ಭಾರತದ ಬದಲು ಯುಎಇ ನಲ್ಲಿ ಟಿ20 ವಿಶ್ವಕಪ್: ಮಿನಿಸಮರ ಆರಂಭದ ದಿನಾಂಕ ಪ್ರಕಟ
Team Udayavani, Jun 26, 2021, 8:30 AM IST
ಮುಂಬೈ: ಭಾರತದಲ್ಲಿ ನಡೆಯಬೇಕಿದ್ದ ಟಿ20 ಮಾದರಿಯ ವಿಶ್ವಕಪ್ ಕೂಟ ಇದೀಗ ಯುನೈಟೆಟ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರವಾಗಿದೆ. ಕೂಟ ಯುಎಇನಲ್ಲಿ ನಡೆದರೂ ಕೂಟದ ಎಲ್ಲಾ ಹಕ್ಕುಗಳು ಬಿಸಿಸಿಐ ಬಳಿಯೇ ಇರಲಿದೆ.
ಟಿ20 ವಿಶ್ವಕಪ್ ಕೂಟವು ಅಕ್ಟೋಬರ್ 17ರಂದು ಆರಂಭವಾಗಲಿದ್ದು, ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:ಒಲಿಂಪಿಕ್ಸ್‌ನಲ್ಲಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನ
ಭಾರತದಲ್ಲಿ ಕೋವಿಡ್ 19 ಸೋಂಕಿನ ಸಂಕಟ ಇನ್ನೂ ಕಡಿಮೆಯಾಗದ ಕಾರಣ ಬಿಸಿಸಿಐ ದೇಶದ ಹೊರಗಡೆ ಕೂಟವನ್ನು ನಡೆಸಲು ತೀರ್ಮಾನಿಸಿದೆ. ಈ ಬಗ್ಗೆ ಐಸಿಸಿ ಬಳಿ ಒಂದು ತಿಂಗಳ ಸಮಯಾವಕಾಶ ಪಡೆದಿದ್ದ ಬಿಸಿಸಿಐ, ಇದೀಗ ಯುಎಇ ನಲ್ಲಿ ಕೂಟ ನಡೆಸಲು ತೀರ್ಮಾನಿಸಿದೆ.
ವಿಶ್ವಕಪ್ ಕೂಟ ಆಯೋಜನೆಯ ಹಕ್ಕು ಬಿಸಿಸಿಐ ಬಳಿ ಇರುವ ಕಾರಣ ಕೂಟ ಬಿಸಿಸಿಐ ಆಯೋಜನೆಯಲ್ಲಿಯೇ ನಡೆಯಲಿದೆ. ಪಂದ್ಯಾವಳಿ ಎಲ್ಲಿ ನಡೆದರೂ ಕೂಟದ ಆಯೋಜಕರೂ ಬಿಸಿಸಿಐ ಆಗಿರಲಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.
ಕೋವಿಡ್ ಕಾರಣದಿಂದ ಅರ್ಧದಲ್ಲಿ ಸ್ಥಗಿತವಾಗಿರುವ ಐಪಿಎಲ್ ಕೂಟ ಯುಎಇ ನಲ್ಲಿ ನಡೆಯಲಿದೆ. ಸಪ್ಟೆಂಬರ್ 19ರಿಂದ ಅಕ್ಟೋಬರ್ 15ರವರೆಗೆ ಐಪಿಎಲ್ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.