್ ಹೊಡೆದು ಲಂಕಾ ಪಾಲಿನ ಆಪತಾºಂಧವರಾದರು (5 ಬೌಂಡರಿ, 5 ಸಿಕ್ಸರ್).
ಚೇಸಿಂಗ್ ವೇಳೆ ನೆದರ್ಲೆಂಡ್ಸ್ ಓಪನರ್ ಮ್ಯಾಕ್ಸ್ ಒಡೌಡ್ ಅಜೇಯ 71 ರನ್ (53 ಎಸೆತ, 6 ಬೌಂಡರಿ, 3 ಸಿಕ್ಸರ್) ಮಾಡಿದರೂ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫಲರಾದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-6 ವಿಕೆಟಿಗೆ 162 (ಮೆಂಡಿಸ್ 79, ಅಸಲಂಕ 31, ಮೀಕೆರೆನ್ 25ಕ್ಕೆ 2, ಲೀಡ್ 31ಕ್ಕೆ 2). ನೆದರ್ಲೆಂಡ್ಸ್-9 ವಿಕೆಟಿಗೆ 146 (ಒಡೌಡ್ ಔಟಾಗದೆ 71, ಎಡ್ವರ್ಡ್ಸ್ 21, ಹಸರಂಗ 28ಕ್ಕೆ 3, ತೀಕ್ಷಣ 32ಕ್ಕೆ 2).
ಪಂದ್ಯಶ್ರೇಷ್ಠ: ಕುಸಲ್ ಮೆಂಡಿಸ್.
ನಮೀಬಿಯಾವನ್ನು ಹೊರದಬ್ಬಿದ ಯುಎಇ :
ಮೊದಲ ಎರಡೂ ಪಂದ್ಯಗಳನ್ನು ಸೋತ ಬಳಿಕ ಎದ್ದು ನಿಂತ ಯುಎಇ 7 ರನ್ನುಗಳಿಂದ ನಮೀಬಿಯಾವನ್ನು ಮಣಿಸಿತು. ಇದರಿಂದ ಯುಎಇಗೆ ಯಾವುದೇ ಲಾಭವಾಗಲಿಲ್ಲ, ಆದರೆ ಅದು ಸೂಪರ್-12 ಕನಸಿನಲ್ಲಿ ವಿಹರಿಸುತ್ತಿದ್ದ ನಮೀಬಿಯಾವನ್ನು ಕೂಟದಿಂದ ಹೊರದಬ್ಬಿತು.
ಯುಎಇ 3 ವಿಕೆಟ್ ನಷ್ಟಕ್ಕೆ 148 ರನ್ ಹೊಡೆದರೆ, ನಮೀಬಿಯಾ 8 ವಿಕೆಟಿಗೆ 141ರ ತನಕ ಬಂದು ಶರಣಾಯಿತು. ಕೊನೆಯಲ್ಲಿ ಡೇವಿಡ್ ವೀಸ್ (55) ಮತ್ತು ರುಬೆನ್ ಟ್ರಂಪಲ್‌ಮಾÂನ್ (ಅಜೇಯ 25) ಸಿಡಿದು ನಿಂತರೂ ಗೆಲುವು ಸ್ವಲ್ಪದರಲ್ಲೇ ಕೈಕೊಟ್ಟಿತು.
ಸಂಕ್ಷಿಪ್ತ ಸ್ಕೋರ್: ಯುಎಇ-3 ವಿಕೆಟಿಗೆ 148 (ಮುಹಮ್ಮದ್ ವಾಸಿಮ್ 50, ರಿಜ್ವಾನ್ ಔಟಾಗದೆ 43, ಬಾಸಿಲ್ ಹಮೀದ್ ಔಟಾಗದೆ 25, ಬೆನ್ ಶಿಕೊಂಗೊ 8ಕ್ಕೆ 1). ನಮೀಬಿಯಾ-8 ವಿಕೆಟಿಗೆ 141 (ವೀಸ್ 55, ಟ್ರಂಪಲ್‌ಮಾÂಬ್ ಔಟಾಗದೆ 25, ಬಾಸಿಮ್ ಹಮೀದ್ 17ಕ್ಕೆ 2, ಝಹೂರ್ ಖಾನ್ 20ಕ್ಕೆ 2). ಪಂದ್ಯಶ್ರೇಷ್ಠ: ಮುಹಮ್ಮದ್ ವಾಸೀಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.