T20 World Cup; ದ. ಆಫ್ರಿಕಾ-ಅಮೆರಿಕ ಎಂಟರ ಆಟ; ಇಂದಿನಿಂದ ಸೂಪರ್‌-8

Team Udayavani, Jun 19, 2024, 7:07 AM IST

t20 world cup; usa facing south africa in super 8 clash

ನಾರ್ತ್‌ ಸೌಂಡ್‌ (ಆ್ಯಂಟಿಗುವಾ): ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ದ್ವಿತೀಯ ಸುತ್ತಿನ ಸ್ಪರ್ಧೆಗೆ ಕ್ಷಣಗಣನೆ ಮೊದಲ್ಗೊಂಡಿದೆ. ಲೀಗ್‌ ಹಂತದಿಂದ ಮೇಲೇರಿ ಬಂದ 8 ತಂಡಗಳ ನಡುವಿನ “ಸೂಪರ್‌-8′ ಸಮರ ಬುಧವಾರದಿಂದ ವೆಸ್ಟ್‌ ಇಂಡೀಸ್‌ನಲ್ಲಿ ಆರಂಭಗೊಳ್ಳಲಿದೆ. ಇದೇ ಮೊದಲ ಸಲ ವಿಶ್ವಕಪ್‌ನಲ್ಲಿ ಪಾಲ್ಗೊಂಡು ದ್ವಿತೀಯ ಸುತ್ತಿಗೇರಿದ ಖುಷಿಯಲ್ಲಿರುವ ಅಮೆರಿಕ ಮತ್ತು ಬ್ಯಾಟಿಂಗ್‌ ಚಿಂತೆಯಲ್ಲಿರುವ ದಕ್ಷಿಣ ಆಫ್ರಿಕಾ ತಂಡಗಳು ಮೊದಲ ಪಂದ್ಯದಲ್ಲಿ ಎದುರಾಗಲಿವೆ.

ಬೇರೆ ಬೇರೆ ರಾಷ್ಟ್ರಗಳ ಪ್ರತಿಭಾ ನ್ವಿತ ಆಟಗಾರರನ್ನು ಹೊಂದಿರುವ ಅಮೆರಿಕ “ಎ’ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿ ಮೂಡಿಬಂದ ತಂಡ. ಉದ್ಘಾಟನ ಪಂದ್ಯದಲ್ಲಿ ಕೆನಡಾವನ್ನು 7 ವಿಕೆಟ್‌ಗಳಿಂದ ಮಣಿಸಿದ ಬಳಿಕ, ನೆಚ್ಚಿನ ಪಾಕಿಸ್ಥಾನವನ್ನು ಸೂಪರ್‌ ಓವರ್‌ನಲ್ಲಿ ಮಣ್ಣು ಮುಕ್ಕಿಸಿದ್ದು ಅಮೆರಿಕದ ಪರಾಕ್ರಮಕ್ಕೆ ಸಾಕ್ಷಿ.

ಲೀಗ್‌ನಲ್ಲಿ ಯುಎಸ್‌ಎಯ “ಅಗ್ರೆಸ್ಸೀವ್‌ ಬ್ರ್ಯಾಂಡ್‌ ಆಫ್ ಕ್ರಿಕೆಟ್‌’ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಆದರಿನ್ನು ತವರಿನಾಚೆ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಮುಖ್ಯ. ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಿದ ಮೊನಾಂಕ್‌ ಪಟೇಲ್‌ ಪಡೆಯಿನ್ನು ವೆಸ್ಟ್‌ ಇಂಡೀಸ್‌ ಪಿಚ್‌ಗಳಿಗೆ ಹೊಂದಿಕೊಳ್ಳಬೇಕಿದೆ.

“ಸೂಪರ್‌-8 ಸವಾಲನ್ನು ನಾವು ಕಾತರದಿಂದ ಎದುರು ನೋಡು ತ್ತಿದ್ದೇವೆ. ಕಳೆದ ಎರಡು ವಾರಗಳಿಂದ ನಮ್ಮ ಆಟ ಎಲ್ಲರ ಗಮನ ಸೆಳೆದಿತ್ತು. ಐಸಿಸಿಯ ಫ‌ುಲ್‌ ಮೆಂಬರ್‌ ತಂಡಗಳನ್ನು ಸೋಲಿ ಸಲು ಇದು ಸ್ಫೂರ್ತಿ ಆಗಲಿದೆ’ ಎಂಬುದಾಗಿ ಯುಎಸ್‌ಎ ಉಪನಾಯಕ, ಬಿಗ್‌ ಹಿಟ್ಟರ್‌ ಆರನ್‌ ಜೋನ್ಸ್‌ ಹೇಳಿದ್ದಾರೆ.

ನಾಯಕ ಮೊನಾಂಕ್‌ ಪಟೇಲ್‌ ಗಾಯಾಳಾದ ಕಾರಣ ಭಾರತ ಹಾಗೂ ಐರ್ಲೆಂಡ್‌ ವಿರುದ್ಧ ಆಡಿರಲಿಲ್ಲ. ಸೂಪರ್‌-8ನಲ್ಲಿ ಮರಳಿ ತಂಡವನ್ನು ಮುನ್ನಡೆಸಲಿದ್ದಾರೆ. ಅಮೆರಿಕದ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಿದ ಸೌರಭ್‌ ನೇತ್ರಾವಲ್ಕರ್‌, ನೋಸ್ತುಶ್‌ ಕೆಂಜಿಗೆ, ಹರ್ಮೀತ್‌ ಸಿಂಗ್‌, ಕೋರಿ ಆ್ಯಂಡರ್ಸನ್‌, ಸ್ಟೀವನ್‌ ಟೇಲರ್‌ ಅವರೆಲ್ಲ ಇದೇ ಲಯದಲ್ಲಿ ಸಾಗಿದರೆ ಸ್ಪರ್ಧೆ ರೋಚಕಗೊಳ್ಳಲಿದೆ.

ಇನ್ನೂ 120ರ ಗಡಿ ದಾಟಿಲ್ಲ

ದಕ್ಷಿಣ ಆಫ್ರಿಕಾ ಬೌಲಿಂಗ್‌ನಲ್ಲಿ ಮಿಂಚಿದರೂ ಬ್ಯಾಟಿಂಗ್‌ನಲ್ಲಿ ಪರದಾಡುತ್ತ ಬಂದಿದೆ. ಕ್ವಿಂಟನ್‌ ಡಿ ಕಾಕ್‌, ರೀಝ ಹೆಂಡ್ರಿಕ್ಸ್‌, ಹೆನ್ರಿಚ್‌ ಕ್ಲಾಸೆನ್‌, ಟ್ರಿಸ್ಟನ್‌ ಸ್ಟಬ್ಸ್, ಡೇವಿಡ್‌ ಮಿಲ್ಲರ್‌, ಐಡನ್‌ ಮಾರ್ಕ್‌ರಮ್‌ ಇನ್ನೂ ಫ‌ುಲ್‌ ಜೋಶ್‌ ತೋರಿಲ್ಲ. ಲೀಗ್‌ನಲ್ಲಿ 120ರ ಗಡಿಯನ್ನೇ ದಾಟಿಲ್ಲ ಎಂಬುದು ಹರಿಣಗಳ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಾಕ್ಷಿ. ನೇಪಾಲ ವಿರುದ್ಧ ಸೋಲಿನ ದವಡೆಯಿಂದ ಬಚಾವಾಗಿ ಬಂದ ತಂಡವಿದು. ಗೆಲುವಿನ ಅಂತರ ಒಂದೇ ರನ್‌! ವಿಂಡೀಸ್‌ ಟ್ರ್ಯಾಕ್‌ಗಳಲ್ಲಿ ರನ್‌ ಹರಿವು ಇರುವುದರಿಂದ ಹರಿಣಗಳ ಪಡೆಯ ಬ್ಯಾಟಿಂಗ್‌ ಕ್ಲಿಕ್‌ ಆದೀತೆಂಬ ನಿರೀಕ್ಷೆ ಇರಿಸಿ ಕೊಳ್ಳಬಹುದು.

ದಕ್ಷಿಣ ಆಫ್ರಿಕಾ ಬೌಲಿಂಗ್‌ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಕೂಟಕ್ಕೂ ಮುನ್ನ ವೇಗಿ ಆ್ಯನ್ರಿಚ್‌ ನೋರ್ಜೆ ಅವರ ಫಾರ್ಮ್ ಬಗ್ಗೆ ಅನುಮಾನವಿತ್ತು. ಆದರೆ ಅವರೀಗ ಘಾತಕವಾಗಿ ಪರಿಣಮಿಸಿದ್ದಾರೆ. ರಬಾಡ, ಶಮಿÕ, ಮಹಾರಾಜ್‌, ಜಾನ್ಸೆನ್‌ ಅವರೆಲ್ಲರ ಆಕ್ರಮಣ ಮುಂದುವರಿದರೆ ಅಮೆರಿಕದ ಹಾದಿ ಕಠಿನವಾದೀತು.

ಟಾಪ್ ನ್ಯೂಸ್

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

shivamogga

Shimoga; ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ಸಚಿವ ಕುಮಾರಸ್ವಾಮಿ ಭೇಟಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

5-kushtagi

Kushtagi: ಕಳೆದೆರೆಡು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿ ಸೆರೆ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.